ಡಾ. ಮಮತ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಮಾಸಗಳು ಒಡಲಲಿಟ್ಟು
ನೀ ನೀಡಿದೆ ಜನ್ಮ
ನೋವೆಲ್ಲಾ ಮರೆತು
ನೀ ಭುವಿಗಿಳಿಸಿದೆ ನನ್ನ
ಮಗುವಾಗಿ ನನ್ನ ಸ್ವೀಕರಿಸಿ
ಜೀವಕೆ ಶಕ್ತಿ ನೀಡಿದ ದೇವತೆ
ಮಮತೆ ವಾತ್ಸಲ್ಯ ನೀಡಿದ
ಪ್ರೀತಿಯ ಗಣಿ ನೀನವ್ವ
ಅವ್ವನ ಮಡಿಲೇ ನನಗೆ ರಕ್ಷಣೆ
ತಿನ್ನಿಸಿದ ತುತ್ತೇ ಅಮೃತ
ಅವ್ವನ ಹೆಗಲೇ ಬದುಕೆನಗೆ
ಹೆಗಲೇರಿ ಸುತ್ತುವೆ ಊರೆಲ್ಲಾ
ಬೇಧ-ಭಾವವೇ ಇಲ್ಲದ ಪ್ರೀತಿ ನಿನ್ನದು
ಚಳಿ-ಗಾಳಿ-ಮಳೆ-ಬಿಸಿಲು ಚಿಂತೆಯಿಲ್ಲದೆ
ಆಡುತ ನಲಿಯುತಾ ನಾ ತೇಲಿದೆ ನಿನ್ನೊಂದಿಗೆ
ಯಾವ ಜನ್ಮದ ಅನುಬಂಧವೋ
ನನಗರಿವಿಲ್ಲ.
- ಡಾ. ಮಮತ (ಕಾವ್ಯ ಬುದ್ಧ)