‘ಸಾಕಪ್ಪ ಸಾಕು ದೇವರೇ ಮಾನವ ಜನ್ಮ’…! ಪ್ರೊ. ಸಿದ್ದು ಸಾವಳಸಂಗ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನನ್ನ ಅಳಲನ್ನು ಸ್ವಲ್ಪ ಕಿವಿಗೊಟ್ಟು ಕೇಳು
ನೀನೇ ಪರಿಹರಿಸು ನನ್ನ ಅನುದಿನದ ಗೋಳು !
ಮನೆಗೆ ಬಂದರೆ ಹೆಂಡತಿ ಮಕ್ಕಳ ಕಾಟ
ಮತ್ತೆ ನೆರೆಹೊರೆಯವರ ಹುಚ್ಚು ಕಾಟ !
ಉದ್ಯೋಗಕ್ಕೆ ಬಂದರೆ ಸಹೋದ್ಯೋಗಿಗಳ ಕಾಟ
ರಸ್ತೆಗೆ ಬಂದರೆ ತಗ್ಗು ಗುಂಡಿಗಳ ಕಾಟ
ಮೇಲಾಗಿ ಪೊಲೀಸರದು ಅತೀ ಕಾಟ !
ಮದುವೆಯ ಮುಂಜಿವೆಗಳಲ್ಲಿ ಜನರ ಕಾಟ
ಸರಕಾರಿ ಕಚೇರಿಗಳಲ್ಲಿ ಲಂಚದ ಕಾಟ !
ಬ್ಯಾಂಕುಗಳಲ್ಲಿ ಸರ್ವರ್ ಕಾಟ
ಸರಕಾರಿ ಬಸ್ಸುಗಳಲ್ಲಿ ಮಹಿಳೆಯರ ಕಾಟ !
ಬೇಸಿಗೆಯಲ್ಲಿ ವಿದ್ಯುತ್ ಕಾಟ
ನಿದ್ದೆಯಿಲ್ಲದೆ ರಾತ್ರಿಯಿಡೀ ಬರೀ ಒದ್ದಾಟ !
ಜೂನ್ ತಿಂಗಳು ಬಂದರೆ ಶಾಲೆ ಕಾಲೇಜುಗಳಲ್ಲಿ
ಮಕ್ಕಳ ಪೀಜು ತುಂಬವ ಕಾಟ !
ಕಿರಾಣಿ ಅಂಗಡಿಗಳಲ್ಲಿ ಕಲಬೆರಕೆಯ ಕಾಟ
ಸೊಪ್ಪು ತರಕಾರಿಗಳಲ್ಲಿ ಕೆಮಿಕಲ್ ಕಾಟ !
ಆಸ್ಪತ್ರೆಗಳಲ್ಲಿ ಗುಳಿಗೆ ಔಷಧೀಯ ಕಾಟ
ಮೀಡಿಯಾಗಳಲ್ಲಿ ಕೊಲೆ ಸುಲಿಗೆ ವರದಿಯ ಕಾಟ !
ಸಂಜೆಯಾದ ಮೇಲೆ ಕುಡುಕರ ಕಾಟ
ಅವರದು ಪಾಪ ಬರೀ ನರಳಾಟ !
ಮೊಬೈಲ್ ಗಳಲ್ಲಿ ಹ್ಯಾಕರ್ಸ್ ಕಾಟ
ಮೊಬೈಲ್ ಇಲ್ಲದಿದ್ದರೆ ಬದುಕೇ ಒದ್ದಾಟ !
ಹಬ್ಬಹರಿದಿನಗಳಲ್ಲಿ ಹಣ ಹೊಂದಿಸುವ ಕಾಟ
ಬಟ್ಟೆಯಯಂಗಡಿಯಲ್ಲಿ ಖರೀದಿಗಾಗಿ ಬಡಿದಾಟ !
ಮಳೆಗಾಲದಲ್ಲಿ ಕೆಮ್ಮು ನೆಗಡಿಯ ಕಾಟ
ರಾತ್ರಿಯಿಡೀ ಗುಂಯ್ ಗುಡುವ ಸೊಳ್ಳೆಗಳದೇ ಆಟ !
ಚಳಿಗಾಲದಲ್ಲಿ ವಿಪರೀತ ಚಳಿಯ ಕಾಟ
ಮಲಗಲು ರೆಗ್ಗಿಲ್ಲದೆ ಹೊದಿಕೆಗಾಗಿ ಹುಡುಕಾಟ !
ವಯಸ್ಸಾದ ಮೇಲೆ ಮನೆಯವರೆಲ್ಲರಿಗೂ ಕಾಟ
ಹಾಸಿಗೆಯ ಮೇಲೆ ಬಿದ್ದು ನರಕಯಾತನೆಯ ನೋಟ !
ಸಾಕಪ್ಪ ಸಾಕು ದೇವರೇ ಮಾನವ ಜನ್ಮ !
ಮುಂದಿನ ಜನ್ಮ ಎನ್ನುವುದೊಂದಿದ್ದರೆ
ಹುಟ್ಟಿಸು ನನ್ನನ್ನು ಗಿಡ ಮರವನ್ನಾಗಿ !
ಕೊಡುವೆನು ಸಕಲರಿಗೂ ಆಮ್ಲಜನಕವನ್ನು ಫ್ರೀಯಾಗಿ…!
ಮತ್ತೆ ಹುಟ್ಟಿಸುವುದಾದರೆ ಹುಟ್ಟಿಸು
ಕಪಟವರಿಯದ ಪಕ್ಷಿ ಪ್ರಾಣಿಯನ್ನಾಗಿ !
ಮಾನವರ ಕಾಟವಿಲ್ಲದೆ ಇರುವೆನು
ಜೀವನಪೂರ್ತೀ ಹಾಯಾಗಿ…!!
- ಪ್ರೊ. ಸಿದ್ದು ಸಾವಳಸಂಗ – ಹಿರಿಯ ಕನ್ನಡ ಉಪನ್ಯಾಸಕರು, ವಿಜಯಪುರ.
