ಒಂದಂಕಿ ಮರಗಳನ್ನ ನೋಡಿದ್ದೀರಾ?…ಪ್ರಕೃತಿಗೂ ಕನ್ನಡದ ಮೇಲಿದೆ ಪ್ರೀತಿ …ಕನ್ನಡದ ಮೇಲಿನ ಪ್ರೀತಿಯನ್ನು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಮರಗಳಲ್ಲಿ ಹೆಚ್ಚಾಗಿ ಕಾಣಬಹುದು, ಒಂದಂಕಿ ಮರಗಳ ಕುರಿತು ಟಿ.ಶಿವಕುಮಾರ್ ಅವರು ಬರೆದಿರುವ ಪುಟ್ಟ ಲೇಖನವನ್ನು ತಪ್ಪದೆ ಮುಂದೆ ಓದಿ…
ನವೆಂಬರ್ ಬಂತು ಎಂದರೆ ಸಾಕು ಎಲ್ಲೆಡೆ ಕನ್ನಡ ಪ್ರೇಮ ಕಾಣುತ್ತೇವೆ. ಅದರೆ ಪ್ರತಿ ನಿತ್ಯ ಕನ್ನಡ ಪ್ರೇಮವನ್ನು ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿಯ ಜೀವ ವೈವಿಧ್ಯತೆ ಬಗ್ಗೆ ಕೇಳಿದರೆ ನಿಬ್ಬೆರಗಾಗಿ ನೋಡುವಂತಹ ನೂರಾರು ರಹಸ್ಯಗಳು ಆಗೋಮ್ಮೆ ಈಗೋಮ್ಮೆ ಗಮನ ಸೆಳೆಯುತ್ತಲೇ ಇರುತ್ತವೆ.
ಈ ನಿಗೂಡಗಲ್ಲಿ ‘ಕನ್ನಡತನವೂ’ ಬೇರೆತುಕೊಂಡಿದೆ ಎಂದರೆ ಬಹುಶಃ ನಿಮಗೆ ನಂಬಿಕೆ ಹುಟ್ಟುವುದಿಲ್ಲ. ಅದಕ್ಕಾಗಿಯೇ ಈ ಚಿತ್ರವನ್ನು ನೋಡಿ ಕನ್ನಡದ ೧ ಅಂಕಿಯನ್ನು ಹೋಲುವ ಬೇರುಗಳು ಪಶ್ಚಿಮ ಘಟ್ಟವೆಂಬ ಸಸ್ಯಕಾಶಿಯಲ್ಲಿ. ಈ ಅಂಕಿ ಎಂದೂ ಬದಲಾಗಿ ಎರಡಾಗದು ಮೂರಾಗದು ಅಂದ ಹಾಗೆ ಇದು ರಾಮಪತ್ರೆ ಕುಟುಂಬಕ್ಕೆ ಸೇರಿದ ಮರ ಡೈನೋಸಾರಗಳ ಯುಗದಲ್ಲಿ ಈ ಮರವೂ ಜನ್ಮತಾಳಿತು ಎನ್ನುವುದು ಪರಸರವಾದಿಗಳ ಒಮ್ಮತದ ಅಭಿಪ್ರಾಯ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಸನಿಹದ ಕತ್ತಲ ಕಾನನದಲ್ಲಿ ಇಂಥ ಒಂದಂಕಿ ಮರಗಳು ಅಪರೂಪ ಎನ್ನುವಂತಿವೆ. ನೀರಿನ ಮೂಲಗಳ ಸಮೀಪದಲ್ಲಿಯೇ ಈ ಮರ ಬೆಳೆಯುವುದು ಇನ್ನೊಂದು ವಿಶೇಷ. ಮಣ್ಣಿನ ಸವಕಳಿ ತಡೆಯುವ ಮರಗಳಲ್ಲಿ ಇದೂ ಒಂದು, ಅಲ್ಲದೆ ಮಳೆಯ ನೀರನ್ನು ಹಿಡಿದುಕೊಂಡು ಬೇಸಿಗೆಯಲ್ಲಿ ಬಿಡುವ ಸ್ವಂಜಿನ ಕೆಲಸವನ್ನೂ ಇವು ನಿರ್ವಹಿಸುತ್ತವೆ. ಈ ಭಾಗದ ಹವ್ಯಕರು ಇದಕ್ಕೆ ಪೂಜನೀಯ ಸ್ಥಾನ ಕಲ್ಪಿಸಿ ಆರಾಧಿಸುತ್ತಾರೆ. ಉಭಯವಾಸಿ ಜಲಚರಗಳಿಗೆ ಈ ಮರ ಆಶ್ರಯ ಒದಗಿಸುತ್ತದೆ. ಬೇರಿಗೆ ಗಾಳಿ ಲಭಿಸುವ ಸಲುವಾಗಿ ಇವು ಒಂದಂಕಿಯಂತೆ ಬಳೆಯುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ ಇದನ್ನು ವೈಜ್ಞಾನಿಕ ಭಾಷೆಯಲ್ಲಿ ‘ಜಿಮ್ನಾಕಾಂತಿಯ ಕೆನರಿಕಾ’ಅಂತಾರೆ.
- ಟಿ.ಶಿವಕುಮಾರ್ – ಹಿರಿಯ ಪ್ರಾಥಮಿಕ ಶಾಲೆ ಅರಳೇಶ್ವರ, ತಾ.ಹಾನಗಲ್ಲ, ಜಿ.ಹಾವೇರಿ.