30ರ ನಂತರದ ಗರ್ಭಧಾರಣೆ ಪರಿಣಾಮಗಳ ಕುರಿತು ಆಯುರ್ವೇದ ವೈದ್ಯರಾದ ಡಾ.ರಮ್ಯಾ ಭಟ್ ಅವರು ಬೆರೆದ ಒಂದು ಉಪಯುಕ್ತ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಗರ್ಭಧಾರಣೆ ಎನ್ನುವುದು ಪ್ರತಿಯೊಂದು ಮಹಿಳೆಯ ಜೀವನದ ಅತ್ಯಂತ ಮಹತ್ತರವಾದ ಭಾಗ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಗರ್ಭಧಾರಣೆಯನ್ನು ಮುಂದೂಡುತ್ತಿದ್ದಾರೆ.
30 ರ ನಂತರ ಅಂಡಾಣುಗಳ ಉತ್ಪಾದನೆಯು ಕಡಿಮೆಯಾಗುತ್ತ ಬರುತ್ತದೆ. ಜೊತೆಗೆ, ಗರ್ಭಕೋಶದ ಫಲವತ್ತತೆಯು ಕೂಡಾ. 30 ರ ನಂತರ ಗರ್ಭಧಾರಣೆಯು 30ರ ಒಳಗೆ ಆಗುವಂತೆ ಅಷ್ಟು ಸುಲಭವಾಗಿ ಆಗುವುದಿಲ್ಲ. 35ರ ನಂತರ ಗರ್ಭಧಾರಣೆ ಹಾಗೂ ಫಲವತ್ತತೆಯು ಕೂಡಾ ಕಡಿಮೆ ಆಗುತ್ತಾ ಬರುತ್ತದೆ.
30ರ ನಂತರದ ಗರ್ಭಧಾರಣೆ ಪರಿಣಾಮಗಳು:
- ಗರ್ಭಪಾತ ಆಗುವ ಸಾಧ್ಯತೆಗಳು ಹೆಚ್ಚು
- ಎಕ್ರೋಪಿಕ್ ಪ್ರೆಗ್ನೆನ್ಸಿ(ಲಿಪಸ್ಥಾನೀಯ ಗರ್ಭಧಾರಣೆ)
- ಅತಿಯಾದ ರಕ್ತದೊತ್ತಡ
- ಕ್ರೋಮೋಸೋಮಲ್ ತೊಂದರೆಗಳು
- ಮಧುಮೇಹ
- ಅವಳಿ ಅಥವಾ ತ್ರಿವಳಿಗಳ ಜನನ
- ಎದೆಹಾಲು ಕಡಿಮೆ ಇರುವುದು
35ರ ಕ್ರೋಮೋಸೋಮ್ ತೊಂದರೆಗಳಿಂದ ಹುಟ್ಟುವ ಮಗುವಿನ ಸಂಖ್ಯೆ :
1:204 ಆದರೆ
37ರಲ್ಲಿ 1:130
39ರಲ್ಲಿ 1:80
40ರಲ್ಲಿ 1:40 - ಮಗುವಿನ ಮೇಲೆ ಆಗುವ ಪರಿಣಾಮಗಳು :
ಒಬ್ಬ ಮಹಿಳೆಯು ತನ್ನ ಇಡೀ ಜೀವಮಾನದಲ್ಲಿ ಉತ್ಪಾದಿಸುವ ಅಂಡಾಣುಗಳನ್ನು ಹುಟ್ಟಿನಿಂದಲೇ ಪಡೆದುಕೊಂಡಿರುತ್ತಾಳೆ. ಮಹಿಳೆಯ ವಯಸ್ಸಿನ ಜೊತೆಗೆ ಅಂಡಾಣುವಿನ ಉತ್ಪಾದನೆಯೂ ಕಡಿಮೆಯಾಗುತ್ತದೆ ಹಾಗೂ ಅದರ ಸಾಮರ್ಥ್ಯ ಕೂಡಾ. ಅಂಡಾಣುವಿನ ಸಾಮರ್ಥ್ಯ ಅಥವಾ ಗುಣಧರ್ಮದ ಬದಲಾವಣೆಯು ಕ್ರೋಮೋಸೋಮಲ್ ಸಂಬಂಧಿತ ರೋಗಗಳಿಗೆ ಕಾರಣವಾಗುತ್ತದೆ.
30 ವರ್ಷದ ಒಳಗೆ ಗರ್ಭಧರಿಸುವುದರಿಂದ ಆಗುವ ಉಪಯೋಗಗಳು:
1. ವಯಸ್ಸು ಜಾಸ್ತಿ ಆದಷ್ಟು ತೊಂದರೆಗಳು ಜಾಸ್ತಿ
2. ಗರ್ಭಿಣಿ ಸಂಬಂಧಿತ ದೈಹಿಕ ಬದಲಾವಣೆಗಳನ್ನು ತಡೆದುಕೊಳ್ಳುವ ಶಕ್ತಿ 30ರೊಳಗೆ ಜಾಸ್ತಿ ಇರುತ್ತದೆ.
3. ಗರ್ಭಪಾತ ಹಾಗೂ ಇತರ ಖಾಯಿಲೆಗಳು ಬರುವ ಸಾಧ್ಯತೆಗಳು ತುಂಬಾ ಕಡಿಮೆ.
4. ಪ್ರಸೂತಿಯ ನಂತರ ದೈಹಿಕ ಶಕ್ತಿಯನ್ನು ಮರುಪಡೆಯುವುದು ಸುಲಭ
5. ಕೌಟುಂಬಿಕ ಸಹಕಾರವು ಜಾಸ್ತಿ ಇರುವುದರಿಂದ ಮಗುವಿನ ಲಾಲನೆ ಪಾಲನೆ ಸುಲಭ.
- ಡಾ.ರಮ್ಯಾ ಭಟ್ – ಆಯುರ್ವೇದ ವೈದ್ಯರು, ವೈದಕೀಯ ಬರಹಗಾರರು, ಬೆಂಗಳೂರು.