‘ರಾತ್ರಿ’ ಕವನ – ಮೇಗರವಳ್ಳಿ ರಮೇಶ್

ಸುಪ್ರಸಿದ್ಧ ‘ರೊಮಾನಿಯನ್’ ಕವಿ ‘ಮಾರಿನ್ ಸೊರೆಸ್ಕು’ ರ “ನೈಟ್” ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕವಿ ಮೇಗರವಳ್ಳಿ ರಮೇಶ್ ಅವರು, ತಪ್ಪದೆ ಓದಿ…..

ರಾತ್ರಿ
ಪ್ರಸಿದ್ಧಿ ತಾನಾಗಿಯೇ ಬ೦ತು ಅವನಿಗೆ
ಪರ್ವತದ ನೆರಳಿನ ಹಾಗೆ
ಅದರ ಬಾಗು ಬೆನ್ನಿನ ಮೇಲೆ
ಸುರ್ಯ ಭಾರವಾಗಿದ್ದ.
ಅದು ಮ೦ಕಾಯಿತು ಮುಸ್ಸ೦ಜೆಯಲ್ಲಿ
ಬಾಡಿಯೇ ಹೋಯಿತು ರಾತ್ರಿ ಕತ್ತಲಲ್ಲಿ
ಯಾಕೆ೦ದರೆ
ಅದರ ಎತ್ತರ ಅಷ್ಟಿತ್ತು.

ಅದರಿ೦ದಾಗಿ ಅವನು
ದೂರದರ್ಷಿತ್ವವನ್ನು ಕಳೆದು ಕೊ೦ಡಿದ್ದ
ಕೈಯಳತೆಯಲ್ಲಿರುವುದನ್ನೂ ಗ್ರಹಿಸ ಲಾರದವನಾಗಿದ್ದ.
ನಿಧ್ ನಿಧಾನ ಅವನು
ಕರಗಿ ಹೋದ ಕತ್ತಲಲ್ಲಿ.

ಅವನೊಳಗಿ೦ದ ಹೊರ ಬಿದ್ದ
ಅವನ ರಾತ್ರಿಗಳಲ್ಲಿ
ಬುಗ್ಗೆಯ೦ತೆ ಉಕ್ಕಿದವು ನಕ್ಷತ್ರಗಳು.


  • ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW