ಪ್ರಾಮಾಣಿಕ ಶಿಕ್ಷಕಿ ‘ಪರವಿನ ಬಾಗವಾನ’ ಅವರು ಇದ್ದ ಪ್ರಾಥಮಿಕ ಶಾಲೆ ‘ತಾಲೂಕು ಮಟ್ಟದ ಮಾದರಿ ಶಾಲೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅವರ ಈ ಸಾಧನೆಯ ಕುರಿತು ಲೇಖಕ ಪ್ರವೀಣ ಮ ಹೊಸಮನಿ ಅವರು ಬರೆದ ಒಂದು ಲೇಖನ, ತಪ್ಪದೆ ಓದಿ…
ಜೀವನದುದ್ದಕ್ಕೂ “ಶಿಕ್ಷಣ” ಅನ್ನುವ ಅನ್ನದ ಅಗಳು ಮಾನವ ಕುಲಕ್ಕೆ ಒಂದು ನಿರ್ದಿಷ್ಟ ಪಥಕ್ಕೆ ಕರೆದೊಯ್ಯವ ಹಲವು ಮಜಲುಗಳ ಮಹಡಿಯಂತೆ ಇರುವ ಒಂದು ಮಹೋನ್ನತ ಕಟ್ಟಡವಿದ್ದಂತೆ..
ಬಾಲ್ಯ, ಪ್ರಾಥಮಿಕ, ಪ್ರೌಢ ಎನ್ನುವ ವಿಸ್ತಾರವಾದ ಕಲಿಕಾ ಹಂತದಲ್ಲಿ ಪ್ರಮುಖ ಪಾತ್ರ ಎನ್ನ ಪ್ರೀತಿಯ “ಶಿಕ್ಷಕ”ರದು. ಈಗಿನ ಕೆಲ ಜನ ಬರೀ ಡಾಂಭಿಕ ಜೀವನ ಶೈಲಿಯಲ್ಲಿರುವುದು ಕಂಡಿರುವುದು ಸಹಜ ಅಲ್ಲವೇ, ಇದರ ನಡುವೆಯೂ ಶಾಲೆಯ ಶುಚಿ,ನೈರ್ಮಲ್ಯದ ಬಗ್ಗೆ ಅಲ್ಪವಾದ್ರೂ ಸ್ವ-ಇಚ್ಛಾ ಮನೋಭಾವನೆಯಿಂದ ಮಾಡೋದು ತುಂಬಾ ದೊಡ್ಡ ವಿಷಯ ಅಲಾ!, ಹೀಗೆಯೇ ಅದೊಂದು ಪುಟ್ಟ ಗ್ರಾಮ ಕೆಲ ಪ್ರಾಚೀನ ಲಿಪಿಗಳ ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮ, ಜ್ಞಾನ ಯೋಗಿ ಶ್ರೀ ಸಿದ್ಧೇಶ್ವರ ಶ್ರೀಗಳು ಮೆಚ್ಚಿ ಆಧ್ಯಾತ್ಮದ ಪ್ರವಚನ ಸಾರಿದ ಕೀರುತಿಯ ಗ್ರಾಮ ಅದುವೇ ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ “ಮುಳವಾಡ”ಗ್ರಾಮ.
ಇಲ್ಲಿ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲನಿ, ಮುಳವಾಡ. ಎಂಬ ಪ್ರಾಥಮಿಕ ಶಾಲೆಯೊಂದರಲ್ಲಿ ಸುಮಾರು ೨೦ ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಶಿಕ್ಷಕಿಯು ಸ್ವ-ಮನಸ್ಸಿನಿಂದ ತಾನೂ ಶಿಕ್ಷಕಿ ಎನ್ನುವ ಅಹಂ ಭಾವನೆಗೆ ತದ್ವಿರುದ್ಧವಾಗಿ ತಾನು ಒಬ್ಬ ಸ್ವಯಂ ಸೇವಕಿಯಂತೆ ಇಚ್ಛಾ ಗುಣಗಳನ್ನಿಟ್ಟುಕೊಂಡು ತಮ್ಮ ವೃತ್ತಿ ಜೀವನವನ್ನು ಸಾಗಸೋದು ಅದೊಂದು ಮಹತ್ವದ ಸ್ವಭಾವವೇ ಹೌದು. ಮೊದಲು ಈ ಶಿಕ್ಷಕಿಯ ಮೆಚ್ಚುಗೆ ಪಾತ್ರವಾಗುವ ವಿಷಯವೆಂದರೆ ಇವರೊಬ್ಬರು ವಿದ್ಯಾರ್ಥಿಗಳ ಮನಸ್ಸಿನ ಸ್ಪಂದಿಸುವ ಸ್ಷಂದನೆಯ ಒಂದು ಭಾಗವಿದ್ದಂತೆ. ಹಾಗೂ ಗ್ರಾಮದ ಜನರ ಮೆಚ್ಚುಗೆಗೆ ಕೂಡಾ ಬಹು ಅಪರೂಪದ ಶಿಕ್ಷಕಿಯಂತಿರುವ ಮುಗ್ದ ಜೀವಿ ಇವರು.
ಸ್ವಯಂವಾಗಿ ಇದೊಂದೆ ಕಾರ್ಯದಲ್ಲಿ ತೊಡಗಿದ ವ್ಯಕ್ತಿತ್ವವು ಇವರದಲ್ಲ. ಇಂತಹ ಅನೇಕ ಸೇವಾ ಕಾರ್ಯಗಳನ್ನ ಮಕ್ಕಳ ಭವಿಷ್ಯಗಾಗಿ ಅವರ ಭವಿಷ್ಯತ್ಕಾಗಿ ಹತ್ತು ಹಲವು ಕಾರ್ಯ-ಕಜ್ಜಗಳನ್ನು ಇನ್ನೂ ಕೂಡಾ ರೂಡಿಯಲ್ಲಿಯೇ ಇಟ್ಟುಕೊಂಡಿರುವ ಗುರುಮಾತೆ ಈ ಶಾಲೆಯ ಜೀವದಾತೆ ಇವರು. ಇವರ ಕಾರ್ಯ ಬರೀ ಶಾಲೆಯಲ್ಲಿ ಇರದೇ ಸಮಾಜದಲ್ಲಿಯ ಇವರು ಸಮಾಜ ಸೇವಾಮುಖಿಯಾಗಿ ನಾಮಂಕಿತ ಪಡೆದ ಶಿಕ್ಷಕಿ ಇವರು. ಇದಲ್ಲದೇ ಗ್ರಾಮೀಣ ಮಟ್ಟದಲ್ಲಿ ಎಲೆ-ಮರೆ ಕಾಯಿಯಂತಿದ್ದ ಪ್ರತಿಭೆಯನ್ನು ಹೊಂದಿ ಬಾಹ್ಯವಾಗಿ ಪ್ರತಿಭೆಯನ್ನು ಹೊರ ಹಾಕದೆ ಇರುವಂತಹ ಮಕ್ಕಳಿಗೆ ದಾರಿ ತೋರಿದ ಗುರು ಇವರು. ಜೊತೆ ಜೊತೆಗೆ ಕೆಲವೊಂದು ಸರಕಾರಿ ಶಾಲೆಗಳಲ್ಲಿ ಈಗಿನ ಸ್ಥಿತಿಗನು ಗುಣವಾಗಿ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಪ್ರತಿ ವರುಷ ಭಾರಿ ಹರುಷದಿಂದ ಮುನ್ನುಗುತ್ತಲೇ ಇದ್ದವು. ಅಂತಹ ಕಾರ್ಯಕ್ರಮಗಳು ಈಗ ಗ್ರಾಮೀಣ ಮಟ್ಟದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ನೆನಪೇ ಇಲ್ಲದಂತೆ ಇರುವುದು ತುಂಬಾ ವಿಷಾದನೀಯ ಸಂಗತಿ. ಇಂತಹ ಶಾಲಾ ವಾರ್ಷಿಕ ಸಮ್ಮೇಳನ ಕಾರ್ಯಕ್ರಮವನ್ನು ಸ್ವತಃ ತಾವೇ ಖುದ್ದಾಗಿ ಮುಂದೆ ಬಂದು ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ಈ ಶಾಲೆ ನನ್ನದು ಈ ಮಕ್ಕಳು ನನ್ನವರು ಎನ್ನುವ ನಿಶ್ಕಲ್ಮಶ ನಿಸ್ವಾರ್ಥದ ಮನೋಗುಣವಿಂದ ಒಬ್ಬ ಶಿಕ್ಷಕಿ ಅದನ್ನ ನಡಸಿಕೊಂಡು ಹೋಗ್ತಿರುವದು ತುಂಬಾ ಸಂತೋಷದ ವಿಷಯಾನೆ ಹೌದು.
ಕೆಲವೊಂದು ಶಾಲೆಯಲ್ಲಿ ‘ಏನ್ ಮಾರಾಯಾ ನಮ್ಮ ಡ್ಯುಟಿನೇ ನಮಗ ರಗಡ ಆಗೇದ, ಹಂತಾದ್ರಾಗ ಹಿಂತಾವ ಕೆಲ್ಸಾ ಯಾರ ಮಾಡ್ಕೋತ ಕುಂದ್ರುದ ನಡಿ ಪಾ… ಅದಕ್ಕೆಲ್ಲಾ ಸರಕಾರ ಆದ ಅದೆ ಸ್ವಚ್ಛ ಮಾಡತ್ತ ಬಿಡ ಪಾ… “ಅನ್ನೋ ಅತೀ ಕೀಳರಮೆಯ ಮಾತು ಸಹ ಆಲಿಸಿರುವುದು ಸತ್ಯದ ಸಂಗತಿ. ಹಾಗೆಯೇ ಇವರಿದ್ದ ಪ್ರಾಥಮಿಕ ಶಾಲೆ ಇಂದು “ತಾಲೂಕು ಮಟ್ಟದ ಮಾದರಿ ಶಾಲೆ” ಎಂಬ ಹೆಗ್ಗಳಿಕೆಗೆ ಪ್ರಶಂಸೆ ಪಡೆದಿದೆ.ಇದೇ ಅಲ್ಲವೇ ಅಭಿವೃದ್ಧಿ ಎಂದರೆ.ಹಿಂತಹ ಶಿಕ್ಷಕಿಯನ್ನು ಪಡೆದ ಈ ಗ್ರಾಮದ ವಿದ್ಯಾರ್ಥಿಗಳು ಜೊತೆಗೆ ಗ್ರಾಮದ ಹೆಸರು ಕೂಡ ಉನ್ನತ ಮಟ್ಟಕ್ಕೆ ಕರೆದೊಯ್ಯಲು ಪ್ರಯತ್ನದ ಹಾದಿ ಇವರದು ಹಾಗೆಯೇ ಇವರು ಬಹು ಶಿಕ್ಷಕಾ ವೃಂದಿಗೆ ಇವರೊಬ್ಬರು ಪ್ರೇರಣೆಯ ಶಕ್ತಿಯಂತೆ ಇರಲಿ..ಯಾವ ತಾರತಮ್ಯದ, ಜಾತೀಯತೆಯ ಗಡಿಯನ್ನು ಸಹ ಹೊಂದಿದವರಲ್ಲ..’ಎಲ್ಲರೊಲ್ಲೊಂದಾಗಿ ನಿಮ್ಮಲ್ಲಿ ನಾನು ಒಂದು’ ಎಂದ ಈ ನಮ್ಮ ಪ್ರಾಮಾಣಿಕ ಶಿಕ್ಷಕಿಗೆ ಗುರುಭ್ಯೋ ನಮಃ ಅವರೇ ಶ್ರೀಮತಿ ‘ಪರವಿನ ಬಾಗವಾನ” ಗುರುಮಾತೆ..
“ಅರಿತು ನಡೆ ನಿನ್ನವರ ಕಡೆ
ನಿನ್ನವರೆ ನಿನಗೆ ಎಡೆ ಇಟ್ಟಂತಾದರೆ
ಇಡು ನೀ ಹೆಜ್ಜೆ ಗುರುವಿನ ಕಡೆ”
ಎಂದನಂತೆ ಪ್ರವೀ.
- ಪ್ರವೀಣ ಮ ಹೊಸಮನಿ