ಕರುಳ ಬಳ್ಳಿಗಳು ಮರೆಯಾಗುವ ಸಮಯ…ಇದೊಂದು ನೈಜ್ಯ ಆಧಾರಿತ ಘಟನೆಯಾಗಿದ್ದು, ಕತೆಗಾರ ಪ್ರಶಾಂತ ಹೊಸಮನಿ ಅವರು ಕತೆಯ ರೂಪಕೊಟ್ಟು ಓದುಗರ ಮುಂದಿಟ್ಟಿದ್ದಾರೆ. ಅನುವಂಶೀಕತೆ ಹೆಸರಿನಲ್ಲಿ ದಂಪತಿಗಳು ಮಕ್ಕಳನ್ನು ಕಳೆದುಕೊಂಡ ದಾರುಣ ಕತೆ, ಮುಂದೆ ಓದಿ…

ಉತ್ತರ ಕರ್ನಾಟಕ ದ ರಣ ಬೇಸಿಗೆಯ ಬಿಸಿಲಲ್ಲಿ ಜೀವದ ಹೊಟ್ಟೆಯ ತುತ್ತಿಗಾಗಿ, ಬಡತನದ ಬೇಗೆಯನ್ನು ತಣಿಸಲು ಕೇವಲ ಮೆಟ್ರಿಕ್ ವ್ಯಾಸಂಗವನ್ನು ಮುಗಿಸಿ, ದೂರದ ಮಹಾರಾಷ್ಟ್ರಕ್ಕೆ ದುಡಿಯಲು ಹೊರಟ ಯುವಕ, ಜೀವನದ ಯಾವುದೇ ಅನುಭವವಿಲ್ಲ,ಬದುಕಬೇಕು ಎಂಬ ಹಟದೊಂದಿಗೆ ಮಹಾರಾಷ್ಟ್ರ ಕರಡ, ಪುಣೆ, ಸಾಂಗ್ಲಿಗಳಂತಹ ಪಟ್ಟಣಗಳಲ್ಲಿ ಕೇಬಲ್ ಪೈಪ್ಗಾಗಿ ಖೆಡ್ ತೆಗೆಯುವ ಕೆಲಸ, ಆಳವಾದ ಖೆಡ್ಡಾ ತೆಗೆದು, ರಾತ್ರಿ ಆಯ್ತು ಅಂದರೆ ನಿದ್ದೆ, ಆ ನಿದ್ದೆಯ ತವಕದಲ್ಲಿ ನಾನು ಏನಾದರೂ ಸಾಧನೆ ಮಾಡಬೇಕು, ಏನಾದರೂ ತಿಳಿದುಕೊಳ್ಳಬೇಕು ಎಂಬ ಹುಮ್ಮ ಹಂಬಲದೊಂದಿಗೆ ಪ್ರತಿ ದಿನಾ ಮುಂದುವರೆಯುತ್ತಿತ್ತು, ವಯಸ್ಸಾದ ತಾಯಿ ಮಗನ ಮದುವೆ ಮಾಡಬೇಕೆಂಬ ಚಿಂತೆಯೊಂದಿಗೆ ಅವಳು ಸಾಗುತ್ತಿರುವಾಗ ,ಮನೆಯ ಹಿರಿಕರ ಒತ್ತಾಯದ ಮೇರೆಗೆ ತಂದೆಯ ಸಹೋದರಿಯ ಮಗಳನ್ನು ಮದುವೆಯಾದ.

ಫೋಟೋ ಕೃಪೆ: The Indian Express

ಉತ್ತಮ ಸಂಸಾರದೊಂದಿಗೆ, ಮಹಾರಾಷ್ಟ್ರವನ್ನು ತೊರೆದು, ತನ್ನ ಸ್ವಗ್ರಾಮದಲ್ಲೇ ಏನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಗ್ರಾಮದಲ್ಲಿ ಚಿಕ್ಕ ಹೊಟೇಲ್ ಪ್ರಾರಂಭಿಸಿದ. ಹೊಟೇಲ್‌ ಚೆನ್ನಾಗಿ ನಡೆಯುತ್ತಿತ್ತು, ಹೊಟೇಲ್ ಮಾಡುವದರೊಂದಿಗೆ ಪದವಿವರೆಗೂ ತನ್ನ ಶಿಕ್ಷಣ ಮುಗಿಸಿದ. ಕೇವಲ ಹೊಟೇಲ್ ಮಾತ್ರ ಸೀಮಿತವಾಗದೇ ಪ್ರತಿಯೊಂದು ಕ್ಷೇತ್ರದಲ್ಲಿನ ವಿಷಯಗಳನ್ನು ತಿಳಿದುಕೊಂಡ. ಬದುಕಲು ಮತ್ತಷ್ಟು ಧೈರ್ಯ ಬಂತು. ಹೀಗಿರುವಾಗ ಉತ್ತಮ ಸಂಸಾರಸ್ತ ಉತ್ತಮ ಕಾಣಿಕೆ ಎಂಬಂತೆ ಹೆಣ್ಣು ಮಗೊಂದು ಜನಿಸಿತು.ಉತ್ತಮ ಆಕರ್ಷಿತ ಮಗು ಒಂದು ತಿಂಗಳವಾಗುವಷ್ಟರಲ್ಲೇ ತೀರಿ ಹೋಯಿತು. ಇದು ಹೊಸ ಜೀವನಕ್ಕೆ ಬರ ಸಿಡಿಲು ಬಡಿದಂತಾಯಿತು. ಕಾರಣ ಅರಿಯಲು ಸಮಯವೇ ಸಿಗದಾಯಿತು.

ಮತ್ತೆ ದಿನಗಳು ಮುಂದುವರೆದಂತೆ ದುಃಖದಲ್ಲೇ ಕಾಲ ದೂಡುತ್ತಿದ್ದಾಗ. ತನ್ನ ಜೊತೆ ಮದುವೆಯಾದ ಸಹೋದರರಿಗೆ ಎರಡೆರಡು ಮಕ್ಕಳು ಸದಾ ಮನೆ ತುಂಬ ಸಂತೋಷವನ್ನು ನೀಡುತ್ತಿದ್ದವು. ದೇವರ ಆಶೀರ್ವಾದ ಎಂಬಂತೆ ಎರಡನೇ ಬಾರಿ ಹೆಂಡತಿ ಮತ್ತೆ ಗರ್ಭಿಣಿಯಾಗಿ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಈ ಮಗು ನಮ್ಮ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ಆಶೆಯಲ್ಲಿರುವಾಗ, ಮೇಲಿಂದ ಮೇಲೆ ಮಗುವಿಗೆ ಅನಾರೋಗ್ಯ ತೊಂದರೆಯಾಗುತ್ತಿತ್ತು.ವೈದ್ಯರ ಹೇಳಿಕೆ ಈತನ ಜೀವನದಲ್ಲಿ ಬರ ಸಿಡಿಲು ಬಡಿದಂತಾಯಿತು. ಅದವೇ ‘ ಥೇಲ್ಸೇಮಿಯಾ ‘ ಎಂಬ ಅಪರೂಪ ಖಾಯಿಲೆ. ಆದರೂ ಧೃತಿಗೆಡದೆ ಸತತ ನಾಲ್ಕು ವರ್ಷಗಳ ಕಾಲ ಮಗುವನ್ನು ಕಾಪಾಡಿ ಕೈಚೆಲ್ಲಿದ. ಅಷ್ಟಕ್ಕೂ ಥೇಲ್ಸೆಮಿಯಾ ಖಾಯಿಲೆ ಎಂಬುದು, ದೇಹದಲ್ಲಿ ರಕ್ತದ ಉತ್ಪಾದನೆ ಇಲ್ಲದಿರುವದು, ಮಗು ಜೀವಂತ ಉಳಿಯಬೇಕಾದರೆ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತವನ್ನು ಪೂರಣ ಮಾಡಬೇಕು. ತನ್ನ ರಕ್ತ ಹೆಂಡತಿಯ, ಸ್ನೇಹಿತರ, ಬಂಧುಗಳ ರಕ್ತ ಹೀಗೆ ನಾಲ್ಕು ವರ್ಷಗಳ ಕಾಲ ದೂಡಿದರೂ ಕೈ ಚೆಲ್ಲಿ ಕೂರುವ ಪರಿಸ್ಥಿತಿ ಎದುರಾಯಿತು. ಲಕ್ಷ ಲಕ್ಷ ಹಣ ಖರ್ಚು ಮಾಡಿದರೂ ವ್ಯರ್ಥವಾಯಿತು‌ ಯಾವ ಆಸ್ಪತ್ರೆಗೆ ಹೋದರೂ ಅಸಹಾಯಕ ಎಂಬ ವೈದ್ಯರ ಉತ್ತರದಿಂದ ಚಿಂತಾಕ್ರಾಂತನಾಗಿ,ಕುಳಿತಿರುವಾಗ ತೊಡೆಯ ಮೇಲೆ ಆಡುತ್ತಿದ್ದ ಕಂದಮ್ಮ ನಿಧಾನವಾಗಿ ಕಣ್ಮುಚ್ಚುತ್ತಿತ್ತು. ಒಂದೆಡೆ ಕರಳು ಚುರ್ ಎಂದರೂ ಅಸಹಾಯಕ ಪರಿಸ್ಥಿತಿ, ದೇವರಿಗೆ ಕರುಣೆ ಇಲ್ಲವೇನೋ ಎಂಬಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ದಂಪತಿಗಳ ನೋವ ದೇವರ ಬಲ್ಲ ಎಂಬಂತೆ, ಬೇಡಿಕೊಳ್ಳದ ದೇವರಿಲ್ಲ ,ಕೈಮುಗಿಯದ ಜನರಿಲ್ಲ ಎಂಬಂತಾಯಿತು ಪರಿಸ್ಥಿತಿ.

ಫೋಟೋ ಕೃಪೆ: The Indian Express

ಇದಕ್ಕೆಲ್ಲಾ ಕಾರಣ ಎಂದು ಹುಡುಕಲು ಹೋರಟಾಗ ತಿಳಿದಿದ್ದೇ ಅದ್ಭುತ ಸಂಗತಿ,” ಅನುವಂಶಿಕ ಮದುವೆಗಳು ” ಕಾರಣ ಎಂದು ಪ್ರಬುದ್ಧ ವೈದ್ಯರು ಉತ್ತರ ನೀಡಿದರು.ಅತೀಯಾದ ಸಂಬಂಧಿಕರಲ್ಲಿ ಮದುವೆಯಾದರೆ ಈ ರೀತಿ ಸಮಸ್ಯೆಗಳು ಉಂಟಾಗುತ್ತವೆ ಎಂಬುದು ವೈದ್ಯರ ಹೇಳಿಕೆಯಾಗಿತ್ತು .ಇದಕ್ಕೂ ಪರಿಹಾರವಾಗಿ ತನ್ನ ಹಾಗೂ ತನ್ನ ಹೆಂಡತಿಯ ವಿಶೇಷ ರಕ್ತ ಪರೀಕ್ಷೆಗಾಗಿ ಹೈದ್ರಾಬಾದ್ ಲ್ಯಾಬ್ ಗೆ ಕಳುಹಿಸಲಾಯಿತು. ಆ ವರದಿಯ ಆಧರಿಸಿ ವೈದ್ಯರೋರ್ವರು, ಚಿಕಿತ್ಸೆ ಪ್ರಾರಂಭಿಸಿದರು. ಹೆಚ್ಚು ಕಡಿಮೆ ವೈದ್ಯಕೀಯ ಖರ್ಚುಗಳಲ್ಲೇವು, ಲಕ್ಷ ದಾಟಿದವು, ಸಾಲ ಸೋಲ‌ಮಾಡಿ ಲಕ್ಷಗಳು ಅಲಕ್ಷ ಮಾಡುವಷ್ಟರ ಮಟ್ಟಿಗೆ ಮುಂದಿನ ಕರುಳ ಬಳ್ಳಿಗಾಗಿ ತಮ್ಮ ಜೀವವನ್ನೆ ಸವಿಸುವದು ನಿಶ್ಚಯವಾಯಿತು.ಇನ್ನೇನೂ ಎಲ್ಲವೂ ಒಳ್ಳೆಯದು ಆಯ್ತು,ಉತ್ತಮ‌ ಚಿಕಿತ್ಸೆಯಾಯಿತು ಎಂಬಷ್ಟರಲ್ಲಿ ಮತ್ತೆ ಒಂದೂವರೆ ವರ್ಷ ಕಳೆಯುವಷ್ಟರಲ್ಲಿ ಮತ್ತೇ ತುಂಬು ಗರ್ಭಿಣಿ ,ಈ ಸಲವೂ ದಂಪತಿಗಳು ಜಾಗೃತರಾಗಿ ಹೊಟ್ಟೆಯಲ್ಲಿನ ಮಗುವಿನ ರಕ್ತವನ್ನೇ ಪರೀಕ್ಷೆ ಮಾಡುವುದರ ಮೂಲಕ ಮುಂದಾಲೋಚನೆ ಕೈಗೊಂಡರು. ಇದಕ್ಕಾಗಿ ರಕ್ತ ಪರೀಕ್ಷೆಗಾಗಿ ಹೊಟ್ಟೆಯಲ್ಲಿರುವ ಮಗುವಿನ ರಕ್ತವನ್ನು ಪುಣೆಯ ವಿಶೇಷ ಲ್ಯಾಬ್ ಗೆ ಕಳುಹಿಸಲಾಯಿತು.ಅಲ್ಲಿಂದ ವರದಿ ಬರುವವರೆಗೂ ಎಲ್ಲಿಲ್ಲದ ತಳಮಳ.

ವರದಿ ಬಂತು, ನಾರ್ಮಲ್ ಎಂದು ತಿಳಿಸಿದಾಗ ಸಂತೋಷಕ್ಕೆ ಪಾರವೇ‌ಇಲ್ಲದಂತಾಗಿತ್ತು.ಕಾಲ ಕಳೆದಂತೆ ಮತ್ತೆ ಹೆಣ್ಣುಮಗುವಿನ ಜನನ. ಮತ್ತೆ ಹೆಣ್ಣು ಮಗುವೆಂಬ ನೋವು ಸಂಬಂಧಿಕರಲ್ಲಿದ್ದರೆ, ಗಂಡ ಹೆಂಡತಿಗೆ ಎಲ್ಲಿಲ್ಲದ ಖುಷಿ. ಈ ಮಗುವು ಆರೋಗ್ಯವಾಗಿದೆಯಲ್ಲಾ ಎಂಬ ಖುಷಿ ಮನೆ ಮಾಡಿತ್ತು. ಹೀಗೆ ಆ ಮಗು ಬೆಳೆಯುತ್ತಾ, ವರ್ಷಕಳೆಯಿತು. ಎರಡು ವರ್ಷಕಳೆಯಿತು. ಮೂರು ವರ್ಷ ಕಳೆದರೂ, ಚೆಂದುಳ್ಳಿ ಚೆಲವೆಯ ಮೊಗದ ಪುಟ್ಟ ಮಗು ಸದಾ ಹಸನ್ಮುಖಿಯಲ್ಲಿರುವ ಮಗುವಿಗೆ ಕಾಲಲ್ಲಿ ನಿತ್ರಾಣವಿರಲ್ಲಿ,ಕಾಲಲ್ಲಿ‌ಶಕ್ತಿಯೇ ಇರಲಿಲ್ಲ.

ಫೋಟೋ ಕೃಪೆ: OZY

ಸಾಕಷ್ಟು ವೈದ್ಯರ ಹತ್ತಿರ ತೋರಿಸಿದರೂ ದೊಡ್ಡವಳಾಗುತ್ತಿದ್ದಂತೆ ಕಾಲುಗಳು ಬರುತ್ತವೆ ಎಂಬ ಆಶಾಭಾವದ ಉತ್ತರ.ಇದೆ ಉತ್ತರಗಳಿಂದ ಸಂತೋಷ ದುಃಖದ ಕಾಲ ಕಳೆಯುತ್ತಿದ್ದಾಗ ನಾಲ್ಕುವರೆ ತುಂಬಿದ ಮಗು ಅನೇಮಿಯಾ ಖಾಯಿಲೆಯಿಂದ ತುರ್ತುಚಿಕಿತ್ಸೆಗೆ ಒಳಗಾಗಿ, ಮತ್ತೇ ಒಂದು ವಾರಗಳ ಕಾಲ ಚೇತರಿಸಿಕೊಂಡು,ಇಹಲೋಕವನ್ನು ತೇಜಿಸಿ,ಇಡೀ ಕುಟುಂಬವೇ ದುಃಖಕ್ಕೆ ಇಡು ಉಂಟುಮಾಡಿತು.ಮೂರು ಮಕ್ಕಳು ಕಣ್ಮುಂದೆ ಮೇಲಿಂದ ಮೇಲೆ ಸಾಯುತ್ತಿರುವಾಗ ಆ ದಂಪತಿಗಳ ನೋವು ಹೇಳತೀರದಾಗಿತ್ತು. ಎಷ್ಟೋ ಬಾರಿ, ಆತ್ಮ ಹತ್ಯೆಯಂತಹ ಯೋಚನೆಗಳು ಸುಳಿದಾಡಿದರೂ,ಅವುಗಳಿಗೇಲ್ಲಾ ಅವಕಾಶ ನೀಡದೇ ,ಎಲ್ಲ ವೈದ್ಯರು ಇದಕ್ಕೇಲ್ಲಾ ಆನುವಂಶೀಕತೆಯೇ ಕಾರಣವೆಂದು ಉತ್ತರ ನೀಡಿದರು.ಅವುಗಳಿಗೇಲ್ಲಾ ತಲೆ ಕೆಡಿಸಿಕೊಳ್ಳದೇ ನಮಗೆ ಇನ್ನುಮುಂದೆ ಮಕ್ಕಳೇ ಬೇಡಾ. ‘ನಾನು‌ ನಿನಗೆ ಮಗು, ನೀನು ನನಗೆ ಮಗು’ ಎಂಬ ತಮ್ಮ ಆತ್ಮವಿಶ್ವಾಸದೊಂದಿಗೆ ಪ್ರಸ್ತುತ ಜೀವನ ನಡೆಸುತ್ತಿದ್ದಾರೆ. ಪ್ರತಿ ಕಷ್ಟಗಳಿಗೂ ಹೆದರದೇ ಅನುವಂಶಿಕತೆ ಕಾರಣವಿದ್ದೂ ಅದನ್ನು ಹಿಮ್ಮಿಟ್ಟಿಸುವತ್ತ ಇನ್ನೂ ಮಕ್ಕಳ ಆಶಾಭಾವನೆಗಳೊಂದಿಗೆ ಜೀವನ ದೂಡುತ್ತಿದ್ದಾರೆ.

ಮನುಷ್ಯನ ಹಲವು ಕಷ್ಟಗಳಿಗೆ ಧೈರ್ಯವೇ ಜೀವನ ಎಂಬಂತೆ ಜೀವನ ನಡೆಸುವಂತಾಗಿದೆ. ಬಡತನದಲ್ಲಿ ಬೆಂದು ಬದುಕುವವರಿಗೆ ಮಾತ್ರ ಆ ದೇವರು ಪರೀಕ್ಷಿಸುತ್ತಾನೆ. ಈ ಥರದ ಕಷ್ಟಗಳು ಯಾರಿಗೂ ಬಾರದಿರಲಿ, ಬಂದರೂ ನಿಮ್ಮ ತನುವ ಕಳೆದು ಕೊಳ್ಳದೇ ಧೃತಿಗೆಡದೆ ಎದುರಿಸಿ ಎಂಬುದು ನಮ್ಮ ಅಭಿಲಾಷೆ.


  • ಪ್ರಶಾಂತ ಹೊಸಮನಿ (ಕತೆಗಾರರು, ಲೇಖಕರು) ನಾಗಠಾಣ ತಾ.ಜಿ.ವಿಜಯಪುರ

 

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW