ಕವಳಿಕಾಯಿ ಗೊಜ್ಜು – ಅರುಣ ಪ್ರಸಾದ್

ಒಂದು ಕಾಲದಲ್ಲಿ ಹಳ್ಳಿಯ ಸುತ್ತಲೂ, ಗುಡ್ಡಗಾಡಿನಲ್ಲಿ ಯಥೇಚ್ಚವಾಗಿದ್ದ ಕವಳಿ ಗಿಡ ಈಗಿಲ್ಲ.ಈ ಅಪರೂಪದ ಕವಳಿಕಾಯಿ ಸಿಕ್ಕಾಗ ಅದರಿಂದ ಗೊಜ್ಜು ಮಾಡಿದರೆ ಹೇಗಿರುತ್ತೆ? ಅನ್ನುವುದನ್ನು ಅರುಣ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

80-90ರ ದಶಕದಲ್ಲಿ ಉತ್ತರ ಕನ್ನಡದ ಕರಾವಳಿಯ ಸಂತೆಗಳಲ್ಲಿ ಕವಳಿಕಾಯಿ – ಹಣ್ಣು ಮಾರಾಟ ಮಾಡುತ್ತಿದ್ದ ಹಾಲಕ್ಕಿ ಮಹಿಳೆಯರು, ಗೋವಾದಲ್ಲಿ ಇದನ್ನು ಮಾರುವ ಕುಣುಬಿ ಮಹಿಳೆಯರು ಮತ್ತು ಬಯಲು ಸೀಮೆಯಲ್ಲಿ ಲಂಬಾಣಿ ಮಹಿಳೆಯರ ನೋಡಿದಾಗ ನಮಗೆಲ್ಲ ಸೋಜಿಗ ಯಾಕೆಂದರೆ ಆಗಿನ ದಿನದಲ್ಲಿ ನಮ್ಮ ಊರ ಕೊನೆಯ ಮನೆ ದಾಟಿದರೆ ಕವಳಿಕಾಯಿಯ ಸಾವಿರಾರು ಪೊದೆಗಳು ಇದ್ದವು, ಯಾರೂ ಮಾರಾಟ ಮಾಡುತ್ತಿರಲಿಲ್ಲ ಮತ್ತು ಖರೀದಿಸುವವರು ಇರಲಿಲ್ಲ.

ನಾವೆಲ್ಲ ಉಪ್ಪಿನ ಪೊಟ್ಟಣದ ಜೊತೆ ತರಹೇವಾರಿ ಕವಳಿಕಾಯಿ ಜಗಿದು ಚುಳ್ಳನಿಸುವ ದವಡೆ ದಂತದಿಂದ ಸಂಜೆ ಊರಿಗೆ ಬರುತ್ತಿದ್ದೆವು. ಕವಳಿ ಹಣ್ಣಿನ ಕಾಲದಲ್ಲಿ ಕೇಜಿಗಟ್ಟಲೆ ಕಪ್ಪು ದ್ರಾಕ್ಷಿಯ ತಿನ್ನುತ್ತಾ ಬೇಸಿಗೆ ರಜೆ ಕಳೆಯುತ್ತಿದ್ದೆವು.

ಆದರೆ ಈಗ ಕವಳಿ ಗಿಡ ಯಾಕೆ ನಶಿಸಿದೆ? ಯಾರಿಗೂ ಗೊತ್ತಿಲ್ಲ! ಇದನ್ನು ಬೇರಾವುದೇ ಉದ್ದೇಶಕ್ಕೆ ಬಳಕೆ ಇದ್ದರೆ ಈ ಸಸ್ಯ ನಶಿಸುತ್ತಿದೆ ಅಂತ ಭಾವಿಸಬಹುದಿತ್ತು ಅಂತದ್ದು ಯಾವುದೂ ಇಲ್ಲ ಆದರೆ ಈಗ ಕವಳಿ ಕಾಯಿ ಅಷ್ಟು ಸುಲಭದಲ್ಲಿ ಸಿಗುವುದಿಲ್ಲ. ನನ್ನ ಗೆಳೆಯರಾದ  ಘ೦ಟಿನಕೊಪ್ಪದ ಗಜೇಂದ್ರ ಮತ್ತು ಗೇರು ಬೀಸಿನ ಚನ್ನಪ್ಪ ಈ ವರ್ಷದ ಕವಳಿ ಪಸಲು ನೀಡಿದ್ದಾರೆ.

ಉಪ್ಪಿನಕಾಯಿಗೆ ಬಳಸಿ ಉಳಿದದ್ದು ಮಂದನ ಗೊಜ್ಜು ಮಾಡಿದೆ ಇಲ್ಲಿ ಇನ್ನೊಂದು ಹೇಳಬೇಕು ಕವಳಿಕಾಯಿ ಮಂದನ ಗೊಜ್ಜು ಮಾವಿನ ಮಂದನ ಗೊಜ್ಜಿಗಿಂತ ಹೆಚ್ಚು ಬಿನ್ನ ರುಚಿ.

ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ ಮತ್ತು ಭಾರತ ನೇಪಾಳ ಮತ್ತು ಶ್ರೀಲಂಕಾದಲ್ಲಿ ಇದು ನೈಸರ್ಗಿಕ ಬೆಳೆ ಆದರೂ ಇದರ ವಾಣಿಜ್ಯ ಬಳಕೆ ಇನ್ನೂ ಪ್ರಾರ೦ಬ ಆಗಿಲ್ಲ.
ಕ್ಯಾರಿಸ್ಸಾ ಕರಂಡಾಸ್ ಎಂಬ ಬಟೋನಿಕಲ್ ಹೆಸರಿನ ಈ ಕವಳಿ ಕಾಯಿ ಮತ್ತು ಕವಳಿ ಹಣ್ಣಿನ ಮೌಲ್ಯ ವರ್ಧನೆ ಕೆಲಸ ಮುಂದಿನ ದಿನಗಳಲ್ಲಿ ಆಗಬೇಕಾಗಿದೆ ಮತ್ತು ಈ ಸಸ್ಯ ಜನ ಸಾಂದ್ರತೆ ಪ್ರದೇಶದಿಂದಲೇ ನೈಸಗಿ೯ಕವಾಗಿ ದೂರವಾಗುವ ನಿಜಕಾರಣದ ಸಂಶೋದನೆಯೂ ಆಗಬೇಕಾಗಿದೆ.

ಕವಳಿಕಾಯಿಯ ಮಂದನ ಗೊಜ್ಜಿಗೆ ಬೇಕಾಗುವ ಸಾಮಾನುಗಳು :

ಕವಳಿಕಾಯಿ – ಒಂದು ಕಪ್‌
ನೀರು – ಒಂದು ಕಪ್
ಹಸಿ ಮೆಣಸು – 2
ಕೊಬ್ಬರಿ ಎಣ್ಣೆ – 3 ರಿಂದ 4 ಚಮಚ
ಸಾಸಿವೆ – ಸ್ವಲ್ಪ
ಮೆಂತ್ಯೆ – ಸ್ವಲ್ಪ
ಖಾರದ ಹಸಿ ಮೆಣಸು – 4
ಕಡಲೆ ಬೇಳೆ – ಒಂದು ಚಮಚ
ಉದ್ದಿನ ಬೇಳೆ – ಒಂದು ಚಮಚ
ಬೆಳ್ಳುಳ್ಳಿ- 10 ಎಸಳು
ಇಂಗು – ಕಾಲು ಸ್ಪೂನ್
ಅರಿಶಿಣ – ಸ್ವಲ್ಪ ಒಂದು ಎಸಳು
ಕರಿಬೇವಿನ ಎಲೆ ಸ್ವಲ್ಪ

ಮಾಡುವ ವಿಧಾನ :

ಒಂದು ಕಪ್‌ ಕವಳಿಕಾಯಿಯನ್ನು ಚನ್ನಾಗಿ ತೊಳೆಯಿರಿ. ಒಂದು ಕಪ್ ನೀರಿಗೆ ಎರಡು ಹಸಿ ಮೆಣಸಿನಕಾಯಿ ಹಾಕಿ ಬೇಯಿಸಿ. ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿಟ್ಟುಕೊಳ್ಳಿ.

ಬಾಣಲೆಯಲ್ಲಿ 3 ರಿಂದ 4 ಚಮಚ ಕೊಬ್ಬರಿ ಎಣ್ಣೆ ಬಿಸಿ ಮಾಡಿ, ಒಂದು ಚಮಚ ಸಾಸಿವೆ ಸಿಡಿಸಿ ನಂತರ ಅರ್ಧ ಚಮಚ ಮೆಂತ್ಯೆ , ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸಿನಕಾಯಿ,  ಕಡಲೆ ಬೇಳೆ, ಉದ್ದಿನ ಬೇಳೆ , ಬೆಳ್ಳುಳ್ಳಿ, ಇಂಗು, ಅರಿಶಿಣ, ಕರಿಬೇವಿನ ಎಲೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.

ಇದಕ್ಕೆ ಮಿಕ್ಸಿ ಮಾಡಿದ ಪೇಸ್ಟ್ ಸೇರಿಸಿ, ಅರ್ಧದಿಂದ ಮುಕ್ಕಾಲು ಕಪ್ ನೀರು ಸೇರಿಸಿ, ನಿಮ್ಮ ರುಚಿಗೆ ತಕ್ಕ ಉಪ್ಪು – ಬೆಲ್ಲ ಸೇರಿಸಿ, 3ರಿಂದ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಇಳಿಸಿ.

ಬಿಸಿ ಅನ್ನದ ಜೊತೆ ಕವಳಿಕಾಯಿಯ ಮಂದನ ಗೊಜ್ಜು ಇದ್ದರೇ ಅದರ ಗಮ್ಮತ್ತೇ ಬೇರೆ. ಅದಕ್ಕೆ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಸೇರಿಸಿ ಕಲಸಿಕೊಂಡು ಊಟ ಮಾಡಿದರೆ ಹೊಟ್ಟೆಗೆ ಸ್ವರ್ಗ ಸುಖ, ನೀವು ಮನೆಯಲ್ಲಿ ಮಾಡಿ ನೋಡಿ ಮತ್ತು ತಪ್ಪದೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ .


  • ಅರುಣ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW