ನಂದಿನಿ ಹಾಲಿನ ವಿವಿಧ ಪ್ಯಾಕೆಟ್ ಹಿಂದಿನ ರಹಸ್ಯ



ಡಾ. ಪ್ರಕಾಶ ಬಾರ್ಕಿ ಅವರಿಗೆ ನಂದಿನಿ ಹಾಲಿನ ಶುದ್ಧತೆ ಬಗೆಗಿನ ಸಂದೇಹಗಳಿದ್ದವು. ನಂದಿನಿ ಹಾಲಿನ ಸಂಸ್ಥೆಗೆ ಮೇಲ್ ಮಾಡಿದ ನಂತರ ಅವರು ಫೋನಾಯಿಸಿ ಮಾತನಾಡಿದ್ದರು ಮತ್ತು ಅವರ ಪ್ರಶ್ನೆಗೆ ಮೇಲ್ ಮೂಲಕ ಸಹ ಉತ್ತರಿಸಿದ್ದರು.ಮುಂದೇನಾಯಿತು ಓದಿ…

#ನಂದಿನಿ_ಹಾಲಿನ_ವಿವಿಧ_ಬಣ್ಣದ_ಪ್ಯಾಕೆಟ್_ಇರುವುದರ_ಹಿಂದಿನ_ರಹಸ್ಯ ಒಮ್ಮೇ ಓದಿ ನೋಡಿ. ಎಲ್ಲಾದಕ್ಕೂ ನೀಲಿ ಪ್ಯಾಕೆಟ್ಟೇ ಬೇಕು ಅಂತಿಲ್ಲ. #ಕರ್ನಾಟಕ_ನಂದಿನಿ_ಹಾಲು_ ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ. ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟ್ಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗ್ತವೆ.

ಯಾವ ಉಪಯೋಗಕ್ಕೆ ಯಾವ ಬಣ್ಣದ ಪ್ಯಾಕೆಟ್ ತರ್ಬೇಕು ಅನ್ನೋ ಪ್ರಶ್ನೇನ ಎಲ್ಲರೂ ಹಾಕಿಕೊಳ್ಳೋದಿಲ್ಲ. ಎಲ್ಲರೂ ಯಾವುದು ಕೊಂಡ್ಕೋತಾರೋ ಅದನ್ನೇ ತರೋದು ವಾಡಿಕೆ. ಅದು ಸಾಮಾನ್ಯವಾಗಿ ನೀಲಿ ಬಣ್ಣದ ಪ್ಯಾಕೆಟ್ಟೇ ಆಗಿರುತ್ತೆ!

ಫೋಟೋ ಕೃಪೆ : ffrc.fssai.gov.in

ಆದರೆ ನಂದಿನಿ ಹಾಲ್ನ ಸರಿಯಾಗಿ ಬಳಸಬೇಕು, ಅದರಿಂದ ಆದಷ್ಟು ಹೆಚ್ಚು ಉಪಯೋಗ ಪಡ್ಕೋಬೇಕು ಅನ್ನೋದಾದರೆ ಕೆಳಗಿನ ಮಾಹಿತಿ ಗಮನದಲ್ಲಿಡಿ…

  • ಹಂಗೇ (ಕಾಯಿಸದೆ) ಕುಡಿಯಕ್ಕೆ: ಬೆಳಗ್ಗೆ ಎದ್ದು ಹಾಲು ಕಾಯಿಸಿ ಕುಡಿಯಕ್ಕೆ ಟೈಮ್ ಇಲ್ವಾ? ಹಾಗಾದರೆ ನಂದಿನಿ ಗುಡ್ ಲೈಫ್ ಮಿಲ್ಕ್ ಪ್ಯಾಕೆಟ್ ತೊಗೊಂಡು ಹಾಗೆಯೇ ಕುಡಿಬೋದು.
    ಯಾಕೆ ಗೊತ್ತಾ? ಈ ಹಾಲನ್ನು ಪ್ಯಾಕೆಟಿಗೆ ಹಾಕೋ ಮುಂಚೆನೇ ೧೩೭ ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ೪ ನಿಮಿಷಗಳ ತನಕ ಕಾಯಿಸಿ ತಕ್ಷಣವೇ ತಣ್ಣಗೆ ಮಾಡಿರುತ್ತಾರೆ. ಅದ್ದರಿಂದ ಈ ಹಾಲಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಕ್ಕೆ ಅವಕಾಶವಿಲ್ಲ. ಟೆಟ್ರಾ ಪ್ಯಾಕಿನಲ್ಲಿ ಹಾಕುವುದರಿಂದ ಹೊರಗಿನ ಯಾವ ಉಷ್ಣಾಂಶದಿಂದ ಹಾಲು ಒಡೆಯುವುದಿಲ್ಲ.
  • ಕಾಯಿಸಿ ಕುಡಿಯಲು: ಉಕ್ಕು ಬರುವ ತನಕ ಕಾಯಿಸಿಕೊಂಡು ಕುಡಿಯುವುದಕ್ಕೆ ನಂದಿನಿಯ ಯಾವ ಬಣ್ಣದ ಪ್ಯಾಕೆಟ್ ಬೇಕಾದರೂ ತರಬಹುದು.
  • ಕಾಫಿ ಅಥವಾ ಟೀ ಮಾಡಕ್ಕೆ: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದು ಮಾಡಿದರೆ ಹಾಲು ಒದಗುತ್ತದೆ. ಹೆಚ್ಚು ಲೋಟ ಕಾಫಿ/ಟೀ ಮಾಡಬಹುದು. ರುಚಿಯೂ ಚೆನ್ನ.
  • ಗಟ್ಟಿ ಕಾಫಿ ಮಾಡಕ್ಕೆ: ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದು ಗಟ್ಟಿ ಕಾಫಿ ಮಾಡಿಕೊಳ್ಳಬಹುದು. ಪೂರ್ತಿ ಕೆನೆಯ ಅಂಶ ಈ ಹಾಲಿನಲ್ಲಿ ಇರೋ ಹಾಗೆ ಮಾಡಿರುತ್ತಾರೆ. ಆದ್ರೇನೂ ಕೆನೆ-ಕೆನೆ ಕಟ್ಟಿಕೊಳ್ಳುವುದಿಲ್ಲ. ಯಾಕಂದ್ರೆ ಹೊಮೊಜಿನೈಸ್ಡ್ ಹದಕ್ಕೆ ಮಾಡಿರುತ್ತಾರೆ.
  • ಗಟ್ಟಿ ಮೊಸರು ಮಾಡಕ್ಕೆ: ನಂದಿನಿಯ ಸ್ಪೆಶಲ್ ಹಸಿರು ಬಣ್ಣದ ಪ್ಯಾಕೆಟ್ ಅಂದರೆ ಸ್ಪೆಶಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ.
  • ಪಾಯಸ ಅಥವಾ ಹಾಲಿನಿಂದ ಮಾಡುವ ಸಿಹಿ ಪದಾರ್ಥಗಳಿಗೆ: ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ತಂದರೆ ತುಂಬಾ ಚೆನ್ನಾಗಿ ಆಗತ್ತೆ. “ಮಿಲ್ಕ್ ಮೈಡ್” ತರುವ ಬದಲು.
  • ಪುಟ್ಟ ಮಕ್ಕಳಿಗೆ: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು.
  • ಹಿರಿಯರಿಗೆ: ನಂದಿನಿಯ ಗುಡ್ ಲೈಫ್ ಸ್ಲಿಮ್ಡ್ ಸ್ಕಿಮ್ ಮಿಲ್ಕ್ ಪ್ಯಾಕೆಟ್ ಕೂಡ ತೊಗೊಬಹುದು. ಇದರಲ್ಲಿ ಹೆಸರೇ ಹೇಳುವಂತೆ ಕೊಬ್ಬಿನಂಶ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಜೀರ್ಣಿಸಿಕೊಳ್ಳಲು ಸುಲಭ. ಇದಲ್ಲದೆ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ – ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲೂ ಕಡಿಮೆ ಕೊಬ್ಬಿನಂಶ ಇರತ್ತೆ.
  • ಕೊಬ್ಬು ಇಳಿಸಕ್ಕೆ: ಕೊಬ್ಬು ಕರಗಬೇಕು ಅಂತ ಹಾಲು ಕುಡಿಯೋದನ್ನ ನಿಲ್ಲಿಸಬಿಟ್ಟರೆ ಬೇರೆ ಪೌಷ್ಟಿಕಾಂಶಗಳ ಕೊರತೆ ಉಂಟಾಗತ್ತೆ. ಇದಕ್ಕೆ ಸುಲಭವಾಗಿ ಸಿಗುವ ನಂದಿನಿಯ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ – ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲಿ ಕಡಿಮೆ ಕೊಬ್ಬಿನಂಶ ಇರತ್ತೆ.
  • ಬೆಳೆಯುವ ಮಕ್ಕಳಿಗೆ: ಕಿತ್ತಳೆ ಬಣ್ಣದ ನಂದಿನಿಯ ಶುಭಂ ಪ್ಯಾಕೆಟ್… ಅಥವಾ ಸಂಪೂರ್ಣ ಸ್ಟ್ಯಾಂಡರ್ಡೈಸ್ಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ. ಯಾಕಂದ್ರೆ ಇದರಲ್ಲಿ ಬೆಳೆಯುವ ಮಕ್ಕಳಿಗೆ ಬೇಕಾಗುವ ಕೊಬ್ಬಿನಂಶ ಇರತ್ತೆ. ಅವರ ದಿನ ನಿತ್ಯದ ಚಟುವಟುಕೆಗಳಿಗೆ ಸಾಕಷ್ಟು ಶಕ್ತಿ ಕೊಡತ್ತೆ.
  • ಬರೀ ಹಸುವಿನ ಹಾಲು ಬೇಕು ಅನ್ನುವವರಿಗೆ: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು.
  • ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವವರಿಗೆ: ನಂದಿನಿ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕೆಟ್ ತೊಗೊಳ್ಳಿ.
  • ತುಂಬಾ ದಿನ ಇಟ್ಟುಕೊಳ್ಳಬೇಕಾದರೆ: ಪ್ರವಾಸಕ್ಕೆ ಹೋಗ್ಬೇಕು, ಮಕ್ಕಳಿಗೆ ಹಾಲು ಸಿಗಲ್ವಲ್ಲಾ ಅಂತ ಚಿಂತೆ ಬಂದರೆ ನಂದಿನಿಯ ಗುಡ್ ಲೈಫ್ ಟೆಟ್ರಾ ಪ್ಯಾಕ್ ತೊಗೊಳ್ಳಿ. ೧೦ ದಿನದ ತನಕ ಹಾಲನ್ನು ಹಾಗೆ ಕುಡಿಯಬಹುದು. ಕಾಯಿಸುವುದೂ ಬೇಡ. ಟೆಟ್ರಾ ಪ್ಯಾಕಿನಲ್ಲಿ ಇರುವುದರಿಂದ ಹಾಲು ಒಡೆಯುವುದಿಲ್ಲ.(ಸಂಗ್ರಹ)

  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW