ಪತ್ರಿಕೋದ್ಯಮ ಡಿಪ್ಲೋಮಾಗೆ ಅರ್ಜಿ ಆಹ್ವಾನ

ಪತ್ರಿಕೋದ್ಯಮದಲ್ಲಿ ಏನಾದ್ರು ಸಾಧಿಸಬೇಕು, ಕಲಿಯಬೇಕು ಅಂದುಕೊಳ್ಳುವರಿಗೆ ಭಾರತೀಯ ವಿದ್ಯಾಭವನವು ಪತ್ರಿಕೋದ್ಯಮದಲ್ಲಿ ತರಬೇತಿ ನೀಡುತ್ತದೆ, ಆಸಕ್ತರು ತಡಮಾಡದೆ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ, ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ…

ಬೆಂಗಳೂರು : ಕಳೆದ 55 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದು, ತನ್ನದೇ ಆದ ಮಹತ್ವದ ಸ್ಥಾನವನ್ನು ಪಡೆದಿರುವ ‘ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ’ ಕಾಲೇಜು ಹೊಸ ಶೈಕ್ಷಣಿಕ ವರ್ಷದ ಪತ್ರಿಕೋಧ್ಯಮದ ತರಗತಿಗಳನ್ನು ಆರಂಭಿಸುತ್ತಿದೆ.

ಆಗಸ್ಟ್ 2023 ರಿಂದ ಆರಂಭವಾಗಲಿರುವ ಒಂದು ವರ್ಷದ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮೋಕ್ಕೆ ಇದಾಗಿದ್ದು ಪ್ರವೇಶಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿರುವು ಹಲವು ಸಾಧಕರು ಇಲ್ಲಿ ವಿಶೇಷ ತರಬೇತಿ ನೀಡುತ್ತಾರೆ. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಕಾರ್ಪೋರೇಟ್ ಜರ್ನಲಿಸಂ ಮೂರೂ ಕ್ಷೇತ್ರದಲ್ಲಿ ಇಲ್ಲಿ ವಿಶೇಷ ತರಬೇತಿ ನೀಡಲಿದ್ದು, ಕಾಲಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿದ್ದು ಆನ್ಲೈನ್ ಪತ್ರಿಕೋದ್ಯಮ, ಸಾಮಾಜಿಕ ಜಾಲ ತಾಣಗಳ ನಿಯಂತ್ರಣ ಹಾಗೂ ನಿರ್ವಹಣೆಯಂತಹ ನೂತನ ಬೆಳವಣಿಗೆಗಳನ್ನು ಕಲಿಸಲಾಗುವುದು. ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸ ಬಹುದಾಗಿದೆ.

ತರಗತಿಗಳು ಆಗಸ್ಟ್ ಮೊದಲ ವಾರದಿಂದ ಆರಂಭವಾಗಲಿದೆ. ಪ್ರವೇಶಕ್ಕೆ ಮತ್ತು ಇತರ ವಿವರಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ಭಾರತೀಯ ವಿದ್ಯಾ ಭವನದ ಕಚೇರಿಯನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9538181140

ಎನ್.ಎಸ್.ಶ್ರೀಧರ ಮೂರ್ತಿ
ನಿರ್ದೇಶಕರು, ಮಾಧ್ಯಮ ಭಾರತಿ


  • ಆಕೃತಿ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading