ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ ಸೃಷ್ಟಿ ಕಲಾ ವಿದ್ಯಾಲಯವು ಹದಿಮೂರು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಕಲೆಯನ್ನು ಧಾರೆ ಎರೆದಿದೆ. ಈಗ ತನ್ನ ಹದಿಮೂರನೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಹೆಚ್ಚಿನ ವಿವರ ಕೆಳಗಿನಂತಿದೆ,
ಕಳೆದ ಹದಿಮೂರು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಕಲೆಯಲ್ಲಿ ತೊಡಗಿಸುವ ಕೆಲಸವನ್ನು ಮಾಡುತ್ತಿರುವ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ ಸೃಷ್ಟಿ ಕಲಾ ವಿದ್ಯಾಲಯ.
ಶ್ರೀ ಛಾಯಾಪತಿ ಕಂಚಿಬೈಲು ಹಾಗೂ ಶ್ರೀ ಶ್ರೀಕಾಂತ್ ಎಂ.ಜಿ. ಈ ಸಂಸ್ಥೆಯ ರೂವಾರಿಗಳು. ಈ ಸಂಸ್ಥೆಯ ಪ್ರತಿಭೆಗಳಿಂದ ಪಾಂಚಜನ್ಯ ಹಾಗೂ ದಕ್ಷ ಯಜ್ಞ ಎರಡು ಯಕ್ಷಗಾನವನ್ನು ಪ್ರದರ್ಶಿಸಿದ ಹೆಮ್ಮೆ ಈ ಸಂಸ್ಥೆಯದ್ದು. ಇದೇ ಜುಲೈ ಮೂವತ್ತರಂದು ಶನಿವಾರ ಸಂಜೆ 4 ಗಂಟೆಯಿಂದ ಅಶ್ವತ್ಥ್ ಕಲಾ ಭವನ ಎನ್.ಆರ್.ಕಾಲೊನಿ ಯಲ್ಲಿ ಅಭಿಮನ್ಯು ಕಾಳಗ ಪ್ರಸಂಗವನ್ನು ಪ್ರದರ್ಶನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಖ್ಯಾತ ಕಲಾವಿದ ಭರತ್ ರಾಜ್ ಪರ್ಕಳ ಇವರಿಗೆ ಸೃಷ್ಟಿ ಯಕ್ಷ ಗಾರುಡಿಗ ಪ್ರಶಸ್ತಿ ಪ್ರದಾನವಿದೆ.
ಶ್ರೀ ನಿತ್ಯಾನಂದ ನಾಯಕ್ ಅವರ ನಿರ್ದೇಶನದಲ್ಲಿ, ಗುರುಗಳಾದ ಶ್ರೀ ಸುಬ್ರಾಯ ಹೆಬ್ಬಾರ್ ಹಾಗೂ ಭರತ್ ರಾಜ್ ಪರ್ಕಳ ಇವರ ತರಬೇತಿಯಲ್ಲಿ ತಂಡ ಪ್ರದರ್ಶನಕ್ಕೆ ಸಿದ್ಧವಾಗಿದೆ. ಸೃಷ್ಟಿ ತಂಡಕ್ಕೆ ನಿಮ್ಮ ಪ್ರೋತ್ಸಾಹ ಹಾಗೂ ಹಾರೈಕೆಯನ್ನು ಬಯಸುತ್ತೇವೆ.
Srushti kala vidyalaya YOUTUBE ಚಾನೆಲ್ ಹಾಗೂ INSHTA ದಲ್ಲಿ ಲೈವ್ ಪ್ರಸಾರವಾಗಲಿದೆ.
ಇಂದೇ YouTube ಚಾನಲ್ ಗೆ subscribe ಆಗಿ ಪ್ರೋತ್ಸಾಹಿಸಿ.
ಯಕ್ಷಗಾನಂ ಗೆಲ್ಗೆ
https://youtube.com/channel/UCh59XVSXT4ScWGe5dsRsh7w
- ಆಕೃತಿ ನ್ಯೂಸ್