ಯುಗಾದಿ “ಕವನ ಸಂಕಲನ ಬಿಡುಗಡೆ ಸಮಾರಂಭ

ಜನವರಿ ೧೫ , ೨೦೨೩ ಭಾನುವಾರದಂದು ಸ್ನೇಹ ಜೀವಿ ಬಳಗದ ಸಂಕ್ರಾಂತಿ ಸಂಭ್ರಮದಲ್ಲಿ ಚನ್ನಕೇಶವ ಜಿ ಲಾಳನಕಟ್ಟೆ ಅವರ “ಯುಗಾದಿ” ಕವನ ಸಂಕಲನ ಬಿಡುಗಡೆಯಾಯಿತು, ಅದರ ಕುರಿತು ಲೇಖಕರ ಒಂದಷ್ಟು ಅಭಿಪ್ರಾಯ ತಪ್ಪದೆ ಓದಿ….

ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಯುತ ಶಶಿಕಾಂತ್ ರಾವ್ ಅಣ್ಣನವರು ವಹಿಸಿಕೊಂಡಿದ್ದರು. ಶ್ರೀಯುತ ಶಶಿಕಾಂತ್ ಅಣ್ಣನವರು ಒಬ್ಬ ವ್ಯಕ್ತಿಯಂತೆ ಕಾಣಲಿಲ್ಲ, ಅವರು ಶಕ್ತಿಯಂತೆ ಕಂಗೊಳಿಸಿದರು.

“ದಿನಕರನಿರಲಿಲ್ಲ ಮುಗಿಲಿನಲಿ
ಬೆಳಗುತಿದ್ದ ಇಳಿದು
ಅಕ್ಕಮಹಾದೇವಿ ಸಭಾಂಗಣದಲ್ಲಿ.”

ಇಡೀ ಕಾರ್ಯಕ್ರಮವನ್ನು ಅವರು ಆಯೋಜಿಸಿದ್ದ ರೀತಿ ಬೆರಗುಗೊಳಿಸುವಂತಿತ್ತು. ಇರುಳಿನೊಳು ಶಶಿಯರಳಿ ಬೆಳಗುವಂತೆ ಬುವಿಯಲ್ಲಿ ಶಶಿಕಾಂತ್ ಅಣ್ಣ, ಅಕ್ಕಮಹಾದೇವಿ ಅಂಗಳದಲ್ಲಿ ಹೊಳೆಯುತಿದ್ದರು.

ಸಂಕ್ರಾಂತಿ ಸಂಭ್ರಮ, ವಿಚಾರ ಸಂಕಿರಣ, ಆರು ಪುಸ್ತಕಗಳ ಲೋಕಾರ್ಪಣೆ, ಕವಿಗೋಷ್ಟಿ, ಇವಿಷ್ಟೂ ಕಾರ್ಯಕ್ರಮಗಳನ್ನು ಒಟ್ಟಿಗೇ ಆಯೋಜನೆ ಮಾಡಿ ದಿನದ ಕ್ಷಣ ಕ್ಷಣವನ್ನೂ ಸುವರ್ಣ ಘಳಿಗೆಗಳನ್ನಾಗಿ ಉಪಯೋಗಿಸಿದ ಪರಿ ಬಣ್ಣಿಸಲಸದಳ.

ಶ್ರೀ ಶ್ರೀ ಶ್ರೀ ಸಾದ್ವಿ ಯೋಗಿನಿ ಮಾತಾಜಿಯವರ ದಿವ್ಯ ಚರಣ ಸ್ಪರ್ಷದಿಂದ ಸಂಕ್ರಾಂತಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆತು ಸರಿಯಾಗಿ ಒಂಬತ್ತು ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು.ಶ್ರೀಯುತ ಸತೀಶ್ ಜವರೇಗೌಡ ಸರ್ ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ವ ಅತಿಥಿಗಳ ಜೊತೆ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು ಹಾಗು ಉದ್ಘಾಟನಾ ಭಾಷಣದ ಮೂಲಕ ತಮ್ಮ ಮಾತಿನ ವೈಖರಿಯಿಂದ ಎಲ್ಲರನ್ನೂ ಸೆಳೆಯುವ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಅತಿಥಿಗಳಾಗಿ
ಶ್ರೀ ಪಾಲನೇತ್ರ ಅಧ್ಯಕ್ಷರು. ಕರ್ನಾಟಕ ವಿಚಾರ ವೇದಿಕೆ ಬೆಂಗಳೂರು,
ಶ್ರೀ ಬಿ. ನಾಗೇಶ್. ಅಧ್ಯಕ್ಷರು ಜಾಗೃತಿ ಟ್ರಸ್ಟ್,
ಶ್ರೀ ಪ್ರಸಾದ್ ಕುಲಕರ್ಣಿ. ಲೇಖಕರು ಸಾಹಿತ್ಯ ಚಿಂತಕರು.
ಶ್ರೀ ಸಿ.ಎನ್ ರಮೇಶ್. ಲೀಡ್ ಪಿ ಎಂ ಓ ಅನಲಿಸ್ಟ್ ಶೆಲ್ ಹೈಟಿ ಹಬ್, ಬೆಂಗಳೂರು.
ಶ್ರೀ ಸತೀಶ್ ಎಂ ಅರ್. ಲೆಕ್ಕ ಪರಿಶೋಧನಾಧಿಕಾರಿ ಕೆ.ಆರ್. ಐ.ಡಿ.ಬಿ.ಎಲ್. ಬೆಂಗಳೂರು. ಇವರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದು ಕಂಗೊಳಿಸಿದರು.

ಮೊದಲನೇ ವಿಚಾರ ಸಂಕಿರಣದಲ್ಲಿ “ಪ್ರಸಕ್ತ ಶಿಕ್ಷಣದಲ್ಲಿ ಪೋಷಕರ ಪಾತ್ರ” ವಿಷಯವನ್ನು ಕುರಿತು ಶ್ರೀಯುತ ಕೆ.ಎಸ್ ಮಂಜುನಾಥ ಸರ್, ಡಾ. ಎಸ್ ರಾಮಲಿಂಗೇಶ್ವರ್ ಹಾಗು ಶ್ರೀಯುತ ಮಂಜುನಾಥ ನಾಯ್ಕ್ ರವರುಗಳು ಮಾತನಾಡಿ ಬಹಳ ಸ್ಪಷ್ಟವಾಗಿ ಪೋಷಕರುಗಳು ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಜೊತೆಗೆ ನಿಭಾಯಿಸಬೇಕಾದ ಎಲ್ಲಾ ಜವಾಬ್ದಾರಿಗಳನ್ನು ತಿಳಿಸಿದರು.

ನಂತರ ನನ್ನ “ಯುಗಾದಿ “ಹಾಗು ಬಲವಂತ ಮೊರಟಗಿಯವರ “ಅವ್ವನ ಸೀರೆ ಸೆರಗಿನ್ಯಾಗ” ಎರಡು ಕೃತಿಗಳು ಸಾದ್ವಿ ಯೋಗಿನಿ ಮಾತಾಜಿಯವರ ಸಾನಿಧ್ಯದಲ್ಲಿ ಗಣ್ಯ ಅತಿಥಿಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡವು .

ಕೃತಿ ವಿಮರ್ಶೆಯನ್ನು ಸ್ನೇಹಜೀವಿ ಬಳಗದ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ ಎನ್ ಜಿಂಗಡೆಯವರು ಅತ್ಯಂತ ಸೊಗಸಾಗಿ ಕೆಲವು ಕವಿತೆಗಳನ್ನು ವಾಚಿಸಿ ಭಾವಾರ್ಥ ತಿಳಿಸುವ ಮೂಲಕ ಬಹಳ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು. ನಂತರ ಮತ್ತೊಂದು ಕೃತಿ “ಹನಿ ಹನಿ ಧಾರೆ” ಪುಸ್ತಕ ಲೋಕಾರ್ಪಣೆಯಾಗಿ ಪುಸ್ತಕ ವಿಮರ್ಶೆಯನ್ನು ಸ್ನೇಹಜೀವಿ ಬಳಗದ ಕಾರ್ಯದರ್ಶಿಗಳಾದ ಶ್ರೀ ಗಂಗಾಧರ ಕಂಬಿಮಠ ರವರು ಯಶಸ್ವಿಯಾಗಿ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷರ ಭಾಷಣವನ್ನು ಶ್ರೀಮತಿ ಡಾ.‌ಸಿ ನಂದಿನಿ ರವರು ಖ್ಯಾತ ಕಾದಂಬರಿಕಾರ್ತಿ ನೆರವೇರಿಸಿದರು.

ಅಂತಿಮವಾಗಿ ಕಾರ್ಯಕ್ರಮಕ್ಕೆ ಶೋಭಾಯಮಾನರೂ ಹಾಗು ಸಮ್ಮೇಳನಾಧ್ಯಕ್ಷರೂ ಆದ ಶ್ರೀ ಶ್ರೀ ಶ್ರೀ ಸಾಧ್ವಿ ಯೋಗಿನಿ ಮಾತಾಜಿಯವರ ಆಶೀರ್ವಚನದ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.

ವಿಚಾರ ಸಂಕಿರಣ ಎರಡನೇ ಭಾಗ ಸಮಾಜ ಕಟ್ಟುವಲ್ಲಿ ವಚನಕಾರರ ಪಾತ್ರ ನಿಗಧಿತ ಸಮಯಕ್ಕೆ ಆರಂಭವಾಗಿ, ವಿಷಯ ಪ್ರಸ್ತುತಿಯನ್ನು
ಶ್ರೀ ಕೊಟ್ರೇಶ್ ಉಪ್ಪಾರ್ ಆಧುನಿಕ ವಚನಕಾರರು, ಹಾಸನ,
ಶ್ರೀ ಸತೀಶ್ ಆರ್ ಪ್ರಾಂಶುಪಾಲರು, ವಚನ ವಾಗ್ಮಿಗಳು ಭದ್ರಾವತಿ,
ಶ್ರೀ ಮೂರ್ತಿ ಬಿ.ಎಂ ಲೇಖಕರು, ವಚನ ವಾಗ್ಮಿಗಳು, ಬೆಂಗಳೂರು. ಇವರುಗಳು ವಚನಗಳ ಹಾಗು ವಚನಕಾರರ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿ ಪ್ರವಚಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು .

ಮುಖ್ಯ ಅತಿಥಿಗಳಾಗಿ
ಶ್ರೀಮತಿ ಚಂದ್ರಿಕಾ ಪುರಾಣಿಕ್.
ಶ್ರೀ ಸುರೇಶ್ ಕೊರಕೊಪ್ಪ. ಅಧಿಕಾರಿಗಳು ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು.
ಶ್ರೀ ಮುದಲ್ ವಿಜಯ್. ಕಾದಂಬರಿಕಾರರು ಮತ್ತು ಸಾಹಿತ್ಯ ಚಿಂತಕರು ಬೆಂಗಳೂರು
ಶ್ರೀ ಕಮ್ಮರಡಿ ರಾಧಾಕೃಷ್ಣ ಜೋಯಿಸ್. ಹಿರಿಯ ಸಾಹಿತ್ಯ ಚಿಂತಕರು.
ಶ್ರೀಮತಿ ಸುರಭಿ ಲತಾ. ಲೇಖಕರು ಬೆಂಗಳೂರು,
ಶ್ರೀ ಪಿ.ಎನ್ ಬಸವಣ್ಣ. ಸಾಹಿತಿಗಳು ಹಾಗು ಮುಖ್ಯ ಕಾರ್ಯನಿರ್ವಾಹಕರು ಟೆರ್ರಾ ಗ್ರಿನೇರಿಯಾ ಕಂಪನಿ ಇವರುಗಳು ಹಾಜರಿದ್ದು ಸಮಾರಂಭವು ಪ್ರಜ್ವಲಿಸಲು ಕಾರಣೀಭೂತರಾದರು.

ಮುಂದುವರೆದ ಭಾಗವಾಗಿ ಶ್ರೀಯುತ ಸಿದ್ದಲಿಂಗಯ್ಯ ನಿಂಗಮಾರಯ್ಯನವರ “ಮೌನದ ಹೆಜ್ಜೆಗಳು ಪುಸ್ತಕ” ಲೋಕಾರ್ಪಣೆಯಾಯಿತು. ಕೃತಿ ವಿಮರ್ಶೆಯನ್ನು ಹಾಗು ವಚನ ಸಾಹಿತ್ಯದ ಒಂದಿಷ್ಟು ವಿಷಯಗಳನ್ನು ಶ್ರೀಯುತ ಅನಿಲ್ ಕುಮಾರ್ ಜೋಷಿಯವರು ನೆರವೇರಿಸಿಕೊಟ್ಟರು.

ನಂತರ ಮತ್ತೆರಡು ಪುಸ್ತಕಗಳಾದ “ನೆನಪುಗಳ ಪುಟ ತೆರೆದು” ಮತ್ತು “ನೂರೊಂದು ನೆನಪು ಸಾಗದೇಕೆ ಬದುಕು” ಪುಸ್ತಕಗಳು ಲೋಕಾರ್ಪಣೆಯಾಗಿ, ಲೇಖಕಿ ಡಾ. ಸಿ ನಂದಿನಿ ಮೇಡಂ ಕೃತಿ ವಿಮರ್ಶೆಯನ್ನು ಮಾಡಿದರು.

ಕೃತಿಕಾರರ ಮನದಾಳದ ಮಾತುಗಳ ನಂತರ ಕೊನೆಯದಾಗಿ ಶ್ರೀಯುತ ಕೃಷ್ಣಪ್ಪನವರು ಸಂಸ್ಥಾಪಕರು ಶ್ರೀ ಬಸವ ಟಿ.ವಿ. ಬೆಂಗಳೂರು ಇವರು ಅಧ್ಯಕ್ಷರ ಭಾಷಣದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಚನ ಸಾಹಿತ್ಯವು ಸಾಮಾನ್ಯರ ಜೀವನದ ಮೇಲೆ ಬೀರಿದ ಪ್ರಭಾವ,ಬಸವಣ್ಣನರು ಅಸ್ಪೃಶ್ಯತೆ ತೊಲಗಿಸಿದ್ದು ಹಾಗು ಜಾತಿಯತೆ ಮತ್ತು ಮೌಢ್ಯತೆ ಬಗ್ಗೆ ಬಹಳ ಲೀಲಾಜಾಲವಾಗಿ ಮಾತನಾಡುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕವಿಗೋಷ್ಟಿಯಲ್ಲಿ ಅರವತ್ತು ಕವಿಮನಗಳು ವಿವಿಧ, ವಿಭಿನ್ನ ವಿಷಯಗಳ ಕುರಿತು ಕಾವ್ಯ ವಾಚನ ಮಾಡಿ ವೀಕ್ಷಕರ ಗಮನ ಸೆಳೆದು, ಸಂಕ್ರಾಂತಿ ಸಂಭ್ರಮಕ್ಕೆ ಮೆರುಗು ತಂದರು.
ಸರ್ವ ಕವಿಗಳಿಗೂ ಬಹಳ ಗೌರವಯುತವಾಗಿ ಸನ್ಮಾನಿಸುವ ಮೂಲಕ ಶ್ರೀಯುತ ಶಶಿಕಾಂತ ರಾವ್ ಅಣ್ಣನವರು ಒಂದು ಶಕ್ತಿಯಾಗಿ ಹೊರಹೊಮ್ಮಿದರು. ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಯುತ ಜಗದೀಶ್ ಹವಾಲ್ದಾರ್ ಹಾಗು ಕುಮಾರಿ ಜನನಿ ವತ್ಸಲ ನೆರೆವೇರಿಸಿಕೊಟ್ಟರು.

ನನ್ನ ಯುಗಾದಿ ಪುಸ್ತಕಕ್ಕೆ ಮುನ್ನುಡಿ ಬರೆದು ಕೊಟ್ಟಂತಹ ರಾಧಾಕೃಷ್ಣ ಉಳಿಯತಡ್ಕ ಸರ್, ಬೆನ್ನುಡಿ ಬರೆದುಕೊಟ್ಟಂತಹ ವಿಜಯಲಕ್ಷ್ಮಿ ಎಸ್ ಮೇಡಂ, ಅಶಯ ನುಡಿಗಳನ್ನು ಬರೆದಂತಹ ಶ್ರೀಮತಿ ವಿಜಯ ಪದ್ಮಶಾಲಿ ಹಾಗು ಶಶಿಕಾಂತ ಅಣ್ಣನವರಿಗೆ, ಡಿಟಿಪಿ ಮಾಡಿಕೊಟ್ಟಂತಹ ಪೂರ್ಣಿಮಾ ಪ್ರೇಮ್ ಕುಮಾರ್ ಹಾಗು ಬಾಲು ಗ್ರಾಫಿಕ್ಸ್ ರವರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು.

ವಿಶೇಷವಾಗಿ ಗುರುಸಮಾನರಾದ ಶ್ರೀಯುತ ಪದ್ಮನಾಭ ಡಿ ಸರ್, ಶ್ರೀಮತಿ ಲಲಿತಾ ಬಿಟ್ಟೀರ ಚೋಂದಮ್ಮ, ಶ್ರೀಮತಿ ವಿಜಯ ಪದ್ಮಶಾಲಿ. ಶ್ರೀಯುತ ಹರಿ ನರಸಿಂಹ ಉಪಾಧ್ಯಾಯ, ಶ್ರೀಯುತ ಪುರುಷೋತ್ತಮ ಬಾದರಾಯಣ ಸರ್ ರವರಿಗೂ ತುಂಬು ಹೃದಯದ ಧನ್ಯವಾದಗಳು. ಇಂಥ ದಿವ್ಯ ವೇದಿಕೆಯಲ್ಲಿ ಪುಸ್ತಕ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಂತಹ ಸ್ನೇಹಜೀವಿ ಬಳಗದ ಎಲ್ಲಾ ಪದಾಧಿಕಾರಿಗಳಿಗೂ ಹೃನ್ಮನದ ಧನ್ಯವಾದಗಳು.

ಕವನ ಸಂಕಲನಕ್ಕೆ ನೆರವು ನೀಡಿದ ಪ್ರೊ. ನಾಗರಾಜು ಸರ್, ಡಾ. ಸುದೀರ್ ಬಿ.ವಿ. ಡಾ. ಪ್ರಸನ್ನ ಸರ್, ಡಾ. ಸುಜಾತ್ ಪುರುಷೋತ್ತಮ, ಡಾ. ಪ್ರದೀಪ್ ಕುಮಾರ್ ರವರುಗಳಿಗೂ ತುಂಬು ಹೃದಯದ ಧನ್ಯವಾದಗಳು.


  • ಚನ್ನಕೇಶವ ಜಿ ಲಾಳನಕಟ್ಟೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW