‘ನವರಾತ್ರಿ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ‘ನವರಾತ್ರಿ’ ಕವನದ ಮೂಲಕ ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಒಳಿತು ಮಾಡಲಿ ಎಂದು ಶುಭ ಹಾರೈಸುತ್ತೇವೆ.

ನವರಾತ್ರಿ ಬಂದಿಹುದು
ನವರೂಪ ದುರ್ಗೆಯರು
ನವದಿನವು ಪೂಜೆಯನು ಮಾಡುತ್ತೇವೆ
ನವತರದಿ ನೈವೇದ್ಯ
ನವಧಾನ್ಯ ನೀಡುತಲಿ
ನವಕಾಲ ಹರಸಲು ಬೇಡುತ್ತೇವೆ

ಮಹಿಷನನು ಮರ್ಧಿಸುತ
ಮಹಿಮೆಯನು ವರ್ಧಿಸುತ
ಮಹಿಯನ್ನು ರಕ್ಷಿಸಿದ ಚಾಮುಂಡಿಯೇ
ಮಹಿಳೆಯರ ರೂಪದಲಿ
ಮಹಕಾಯ ರಕ್ಕಸನ
ಮಹಕಾಳಿಯಾಗುತೊಧಿಸಿಹ ದೇವಿಯೇ

ಇಷ್ಟದಿಂದಪ್ಪಿದರೆ
ಕಷ್ಟವನ್ನೀಗುತಲಿ
ಶಿಷ್ಟರನ್ನಪಿರುವ ಜಗದಾಂಬೆಯೇ
ಅಷ್ಟದಿಕ್ಕುಗಳನ್ನು
ಮುಷ್ಟಿಯಿಂದಿಡಿಯುತಲಿ
ದುಷ್ಟರನ್ನೊಧಿಸುವ ದುರ್ಗಾಂಬೆಯೇ

ಶರಣೆನ್ನುತಪ್ಪಿಹೆವು
ಕರಮುಗಿದು ಬೇಡಿಹೆವು
ವರವೆರೆದು ಹರಸೆಂದು ಬೇಡಿರುವೆವು
ನರಮನುಜರಾಗಿಹೆವು
ಹೊರೆಯಾದ ಮನಸಿಹುದು
ತರತರದ ಜ್ಞಾನಕ್ಕೆ ಮೊರೆತಿರುವೆವು.


  • ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW