‘ಜಾತಿ ಧರ್ಮ ಪಂಥಗಳೆಲ್ಲ ಮುಂದೆ ಎಂದೂ ಬಾರದಿರಲಿ!’… ಸುಂದರ ಸಾಲುಗಳು ಕವಿ ಮಹದೇವಸ್ವಾಮಿ ಎಂ ಕೆ ಅವರ ಕವಿತೆಯಲ್ಲಿ, ಮುಂದೆ ಓದಿ…
ಕೆಟ್ಟ ಜಗವು ಕೊಚ್ಚಿ ಹೋಗಿ
ಹೊಸ ಬದುಕು ಮೂಡಲಿ!
ದ್ವೇಷಮತ್ಸರ ತೊಡೆದು ಹೋಗಿ
ಹೊಸ ಜೀವನ ಸೃಷ್ಟಿಯಾಗಲಿ!!
ಜಾತಿ ಧರ್ಮ ಪಂಥಗಳೆಲ್ಲ
ಮುಂದೆ ಎಂದೂ ಬಾರದಿರಲಿ!
ನಾನು ನೀನು ಎಲ್ಲಾ ಒಂದೇ
ಎಂಬ ಭಾವ ಮೂಡಿ ಬರಲಿ!!
ಕಸುಬಿಗೊಂದು ಜಾತಿ ಧರ್ಮ
ಇಂದೇ ತೊಲಗಲಿ!
ಗಂಡು ಹೆಣ್ಣುಗಳೆಂಬ ಎರಡೇ
ಜಾತಿ ಉಳಿಯಲಿ ಜಗದಲ್ಲಿ!!
ಅವರು ಹಿಂದೂ, ಇಸ್ಲಾಂ, ಕ್ರೈಸ್ತ
ಎಂದು ಸೃಷ್ಟಿಸಬೇಡಿ ಬಿಕ್ಕಟ್ಟ!
ಜಾತಿ ಧರ್ಮದ ಹೆಸರಿನಲ್ಲಿ ಯಾರು
ಹೊಡೆಯದಿರಿ ನಮ್ಮೆಲ್ಲರ ಒಗ್ಗಟ್ಟ!!
- ಮಹದೇವಸ್ವಾಮಿ ಎಂ ಕೆ ಮಡಹಳ್ಳಿ