ಅವನ ನೆನಪುಗಳು ಕಾಡಿದಾಗ ಹುಟ್ಟುವುದು ಸಣ್ಣ ಹನಿಯ ಕವಿತೆಗಳು. ಯುವ ಕವಿಯತ್ರಿ ಶೃತಿ ಅವರು ಬರೆದ ಮೊದಲ ಹನಿಗವನವನ್ನು ಓದಿ, ಪ್ರೋತ್ಸಾಹಿಸಿ…
ಆಸರೆ ಇಲ್ಲದೆ
ಆಸೆಯ ಹೊತ್ತಿ ಬಂದೆ..
ಬಯಕೆ ಇಲ್ಲದ ಬಂದನದೊಳಗೆ
ಬೆಂದು ಹೋದೆ..
ನೋವಿಲ್ಲದ ನೆಲೆಯಲ್ಲಿ
ನೋವಿನ ಅಲೆಯಾಗಿ ನಿಂದೆ
***
ಮುಗುಳ್ ನಗೆಯ
ಮಂದಹಾಸಕ್ಕೆ
ಹೂವಿನ ಆಸರೆ..
ಭ್ರಮರವೇ ಸೋತು ಆಗಿದೆ
ನಿನ್ನ ಕೈಸೆರೆ..
***
ಬಣ್ಣ ಬಣ್ಣದ ಲೋಕ
ಬಣ್ಣಿಸಲಾಗದೆ
ಕಾಲ ಚಕ್ರ ಉರುಳಿ ಉರುಳಿ
ಮನುಜನೇ ಸಂತೆಯ ನಡುವೆ
ಪ್ರೀತಿ ಕಳೆದೆ ಹೋಯಿತಾ
***
ನೆನಪುಗಳೇ ಜೀವಂತ
ಜ್ವಾಲೆ
ಸುಡುತ್ತಿದೆ ಮನವ ಒಂದೊಂದೆ…
ಏನ್ ಮಾಡಲಿ ನಾ
ನೀನಿಲ್ಲದೆ, ಬಾಳು
ಶೂನ್ಯ ಶೂನ್ಯ…
- ಶೃತಿ (ಗೃಹಿಣಿ, ಯುವ ಕವಿಯತ್ರಿ)