೨೦೨೦ ನೇಯ ವರ್ಷ ಎಂದೂ,ಯಾರು ಮರೆಯದ ವರ್ಷ. ಆ ಕಹಿ ಅನುಭವವನ್ನು ಮರೆತು ಹೊಸ ವರ್ಷ ಹೊಸ ಹುರುಪಿನಿಂದ ಕರೋನ ಕಲಿಸಿದ ಪಾಠದಿಂದ ಮುನ್ನಗೋಣ…
ವರ್ಷಗಳು ಉರುಳುವವು. ಆದರೆ ೨೦೨೦ನೇ ವರ್ಷ ಬಹಳ ಜನಮಾನಸಕ್ಕೆ ಒಂದು ಹೊಸ ಅನುಭೂತಿ ನೀಡಿತು ಮತ್ತು ಮರೆಯಲಾಗದ ವರ್ಷ. ಅನುಭವಗಳು ಸಿಹಿಯಾದರೂ, ಕಹಿಯಾದರೂ ಕಾಡುತ್ತವೆ, ಲಾಕ್ಡೌನ್, ಕ್ವಾರಂನ್ಟೈನ್ , ಸೀಲ್ಡೌನ್ ಎಂಬ ಪದಗಳು ಮಕ್ಕಳಿಂದ- ಹಿರಿಯರವರೆಗೂ ಶಬ್ದಕೋಶವಿಲ್ಲದೆ ಅರ್ಥವಾದ ಪದ ಎಂದೇ ಹೇಳಬೇಕು.
ಫೋಟೋ ಕೃಪೆ : BGR
ಒಂದು ಸೂಕ್ಷ್ಮ ಜೀವಿ ಜಗತ್ತನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಟು ಮೆರೆಯಿತು. ಈ ಸೂಕ್ಷ್ಮ ಣು ಜೀವಿಗಳು ಮಾನವನಿಗೆ ಹೊಸದಲ್ಲ. ಶೀತ, ಜ್ವರದಿಂದ ಮೊಸರು, ದೋಸೆ ಹಿಟ್ಟು , ಬೇಕರಿಗಳಲ್ಲಿ ಇವುಗಳ ಪಾತ್ರ ದೊಡ್ಡದು. ಹೆಚ್ಚಾಗಿ ಮಾನವನ ಬದುಕಿಗೆ ಪೊರಕವಾಗಿದ್ದ ಜೀವಿಯು ಮಾರವಾಗಿ ಕಾಡಿತ್ತು ಕೈಗೆ ಸಿಗದೆ. ಸದಾ ಸದ್ದು- ಗದ್ದಲಗಳಿಂದ ಜನ ಜಂಗುಳಿಯಿಂದ ಬದುಕುತ್ತಿದ್ದ ಭಾರತವನ್ನೆ ಸ್ತಬ್ಧ ಮಾಡಿತು. ಈ ಜೀವಿಯ ಕೃಪೆಯಿಂದ ಮುಚ್ಚಿಂದ ಅಂಗಡಿ ಮುಂಗಟ್ಟುಗಳು, ಸ್ಮಶಾನ ಮೌನದ ಬೀದಿಗಳು ಜನ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲು ಪೈಪೋಟಿ ನೀಡುವ ನಮ್ಮ ಜನತೆ ಅಡಗಿತ್ತು ಒಂದೇ ಸೂರಿನಡಿ ತಿಂಗಳುಗಳವರೆಗೆ. ಮಕ್ಕಳಿಗೆ ಅನೀರಿಕ್ಷತ ರಜೆ ದೊರೆತರೆ, ಅಡುಗೆ ಮನೆಗೆ ಬಂದ್ ವಿಲ್ಲದೆ ಗೃಹಿಣಿಯರು ಹೈರಾಣಾದರು.
ಕರೋನಾಗಿಂತ ನಾಳೆಗೆ ರೇಷನ್ ಸಿಗುವುದೋ ಇಲ್ಲವೋ ಎನ್ನುವ ಅಂತಕವೇ ದೊಡ್ಡದಾಗಿತ್ತು. ನಸುಕಿನಲ್ಲಿ ತರಕಾರಿ ಅಂಗಡಿ ಮುಂದೆ ಕ್ಯೂ ನಿಲ್ಲುವ ಸಂಗತಿ. ಪೋಲಿಸ್ ರನ್ನು ಕಂಡಾಗ ಗದ್ದದ ಬಳಿ, ಜೇಬ್ ಲ್ಲಿ ಇದ್ದ ಮಾಸ್ಕ ಮೂಗಿಗೆ ಅಲಂಕಾರವಾಯಿತು. ಇಲ್ಲವಾದರೆ ದೀರ್ಘ ಉಸಿರಿನ ಆನಂದ. ಇದ್ದ ಸವಾಲುಗಳಿಗಿಂತ ಪುಟ್ಟ ಪುಟ್ಟ ಸಂಗತಿಗಳೆ ಭೂತವಾಗಿ ನಿಂತವು.
ಹೊತ್ತು ಕಳೆಯಲು ಮೊಬೈಲ್ ಒಂದು ಅಲ್ಲಾವುದ್ದೀನನ ದೀಪದಂತೆ ಕಿರಿಯರಿಗೂ, ಹಿರಿಯರಗೂ ವರವಾಯಿತು. ಮನೆಯ ಪಕ್ಕದಲ್ಲಿ ಎನಾಗಿದೆ ಎಂಬುದು ತಿಳಿಯದಿದ್ದರೂ ದೆಹಲಿಯ ಕರೋನ ಸ್ಥಿತಿಗತಿ ತಿಳಿಯಲು ವಿಳಂಬವಾಗಲಿಲ್ಲ. ಹಲವರಿಗೆ ಕತ್ತು, ಕಣ್ಣು ನೋವು ಬಂದರೂ ಬಿಡುವ ಹಾಗಿರಲಿಲ್ಲ. ಅಷ್ಟೊಂದು ಭಯ ಎಲ್ಲರಲ್ಲೂ ಆವರಿಸಿತ್ತು. ಯಾಕೆಂದರೆ ಸಮಯ ಕಳೆಯಲು ಅಷ್ಟು ಸುಲಭ ಅಲ್ಲ.
ಫೋಟೋ ಕೃಪೆ : Freepik
ಭಾರತೀಯರು ಹೆಣ್ಣನ್ನು ಪೂಜಿಸುವವರು. ಆರಾಧಿಸುವರು. ಆದರೆ ಇಂತಹ ಸಂದಿಗ್ಧತೆಯಲ್ಲಿಯೂ ಮಹಿಳೆಯರ ಮೇಲಿನ ಶೋಷಣೆ ನಡೆಯಿತು. ಕೆಲವೊಮ್ಮೆ ಹೃದಯ ನಲುಗಿಸುವಂತ ದುರ್ಘಟನೆಗಳು ಹೆಣ್ಣಿನ ಮೇಲೆ ನಡೆದವು. ಹೆಣ್ಣು ಧೈರ್ಯದಿಂದ ಬದುಕಿದರೆ ಸಮಾಜ ಆಕೆಯನ್ನು ಘಟವಾಣಿ, ಗಂಡುಬೀರಿ ಎಂದು ಬಿರುದು ಕೊಡುವರು. ಸಹಿಸಿಕೊಂಡು ಬಾಳಿದರೆ ಹೇಡಿ ಎಂಬ ಪಟ್ಟ ಕಟ್ಟುವರು. ಆದರೆ ಈ ವರ್ಷ ಆ ಹೆಣ್ಣು ಎಂಥಹ ಸಂದಿಗ್ಧ ಪರಿಸ್ಥಿಯಲ್ಲೂ ಆಕೆ ಸಬಲೆ ಅಂದು ನಿರೂಪಿಸಿತು.
ಉತ್ಪನೆಯಾದರೂ ಸಾಗಣೆ ಇಲ್ಲದೆ ತೃತೀಯ ವಲಯದ ಕಾರ್ಯವಿಲ್ಲದೆ ದೇಶದ ಆರ್ಥಿಕ ವ್ಯವಸ್ಥೆ ಬುಡ ಮೇಲಾಯಿತು. ಇದರಿಂದ ಜನಸಾಮಾನ್ಯರು ಬೆಂದರು. ಬದಲಾವಣೆಯೂ ಜಗದ ನಿಯಮ ಅದರಂತೆ ಎಲ್ಲರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
- ರೇಶ್ಮಾಗುಳೇದಗುಡ್ಡಾಕರ್