ಮೂಖದ ಸೌಂದರ್ಯ ಹೆಚ್ಚಿಸಲು ಮಾವಿನಹಣ್ಣಿನ ವಾಟೆಯ ಬಗ್ಗೆ ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಮಾಹಿತಿಯೊಂದನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಈಗ ಹಣ್ಣುಗಳ ರಾಜ ಮಾವಿನ ಹಣ್ಣಿನ ಕಾಲ. ಸಾಕಷ್ಟು ಜಾತಿಯ ಮಾವಿನ ಹಣ್ಣುಗಳು ಸಂತೆಯಲ್ಲಿ ಸಭ್ಯವಿದೆ. ಮಾವಿನ ಹಣ್ಣಿನ ರಸಾಯನ, ಐಸ್ ಕ್ರೀಮ್ ಹೀಗೆ ವಿವಿಧ ಖ್ಯಾದ್ಯಗಳಾಗಿ ಬಳಸುತ್ತೇವೆ. ಆದರೆ ಹಣ್ಣು ತಿಂದ ಮೇಲೆ ವಾಟೆಗೆ ಏನು ಕೆಲಸ ಅಂತ ಬಿಸಾಡಿಬಿಡುತ್ತೇವೆ.
ಫೋಟೋ ಕೃಪೆ : budget101
ಆ ತಪ್ಪನ್ನು ಮಾಡದೇ ವಾಟೆ ಒಡೆದು ಒಳಗೆ ಇರುವ ಬಿಳಿ ಬಣ್ಣದ ಬೀಜವನ್ನು ತಗೆಯಬೇಕು. ಬೀಜದ ಜೊತೆಗೆ ನೀರು ಹಾಕಿ ನುಣ್ಣಗೆ ಅರೆದು ಪೇಸ್ಟ್ ಮಾಡಿಟ್ಟುಕೊಳ್ಳಬೇಕು.ಅದನ್ನು ಮೂಖ, ಕುತ್ತಿಗೆ, ಮೊಣಕೈಗೆ ಹಚ್ಚಿ ಅರ್ಧ ಗಂಟೆಬಿಡಬೇಕು. ಚೆನ್ನಾಗಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊರೆಯಿರಿ.
ಹೀಗೆ ಮಾಡುವುದರಿಂದ ಕಪ್ಪು ಕಲೆಗಳು ಬಣ್ಣ ಕಳೆದುಕೊಂಡು ಮೂಖದ ಸೌಂದರ್ಯ ಹೆಚ್ಚುತ್ತದೆ. ಇದಕ್ಕೆ ಮೂಖಕ್ಕಾಗಿ ಉಪಯೋಗಿಸುವ ಯಾವ ಕ್ಲೇಂಜಿಂಗ್ ಸರಿಸಾಟಿ ಆಗಲಾರದು.
- ಸುಮನಾ ಮಳಲಗದ್ದೆ. (ನಾಟಿವೈದ್ಯೆ) 9980182883