ಕಪಿಲಾ ನದಿಯು ಕೇರಳದ ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಕೊಯಿಕ್ಕೊಡ್ ಜಿಲ್ಲೆಯ ಕವಿಲುಪಾರಂ ಬಳಿ ಹುಟ್ಟಿ, ಕೇರಳ ರಾಜ್ಯದಲ್ಲಿ ಜನ್ಮತಾಳಿ ಹರಿಯುತ್ತಾ ಕರ್ನಾಟಕ ರಾಜ್ಯವನ್ನು ಪ್ರವೇಶಿಸುತ್ತದೆ. ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ಪ್ರಕೃತಿಯ ಕೂಸು ದೇವಸ್ಥಾನಗಳ ಬಾಸು ಕಪಿಲಾ ನದಿ ಕುರಿತಾಗಿದ್ದು , ತಪ್ಪದೆ ಮುಂದೆ ಓದಿ…
ದಕ್ಷಿಣ ಭಾರತದಲ್ಲಿ ಮೈದುಂಬಿ ಹರಿಯುತ್ತಾ ಹಸಿರ ಕಾನನಗಳ ನಡುವೆ ಬಳುಕುತ್ತಾ ಕಲ್ಲಿನ ಕಿಕ್ಕಿರದಡವಿಂಚಿನಲ್ಲಿ ನೀರಿನ ಸದ್ದಿನ ಸಂಗೀತದ ನಾದವನ್ನು ಜೀವಸಂಕುಲಕೆ ಉಣಬಡಿಸುತ್ತಾ, ವನ್ಯ ಜೀವಿಗಳನ್ನು ಸದಾ ಪೊರೆಯುತ ಸಸ್ಯಸಂಕುಲದ ಚೆಲುವಿಗೆ ಕಾರಣವಾಗುತ ಪ್ರಕೃತಿಯ ಒಡಲನ್ನು ತಣಿಸುತ್ತಾ ತನ್ಮಯನಾಗಿ ಸಾಗಿ ಪ್ರಶಾಂತದಿ ಇಕ್ಕೆಲವುಗಳ ಭೇದಿಸುತ್ತಾ ಕೇರಳದ ರಾಜ್ಯದಿಂದ ಕನ್ನಡ ನಾಡಿನಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿದ ಮಹಾನದಿಯೇ ಕಪಿಲಾ ಅಥವಾ ಕಬಿನಿ ನದಿ.
ಅಪಾರ ದೇವಾಲಯಗಳನ್ನು ಹಾದು ಹೋಗುತ ಪುಣ್ಯ ಕ್ಷೇತ್ರಗಳಾಗಿ ಸ್ಥಾಪಿಸಿ. ಸಾವಿರಾರು ಭಕ್ತರ ಪಾಪಗಳನ್ನು ತೊಳೆಯುತ್ತಾ, ಭಕ್ತರ ಪಾಲಿನ ದೈವಿಕತೆಯ ಆರಾಧಿಸುತ,ತನ್ನೊಡಲಲಿ ಅಸಂಖ್ಯಾತ ಸಂಪನ್ಮೂಲಗಳನ್ನು ಹಿಡಿದಿಟ್ಟುಕೊಂಡು ಜೀವನಕೆ ನೆಲೆಯನು ನೀಡಿ,ಸಾವಿರಾರು ಹೆಕ್ಟೇರ್ ಭೂಮಿಗಳಿಗೆ ನೀರನ್ನು ಉಣಿಸುತ್ತಾ ಬೆಳೆಗಳನ್ನು ತಣಿಸುತ್ತಾ ಅಲ್ಲಲ್ಲಿ ಪಕ್ಷಿಸಂಕುಲಗಳಿಗೆ ಆಶ್ರಯವಾಗುತ ಸದಾ ದಕ್ಷಿಣ ಕನ್ನಡ ಜಿಲ್ಲೆಯ ಜನರ ಜೀವನಾಡಿ,ರೈತರ ಪಾಲಿನ ಸಂಜೀವಿನಿಯೇ ಕಪಿಲಾ ನದಿ.
ಈ ನದಿಯು ಕೇರಳ ರಾಜ್ಯದಲ್ಲಿ ಜನ್ಮತಾಳಿ ಹರಿಯುತ್ತಾ ಕರ್ನಾಟಕ ರಾಜ್ಯವನ್ನು ಪ್ರವೇಶಿಸುತ್ತದೆ. ಇದು ಕೇರಳದ ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಕೊಯಿಕ್ಕೊಡ್ ಜಿಲ್ಲೆಯ ಕವಿಲುಪಾರಂ ಬಳಿ ಹುಟ್ಟುತ್ತದೆ. ನಂತರ ವಯನಾಡ್ ಜಿಲ್ಲೆಯ ಮೂಲಕ ಪೂರ್ವಾಭಿಮುಖವಾಗಿ ಹರಿಯುತ್ತಾ ಸಕಲರ ದಾಹವನ್ನು ನೀಗಿಸುತ್ತಾ .ಮುಂದೆ ಸಾಗುತ್ತಾ ಕರ್ನಾಟಕದ ಮೈಸೂರು ಜಿಲ್ಲೆಯನ್ನು ಪ್ರವೇಶ ಮಾಡುತ್ತದೆ.ನಂತರ ತಿರುಮಕೂಡಲು ನರಸಿಂಹಪುರದಲ್ಲಿ ಕೊಡಗಿನ ಜನರ ಉಸಿರು ಕನ್ನಡ ನಾಡಿನಲ್ಲಿ ಹೆಸರಾದ ನದಿ ಕಾವೇರಿಯ ಒಡಲನ್ನು ಸೇರುತ್ತದೆ.

ಕಾವೇರಿ ನದಿಗೆ ಹಲವಾರು ಉಪನದಿಗಳಿವೆ ಅದರಲ್ಲಿ ತನ್ನದೇ ಆದ ವಿಶಿಷ್ಟತೆಯಿಂದ ಹೆಸರಾದ ಉಪನದಿಯೇ ಕಪಿಲಾ.ಇದು ಪ್ರಮುಖವಾದ ಉಪನದಿ. ಪಶ್ಚಿಮ ಘಟ್ಟದ ಮಲೆನಾಡ ಸೆರಗಲಿ ಆಶ್ರಯ ಪಡೆಯುತ್ತಾ ಭೂತಾಯಿ ಮಡಿಲನ್ನು ಸದಾ ಸಂಪನ್ನಗೊಳಿಸುತ್ತಾ ಮುನ್ನಡೆಯುತ್ತದೆ.
ಕಬಿನಿ ಅರಣ್ಯ ಮೀಸಲು ನಮ್ಮ ನಾಡು ಕಂಡ ಅತ್ಯಂತ ಹೆಸರಾಂತ ಜನಪ್ರಿಯ ವನ್ಯಜೀವಿ ತಾಣಗಳಲ್ಲೊಂದು. ಸುತ್ತಮುತ್ತಲೂ ಹಚ್ಚಹಸಿರಿನ ದೃಶ್ಯಗಳು,ಹುಲಿಗಳು ಆನೆಗಳು ಹಿಂಡು ಹಿಂಡಾಗಿ ಓಡಾಡುವ ಮಧುರ ದೃಶ್ಯಗಳು,ವನ್ಯಪ್ರೇಮಿಗಳನ್ನು ತನ್ನತ್ತ ಸೆಳೆದು ಛಾಯಾಚಿತ್ರ ಕ್ಲಿಕ್ಕಿಸಬೇಕೆನ್ನುವ ಮಹದಾಸೆ ಮೂಡದೆ ಇರದು. ಇದು ಮೈಸೂರಿನಿಂದ 61 ಕಿಮೀ ದೂರದಲ್ಲಿದೆ. ಕಪಿಲಾ ನದಿ ತಟದಲಿ ನೆಲೆಯಾಗಿರುವ ಈ ವನ್ಯಧಾಮ 55 ಏಕರೆಯ ಅಪಾರ ಅರಣ್ಯಭೂಮಿ, ಕಡಿದಾದ ಕಣಿವೆಗಳು.ಬೆಟ್ಟಗಳು ಮತ್ತು ಜಲಮೂಲಗಳಲ್ಲಿ ತನ್ನ ವ್ಯಾಪ್ತಿಯನ್ನು ಪಸರಿಸಿದೆ.ಇಲ್ಲಿ ವೈವಿಧ್ಯಮಯ ಪಕ್ಷಿಗಳು, ಪ್ರಾಣಿ ಸಂಕುಲಗಳು ನೆಲೆಸುತ ಅರಣ್ಯವನ್ನು ರಕ್ಷಿಸುತ ಪೋಷಿಸುತ್ತವೆ. ಇದು ಭಾರತದ ಹೆಸರಾಂತ ರಾಷ್ಟ್ರೀಯ ಉದ್ಯಾನವನಗಳಲ್ಲಿಯೇ ಹೆಸರುವಾಸಿಯಾಗಿ ತನ್ನತ್ತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಕಪಿಲೆ ಕೇರಳ ರಾಜ್ಯದಲ್ಲಿ ಹುಟ್ಟಿದ್ದರೂ ಕನ್ನಡ ನಾಡಿನ ಏಳಿಗೆಯಲ್ಲಿ ತನ್ನದೆಯಾದ ಪಾತ್ರವನ್ನು ವಹಿಸುತ್ತದೆ.ಈ ನದಿಯು ವಿವಿಧ ನದಿಗಳ ಜೊತೆ ಸ್ನೇಹವನ್ನು ಬೆಸೆದು ಜೊತೆಗೂಡಿ ಸಾಗುತ್ತಾ ಬರವನ್ನು ನೀಗಿಸಿದೆ. ಇದು ಕಾವೇರಿ ನದಿ,ಕಾಳಿನದಿ, ಪಾಪನಾಸಿನಿ ನದಿಗಳನ್ನು ಸೇರುತ್ತದೆ. ಹೀಗೆ ಕಪಿಲಾ ನದಿಯು ತ್ರಿವಳಿ ನದಿಗಳ ಜೊತೆ ಸದಾ ಹರಿಯುತ್ತದೆ.ಈಗಾಗಲೇ ಹೇಳಿದಂತೆ ಈ ನದಿ ಹಲವಾರು ಉಪನದಿಗಳ ಜೊತೆ ಸೇರುತ ವಿವಿಧ ಸ್ಥಳಗಳಾದ ಕೂಡಲು, ನರಸಿಂಹಪುರ,ಯಳಂದೂರು ,ಚಾಮರಾಜನಗರ, ಕೊಳ್ಳೇಗಾಲ ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವುದಲ್ಲದೆ, ಬರಗಳದಲ್ಲೇ ಇದೆ ನದಿ ನೀರು ಜನರಿಗೆ ವರದಾನವಾಗಿದೆ.ಅಲ್ಲದೆ ಸುತ್ತಮುತ್ತಲೂ ನವ್ಯವಾದ ಪರಿಸರವನ್ನು ನಿರ್ಮಿಸಿದಂತೆ ಭಾಸವಾಗಿ ಸ್ವರ್ಗದಂತ ಅನುಭವವನ್ನು ನೀಡುತ್ತದೆ.

ಈ ನದಿಗೆ ಕಬಿನಿ ಅಣೆಕಟ್ಟನ್ನು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ 1974ರಲ್ಲಿ ನಿರ್ಮಿಸಲಾಗಿದೆ ಇದನ್ನು ಬಹುಪಯೋಗಿ ಉದ್ದೇಶಗಳನ್ನು ಹೊಂದಿದೆ. ಈ ಅಣೆಕಟ್ಟು 696 ಮೀ ಉದ್ಧವಿದೆ.ಇದು ಸುಮಾರು 22 ಹಳ್ಳಿಗಳು ಮತ್ತು 14 ಗ್ರಾಮಗಳ ಜನರಿಗೆ ಅಗತ್ಯವಾದ ನೀರು ಪೂರೈಸುತ್ತದೆ. ಅಲ್ಲದೆ ಮೈಸೂರು ಮತ್ತು ಬೆಂಗಳೂರಿನ ಜನರಿಗೆ ಅತ್ಯಂತ ಪ್ರಮುಖವಾದ ಕುಡಿವ ನೀರಿನ ಮೂಲವಾಗಿದೆ.ಅಲ್ಲದೆ ಈ ಅಣೆಕಟ್ಟು ಸಾಗರದೊಡ್ಡಕೆರೆ ಮತ್ತು ಅಪ್ಪರ್ ನುಗು ಅಣೆಕಟ್ಟುಗಳ ಸಂಯುಕ್ತ ಯೋಜನೆಗೆ ನೀರು ಒದಗಿಸುತ್ತದೆ.ಮಳೆಗಾಲದಲ್ಲಿ ಇತರ ಅಣೆಕಟ್ಟುಗಳಿಗೂ ಕೂಡ ನೀರನ್ನು ಹರಿಸಿ ಅವುಗಳ ಮೂಲಕ ವಿವಿಧ ಉದ್ದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.ಈ ಅಣೆಕಟ್ಟು 55 ಎಕರೆ ಪ್ರದೇಶದ ಕಾಡುಗಳು, ಅರಣ್ಯಗಳು, ಸರೋವರಗಳು, ಕಣಿವೆಗಳನ್ನು ತನ್ನೊಡಲಲಿ ಪೋಷಿಸುತ್ತಿದೆ. ಈ ನದಿ ಮೇಲಿರುವ ಕಬಿನಿ ಸೇತುವೆಯು ಪಾರಂಪರಿಕ ಸ್ಮಾರಕವಾಗಿದೆ.
ಮೈಸೂರಿನ ಸುತ್ತೂರು ಜಗದೆಲ್ಲೆಡೆ ಹೆಸರು ಮಾಡುವಲ್ಲಿ ಕಪಿಲಾ ನದಿ ಪಾತ್ರ ಅಗಮ್ಯವಾಗಿದೆ. ಈ ಕ್ಷೇತ್ರ ಸಾಂಸ್ಕೃತಿಕ,ಧಾರ್ಮಿಕ ಕ್ಷೇತ್ರವಾಗಿ ಬೆಳವಣಿಗೆ ಹಲವಾರು ಅಂಶಗಳು ಪ್ರಮುಖವಾಗಿವೆ ಅದರಲ್ಲಿ. ಕಪಿಲಾ ನದಿ ಹರಿವು,ಮಣ್ಣಿನ ಫಲವತ್ತತೆ,ಕಾಲುವೆ ನೀರಾವರಿ,ಈ ನದಿ ಮೂಲಕ ಸರಕು ಸಾಗಾಣಿಕೆ, ಪ್ರಯಾಣಿಕರ ಸಾಗಾಣಿಕೆ ಮಾಡುವರು,ಈ ರೀತಿ ಸುತ್ತೂರಿನ ಪ್ರಸಿದ್ಧತೆಗೆ ಈ ನದಿ ಕಾರಣವಾಗಿದೆ. ಅಲ್ಲದೆ ಸಾವಿರಾರು ಹೆಕ್ಟೇರ್ ಭೂಮಿಗಳಿಗೆ ನೀರು ಒದಗಿಸಿ ರೈತರ ಪಾಲಿನ ಸಂಜೀವಿನಿಯಾಗಿದೆ.
ಈ ನದಿಯು ಮಳೆಗಾಲದಲ್ಲಿ ತುಂಬಿದಾಗ ಸುತ್ತಲಿನ ಊರುಗಳು ಮುಳುಗಡೆಯಾಗುತ್ತವೆ. ಹಾಗಾಗಿ ಸರ್ಕಾರವು ಕೂಡ ಈ ನದಿಯ ನೀರು ಹಳ್ಳಿಗಳಿಗೆ ನುಗ್ಗದಂತೆ ಪ್ರದೇಶವನ್ನು ವಿಸ್ತರಿಸಿ ನದಿಯ ನೀರನ್ನು ಸಂಗ್ರಹಿಸುವುದರ ಜೊತೆಗೆ ವಿವಿಧ ಕಾರ್ಯಗಳಿಗೆ ಬಳಸಲು ಸಹಕಾರಿ.ಸರ್ಕಾರವು ಕೂಡ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ನೀರಾವರಿ ಸೌಲಭ್ಯ ಒದಗಿಸಲಿ. ಆದರೆ ಯಾವುದೇ ರೀತಿ ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ತರಲಿ.ಜನರಿಗೆ ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲಿ.ಒಟ್ಟಿನಲ್ಲಿ ಕಬಿನಿ ಹೀಗೆ ಸದಾ ಕನ್ನಡನಾಡನ್ನು ಸಂಪದ್ಭರಿತಗೊಳಿಸಿ ಹಸಿರ ಸಿರಿಯನ್ನು ಸಂರಕ್ಷಿಸಿ ಜೀವಸಂಕುಲವ ಕಾಪಾಡಲಿ.
ಹಿಂದಿನ ಸಂಚಿಕೆಗಳು :
- ಮಧ್ಯ ಭಾರತದ ಜೀವದಾತೆ : ಗೋದಾವರಿ ನದಿ
- ಪ್ರಕೃತಿಯ ಕೂಸು ದೇವಸ್ಥಾನಗಳ ಬಾಸು : ಭೀಮಾ ನದಿ
- ದೈವೀಕತೆಗೆ ಹೆಸರು ದೇವತೆಗಳ ಉಸಿರು – ಸರಸ್ವತಿ ನದಿ
- ನಿಸ್ವಾರ್ಥಕ್ಕೆ ಹೆಸರು ಸ್ನೇಹಕ್ಕೆ ಉಸಿರು – ವೇದಾವತಿ ನದಿ
- ಭಾರತದ ಮೇರು ಜೀವಸಂಕುಲದ ಉಸಿರು – ಮಹಾನದಿ
- ಶಿರಸಿಯ ಜೀವನಾಡಿ ಪಶ್ಚಿಮಘಟ್ಟದ ಕುಡಿ – ಅಘನಾಶಿನಿ ನದಿ
- ಶಿವಮೊಗ್ಗದ ಉಸಿರು ನಾಡಿಗೆ ಹೆಸರು – ಶರಾವತಿ
- ಉತ್ತರ ಕನ್ನಡದ ಉಸಿರು ವಿದ್ಯುತ್ ಗೆ ಹೆಸರು -ಕಾಳಿ ನದಿ
- ಅವಿನಾಶ ಸೆರೆಮನಿ
