ಶ್ರೇಯಸ ಪರಿಚರಣ್ ಅವರ ‘ಪ್ರಶ್ನೆ, ಉತ್ತರ ಹುಡುಕಾಟ’ ಕವನ ಏನು ಪ್ರಶ್ನೆಗಳನ್ನ ಓದುಗರ ಮುಂದಿಟ್ಟಿದೆ ಎನ್ನುವುದನ್ನು ಈ ಕವನ ಮೂಲಕ ತಿಳಿಯಬಹುದು, ಮುಂದೆ ಓದಿ…
“ದೇವರು ಹಾಗೂ ಪಾಪ-ಪ್ರಜ್ಞೆ
– ವಿಷ್ಯ ನನಗೆ ಗೊತ್ತಿಲ್ದೆ ಹೋದರೆ-
ನಾನು ನರಕಕ್ಕೆ ಹೋಗ್ತೀನೆಯೆ? ”
“ಇಲ್ಲ ! ವಿಷ್ಯ ನಿನ್ಗೆ ತಿಳಿಯದಿದ್ದರೆ
ನೀನು ನರಕಕ್ಕೆಂದೂ ಹೋಗಲಾರೆ..”
“ಅಯ್ಯೋ ! ನೀನ್ಯಾಕೆ ನನ್ಗೆ ಹೇಳಿದೆ-
ನನಗ್ಗೊತ್ತಾಯ್ತೀಗ-ನನ್ನಲ್ಲಿ ಕಳಿಸಲೇ-
-ನೀ ನನಗಾ ವಿಷಯ ಅರುಹಿದೆ !!!”
****
ಈ…ಇದು…ಹೀಗೇ… ನಡೆದಿದೆ-
ಶತ ಶತ ಶತ ಶತ ಶತಮಾನಗಳೇ!
ದೇವನೆಂಬೋನು ನಮಗೆ ಕಾಣದೆ
ದಿಟ್ವಾಗಿ ಅಂತೋನೊಬ್ಬ ಇದ್ದಾನ್ಯೆ ?
ಎಷ್ಟು ಬೇಡ್ತಾರೆ ಕೆಲವರು-ಅವ್ನನ್ನೇ-
ಅತ್ರೂ-ಕರೆದ್ರೂ ಆ-ಅವ್ನು ಬಾರನೇ !
ಅದೆಷ್ಟು ಪರ್ವ-ಕಾಲ ಸವೆದ್ರೂನೂವೆ
ಆ…ಅವನು ಇವ್ರಿಗೆ ಸಿಗಲೇಯಿಲ್ವೆ !
ಆದರಿವರು ಹುಡುಕಾಟ ನಿಲ್ಸಿಲ್ಲಾ-
ಸಿಗೋತನಕ ಈ ಆಟ ನಿಲ್ಸಾಂಗಿಲ್ಲಾ!!
we seek that UNKNOWN-
till HE loses & makes known !
ಬಹುಶಃ ಇದೇ ದೊಡ್ಡ ಕಣ್ಣು-ಮುಚ್ಚಾಲೆ-
ಪ್ರಶ್ನೆಗಳೆಲ್ಲಾ ಕರಗುಳಿದ ಏಕೈಕ ಪ್ರಶ್ನೆ !!!
‘ಸೃಜಿಸಿದವ’-ಒಮ್ಮೆ ನಮ್ಗೆ ಕಾಣಿಸನೆ ?
ಅಥ್ವಾ ಒಂದ್ಸಾರಿ ಬಂದ್ಹೋಗಿದ್ದಾನೆಯೆ-
ಅವನಿದ್ದಿದ್ರೆ ಬಂದು ಹೋಗಿರೋನ್ರಿ-
ಮಾತೊಂದು:”ಅವ್ನಿಲ್ಲಿಯವನೇರಿ !!!”
ಕೂಡಲೇ ಅವ್ನನ್ ಕಾಣ್ಲೇಬೇಕಲ್ರಿ–
ಎಲ್ಲದರಲೂ ಅವ್ನಿದ್ದಾನಂತಲ್ಲರೀ-
ನೀವ್ನನಗೆ ನಾನ್ನಿಮಗೆ ಅವ ನಮ್ಮೊಳಗೆ
ಇಡೀ ಇಳೆಯೊಳಗೆ ಎಳೆ ಎಳೆಯೊಳಗೆ
ಸಿಕ್ತಾನೆಯೆ ಹುಡುಕಿದರೆ ನಮ್ಮ-ಒಳಗೆ
ಬೇರೆಡೆ ಹುಡುಕದಿರಿ ಈ ಗಳಿಗೆಯಿಂದಲೆ !
- ಶ್ರೇಯಸ್ ಪರಿಚರಣ್