ಎರಡು ಜಡೆ ಸೇರಿದಾಗ ಹುಟ್ಟುವುದು ಮಾತು….ಅದೇ ಇಬ್ಬರು ಕವಿಗಳು ಸೇರಿದಾಗ ಹುಟ್ಟುವುದು ಕವಿತೆಯ ಜುಗಲ್ ಬಂದಿ…ಕವಿಗಳಾದ ಸಿದ್ದರಾಜು ಸೊನ್ನದ ಹಾಗೂ ಚನ್ನಕೇಶವ ಜಿ ಲಾಳನಕಟ್ಟೆ ಅವರ ಕವಿತೆಯ ಜುಗಲ್ ಬಂದಿ.ಓದುಗರ ಮುಂದೆ…
ಪ್ರೀತಿಯಿಂದ ತಂದು ಕೊಟ್ಟೆ
ಮಡದಿಗೆ
ಮೈಸೂರು ಮಲ್ಲಿಗೆ
ಮುಡಿದುಕೊಂಡು
ಮೆಲ್ಲನೆ ಹೇಳಿದಳು
ಹೋಗಿ ಬರಲೇ..?
ಒಂದು ತಿಂಗಳು
ತವರಿಗೆ….!
- ಸಿದ್ದರಾಜು ಸೊನ್ನದ (ನೀನಾಸಂ ವಿದ್ಯಾರ್ಥಿ, ಕವಿಗಳು), ಬಾಗಲಕೋಟೆ

****
ಹೇಳಬೇಕಿತ್ತು
ಬಿಟ್ಟು ಹೋಗುವುದು ಎಲ್ಲಿಗೆ
ಇದ್ದು ಬಿಡು ಇಲ್ಲೆ ಮೆಲ್ಲಗೆ
ದಿನದಿನವು ತರುವೆ ಮಲ್ಲಿಗೆ.
- ಚನ್ನಕೇಶವ ಜಿ ಲಾಳನಕಟ್ಟೆ ((ಖ್ಯಾತ ಕವಿಗಳು , ಲೇಖಕರು) ಬೆಂಗಳೂರು

****
ಹೆಂಡತಿ ಹೋದರೆ
ತವರಿಗೆ…..
ನಮಗೆ… ಅನುಕೂಲವಾಗುತ್ತೆ
ಹೋಗಲು
ಬಾರಿಗೆ…..
- ಸಿದ್ದರಾಜು ಸೊನ್ನದ
****
ಅವಳಿದ್ದರೆ
ಮನೆಯೊಳಗೆ
ನನಗದೆ ದೇವರ ವರ
ಅವಳಿರದಿರೆ
ಸೇರುವೆ ಬಾರ
ಕುಡಿಯುವೆ ವಿರಹದಿ ಬಿಯರ್ರ
- ಚನ್ನಕೇಶವ ಜಿ ಲಾಳನಕಟ್ಟೆ