ದಕ್ಷಿಣ ಕನ್ನಡ ಜಿಲ್ಲೆಯ ಸೌಂದರ್ಯ ಸೊಬಗನ್ನು ಹೆಚ್ಚಿಸುವ ಪ್ರಖ್ಯಾತ ನದಿಯೇ ನೇತ್ರಾವತಿ ನದಿ. ರ್ನಾಟಕದ ಕರಾವಳಿಯ ಪ್ರಸಿದ್ಧ ನದಿಯಾಗಿದ್ದು.ಈ ಜಿಲ್ಲೆಯ ಅತ್ಯಂತ ದೊಡ್ಡದಾದ ನದಿಯೂ ಕೂಡ ಹೌದು. ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ನೇತ್ರಾವತಿ ನದಿ ಕುರಿತಾಗಿದ್ದು , ತಪ್ಪದೆ ಮುಂದೆ ಓದಿ…
ಹೆಸರಿಗೆ ತಕ್ಕಂತೆ ಕಣ್ಣುಗಳನ್ನು ಚಕಿತಗೊಳಿಸುತ,ನೋಟವನ್ನೇ ತನ್ನತ್ತ ಸೆಳೆಯುತ.ನೋಡುಗರ ಮನವನು ಪುಳಕಿತಗೊಳಿಸುತ, ಹರಿಯುವ ಸ್ಥಳಗಳಿಗೆಲ್ಲ ಜೀವವನು ನೀಡುತ,ಬೆಳೆಗಳಿಗೆ ಉಸಿರನು ಕರುಣಿಸುತ ಮನಮೋಹಕ ರಮ್ಯ ರಮಣೀಯ ದೃಶ್ಯಗಳಿಗೆ ಜೀವನಾಡಿಯಾಗುತ,ಸಕಲ ಸಂಕುಲಗಳಿಗೆ ಆಸರೆಯಾಗಿ ಪೋಷಿಸುತ,ನಿಸರ್ಗವನ್ನು ಪ್ರೀತಿಸುವ ಹೃದಯಗಳನು ಆಕರ್ಷಿಸುತ ಕ್ಷಣ ಮಾತ್ರದಲ್ಲೇ ಪ್ರತಿಯೊಬ್ಬರ ಪಾಲಿನ ಸಂತಸದ ಸೆಲೆ. ಸೃಷ್ಟಿಯನ್ನು ನಿಬ್ಬೆರಗಾಗಿಸುವಂತೆ ಚೆಲುವ ಧಾರೆ ಎರೆಯುವ ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿ ಜನರ ಜೀವನಾಡಿಯಾದ ನದಿಯೇ ನೇತ್ರಾವತಿ ನದಿ.
ನಾಡಿನಲ್ಲಿ ತನ್ನದೆಯಾದ ಹೆಸರನು ಗಳಿಸಿ ಜನತೆಯ ಪಾಲಿನ ಕಲ್ಪವೃಕ್ಷವಾಗುತ. ತಾನು ಹರಿಯುವ ದಾರಿಗಳಲ್ಲಿ ಸಂಧಿಸುವ ಜನರಿಗೆ,ಪಕ್ಷಿಗಳಿಗೆ,ಮೃಗಗಳಿಗೆ ,ಭೂಮಿಗಳಿಗೆ ಒಟ್ಟಾರೆಯಾಗಿ ಜೀವ ಸಂಕುಲಗಳಿಗೆ ಜೀವಾಮೃತವಾಗುತ ಸದಾ ಹುರುಪು ಉಲ್ಲಾಸವನ್ನು ತುಂಬುತ ಪ್ರವಾಸಿಗರನ್ನು ಅಯಸ್ಕಾಂತದಂತೆ ತನ್ನತ್ತ ಸೆಳೆದು ಸಂತಸವನ್ನೇ ಉಣಬಡಿಸುವ ಗಂಗೆಯ ಮಡಿಲು, ನೋವುಗಳ ಮರೆಸುವ ಆನಂದದ ಒಡಲಿದು.

ಫೋಟೋ ಕೃಪೆ : GOOGLE
ದಕ್ಷಿಣ ಕನ್ನಡ ಜಿಲ್ಲೆಯ ಸೌಂದರ್ಯ ಸೊಬಗನ್ನು ಹೆಚ್ಚಿಸುವ ಪ್ರಖ್ಯಾತ ನದಿ. ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಜನ್ಮ ತಾಳುತ್ತದೆ. ಇದು ಭಾರತದ ಅತ್ಯಂತ ಪವಿತ್ರವಾದ ನದಿಯೆಂದು ಜನಮಾನಸದಲ್ಲಿ ನೆಲೆಸಿದೆ. ಕರ್ನಾಟಕದ ಕರಾವಳಿಯ ಪ್ರಸಿದ್ಧ ನದಿಯಾಗಿದ್ದು.ಈ ಜಿಲ್ಲೆಯ ಅತ್ಯಂತ ದೊಡ್ಡದಾದ ನದಿಯೂ ಕೂಡ ಹೌದು. ಇದು ಸಂಸೆಯಲಿ ಜನಿಸಿ ಹರಿಯುತ್ತಾ ಉಪ್ಪಿನಂಗಡಿಯಲ್ಲಿ ಕುಮಾರಧಾರೆ ನದಿಯೊಂದಿಗೆ ಸೇರಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.ಈ ನದಿ ಕನ್ನಡ ನಾಡಿನ ಅತ್ಯಂತ ಪ್ರಸಿದ್ಧತೆ ಪಡೆದ ಧಾರ್ಮಿಕ ಸ್ಥಳವಾದ ಶ್ರೀಕ್ಷೇತ್ರ ಧರ್ಮಸ್ಥಳದ ಮೂಲಕ ಈ ನದಿಯು ಹಾದು ಹೋಗುತ್ತದೆ.ಇದು ಮಂಗಳೂರು ಮತ್ತು ಬಂಟ್ವಾಳಕೆ ಪ್ರಮುಖ ಜಲಸಂಪನ್ಮೂಲವಾಗಿದ್ದು ಸಾವಿರಾರು ಹೆಕ್ಟೇರ್ ಭೂಮಿಗಳಿಗೆ ನೀರುಣಿಸುತ್ತಿದೆ.ಈ ನದಿಯ ದಡದ ಮೇಲೆ ರೇಲ್ವೆ ಸೇತುವೆಯನ್ನು ನಿರ್ಮಿಸಿದ್ದು ಮಂಗಳೂರಿನ ಸುತ್ತಮುತ್ತಲಿನ ಜನಕೆ ಇದರಿಂದ ಬಹಳಷ್ಟು ಅನುಕೂಲವಾಗಿದೆ.ಬಂಟ್ವಾಳ ನಗರವು ಈ ನದಿಯ ದಡದಲ್ಲಿರುವುದರಿಂದ ಮೊದಲು ಇದನ್ನು ಬಂಟ್ವಾಳ ನದಿ ಎಂದು ಕರೆಯಲಾಗುತ್ತಿತ್ತು.
ಈ ನದಿಯು ಹಲವಾರು ಉಪನದಿಗಳಾಗಿ ನಿರ್ಮಿತವಾಗಿವೆ. ಈ ನದಿಗಳು ವರ್ಷವಿಡಿ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಸದಾ ಕಾವಲಾಗಿವೆ.ಇದರ ಉಪನದಿಗಳಾದ ಹೇಮಾವತಿ,ಕಾವೇರಿ,ಕುಮಾರಾಧಾರಾ ನದಿಗಳು ಪ್ರಮುಖವಾಗಿವೆ.ಕುಮಾರಾಧಾರಾ ನದಿಯು ಕುಳಗುಂದದ ಬಯಲಿನ ಬಳಿ ಪುಣ್ಯಕ್ಷೇತ್ರವಾದ ಸುಬ್ರಹ್ಮಣ್ಯದ ಕ್ಷೇತ್ರದ ಮೂಲಕ ಹಾದು ಹೋಗಿದೆ. ನೇತ್ರಾವತಿ ನದಿ ಉಪ್ಪಿನಂಗಡಿ ಮೂಲಕ ಹರಿದು ಮಂಗಳೂರು ನಗರವನ್ನು ತಲುಪುತ್ತದೆ. ಈ ನದಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು ಬಹುಪಯೋಗಿ ಉದ್ದೇಶಗಳನ್ನು ಹೊಂದಿವೆ. ಬಂಟ್ವಾಳ ಮತ್ತು ಹಂಚಿಕಟ್ಟೆ ಬಳಿ ಅಣೆಕಟ್ಟು ನಿರ್ಮಿಸಿ ಕೊಳವೆಗಳ ಮೂಲಕ ಮಂಗಳೂರು ನಗರ, ನವಮಂಗಳೂರು ಬಂದರು,ವಲಯ ಹಾಗೂ ಸುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುತ್ತದೆ. ಈ ನೀರು ಕೃಷಿಗೆ ಕೂಡ ಉಪಯೋಗಿಸಲಾಗುತ್ತದೆ.

ಫೋಟೋ ಕೃಪೆ : GOOGLE
ಈ ನದಿಯ ದಡದಲ್ಲಿ ನೆಲೆಸಿರುವ ಜನಕೆ ವರದಾನವಾಗಿದೆ.ಇಲ್ಲಿ ವಾಸಿಸಿರುವ ಜನರ ಮುಖ್ಯ ಕೆಲಸ ಕೃಷಿ ಮತ್ತು ಮೀನುಗಾರಿಕೆಯಾಗಿದ್ದು.ಮಳೆಗಾಲದ ಸಮಯದಲ್ಲಿ ಕೃಷಿಗೆ ಅತ್ಯಂತ ಪ್ರಮುಖವಾದ ಮೂಲವಾಗಿದೆ.ಈ ನದಿಯು ಸುತ್ತಮುತ್ತಲೂ ಹಸಿರಾಗಿದ್ದು ಜಲಜೀವನದಿಂದ ಸಮೃದ್ಧವಾಗಿದೆ.ಇಲ್ಲಿ ನೆಲೆಸಿರುವ ಬಹಳಷ್ಟು ಜನರು ಮೀನುಗಾರಿಕೆ ಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ವೈವಿಧ್ಯಮಯ ಮೀನುಗಳು ಕಂಡು ಬರುತ್ತವೆ.ಇದು ಕುಟುಂಬಗಳಿಗೆ ಮೂಲಾಧಾರವಾಗಿದೆ. ಮನೆಗಳಿಗೆ ಕಟ್ಟಡಗಳಿಗೆ ಬೇಕಾಗಿರುವ ಉತ್ತಮ ಮರಳು ಇಲ್ಲಿ ದೊರೆಯುವುದರಿಂದ ಮರಳು ವ್ಯಾಪಾರಸ್ಥರಿಗೂ ಕೂಡ ವರದಾನವಾಗಿದೆ. ಈ ಮರಳನ್ನು ನದಿಯ ತಳದಿಂದ ತೆಗೆಯಲಾಗುತ್ತದೆ. ಈ ನದಿಯ ಸಮೀಪವಿರುವ 35,000
ಹೆಕ್ಟೇರ್ ಭತ್ತದ ಬೆಳೆಗಳಿಗೆ ನೀರುಣಿಸಿ ಏಳು ಲಕ್ಷ ರೈತರಿಗೆ ಉಸಿರಾಗಿದೆ.
ಈ ನದಿಯ ಮೇಲೆ ಹಲವಾರು ಜಲವಿದ್ಯುತ್ ಯೋಜನೆಗಳು ಮತ್ತು ತಿರುವು ಯೋಜನೆಗಳನ್ನು ಸ್ಥಾಪಿಸಲಾಗಿದೆ.ಇದು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ.ಏಕೆಂದರೆ ಇದು ಸೂಕ್ಷ್ಮವಾದ ಪ್ರದೇಶವಾಗಿದ್ದರಿಂದ ಅಧಿಕ ಹಾನಿಗೊಳಪಡುತ್ತದೆ.ಮತ್ತು ಅಧಿಕ ಯೋಜನೆಗಳು ಪ್ರಗತಿಯ ಹಂತದಲ್ಲಿದ್ದು ಕೆಲ ಯೋಜನೆಗಳು ಕಾರ್ಯಗತಗೊಂಡಿವೆ.ಪಶ್ಚಿಮ ಘಟ್ಟದ ಮೇಲಿನ ಒಣ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ನದಿಯ ಮಾರ್ಗ ಬದಲಾಯಿಸುವ ಪ್ರಸ್ತಾಪವೇ ವಿವಾದವನ್ನು ಹುಟ್ಟು ಹಾಕಿದೆ.ತಜ್ಞರ ಪ್ರಕಾರ ನದಿಯ ಮಾರ್ಗ ಬದಲಿಸುವುದರಿಂದ ಪರಿಸರಕ್ಕೆ ವಿಪತ್ತು ಒದಗುವುದಲ್ಲದೆ ಜೀವವೈವಿಧ್ಯತೆಗಳಿಗೆ ಆಪತ್ತು ಒದಗಿ ಬರಬಹುದು.ಹೇಗೆಂದರೆ ಸಿಹಿ ನೀರಿನ ಹೊರ ಹರಿವು ಕಡಿಮೆಯಾಗುವುದರಿಂದ ಸಮುದ್ರಕ್ಕೆ ಹರಿಯುವ ಪೋಷಕಾಂಶಗಳ ಕುಸಿಯುವುದರಿಂದ ಸಮುದ್ರ ಜೀವಿಗಳ ಮೇಲೆ ಪರಿಣಾಮ ಬೀರಬಹುದು.
ಈ ನದಿಯು ಉಕ್ಕಿ ಹರಿದಾಗ ಪ್ರವಾಹವು ಸಂಭವಿಸಬಹುದು 1928 ಮತ್ತು 1974ರಲ್ಲಿ ಬಂಟ್ವಾಳ ಮುಳುಗಡೆಯಾಗಿ ಜನ ಬೇರೆಡೆ ಸ್ಥಳಾಂತರಗೊಂಡಿದ್ದರು.ಹಾಗಾಗಿ ಈ ನದಿಯು ಪ್ರಶಾಂತದಿ ಹರಿಯುತ ಜನರ ಜೀವನಕೆ ದಾರಿದೀಪವಾಗುತ ಸಕಲ ಸಂಕುಲಗಳ ಪೊರೆಯುತ ಪರಿಸರದ ಕಳೆಯನ್ನು ಕಾಪಾಡಲಿ.
ಒಟ್ಟಿನಲ್ಲಿ ಈ ನದಿಯೊಂದಿಗಿನ ಯೋಜನೆಗಳು ಪರಿಸರಕ್ಕೆ ಧಕ್ಕೆಯಾಗದಂತೆ ಜೀವಸಂಕುಲವನ್ನು ಹತ್ತಿಕ್ಕದೆ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸಿದರೆ ಪರಿಸರವು ಉಳಿಯುತ್ತದೆ ನದಿಯಿಂದ ಅನುಕೂಲವು ಆಗುತ್ತದೆ. ನೇತ್ರಾವತಿ ನದಿ ಮಂಗಳೂರು ಜನರ ಬಾಳಿನ ಬುನಾದಿ ಜೀವನಕೆ ಸಂವೇದಿ.
ಹಿಂದಿನ ಸಂಚಿಕೆಗಳು :
- ಮಧ್ಯ ಭಾರತದ ಜೀವದಾತೆ : ಗೋದಾವರಿ ನದಿ
- ಪ್ರಕೃತಿಯ ಕೂಸು ದೇವಸ್ಥಾನಗಳ ಬಾಸು : ಭೀಮಾ ನದಿ
- ದೈವೀಕತೆಗೆ ಹೆಸರು ದೇವತೆಗಳ ಉಸಿರು – ಸರಸ್ವತಿ ನದಿ
- ನಿಸ್ವಾರ್ಥಕ್ಕೆ ಹೆಸರು ಸ್ನೇಹಕ್ಕೆ ಉಸಿರು – ವೇದಾವತಿ ನದಿ
- ಭಾರತದ ಮೇರು ಜೀವಸಂಕುಲದ ಉಸಿರು – ಮಹಾನದಿ
- ಶಿರಸಿಯ ಜೀವನಾಡಿ ಪಶ್ಚಿಮಘಟ್ಟದ ಕುಡಿ – ಅಘನಾಶಿನಿ ನದಿ
- ಶಿವಮೊಗ್ಗದ ಉಸಿರು ನಾಡಿಗೆ ಹೆಸರು – ಶರಾವತಿ
- ಉತ್ತರ ಕನ್ನಡದ ಉಸಿರು ವಿದ್ಯುತ್ ಗೆ ಹೆಸರು -ಕಾಳಿ ನದಿ
- ಕೇರಳದ ರಾಣಿ ಕನ್ನಡನಾಡಿನ ರಮಣಿ – ಕಪಿಲಾ ನದಿ
- ಅವಿನಾಶ ಸೆರೆಮನಿ
