ಅವಿಸ್ಮರಣೀಯ ಕ್ಷಣಗಳು – ಎ.ಎನ್.ರಮೇಶ್. ಗುಬ್ಬಿ

ಕವಿ ಎ.ಎನ್.ರಮೇಶ್. ಗುಬ್ಬಿ ಅವರಿಗೆ ‘ಸಾಹಿತ್ಯ ಸಿಂಧು’ ಪ್ರಶಸ್ತಿ ಸ್ವೀಕರಿಸಿದ ಅಪೂರ್ವ ಕ್ಷಣವನ್ನು ತಪ್ಪದೆ ಮುಂದೆ ಓದಿ….

ಬಿಂದು ಬಿಂದುವಿನಲ್ಲು ಪ್ರೀತ್ಯಾದರಗಳ ಅಮೃತ ಹರಿಸಿ ಸಹೃದಯಿ ಸಾಹಿತ್ಯಬಂಧುಗಳು ಮಡಿಲಿಗಿಟ್ಟ – ‘ಸಾಹಿತ್ಯ ಸಿಂಧು’

“ಸಾಂಸ್ಕೃತಿಕನಗರಿಯ ಸಂತೋಷಮಯ ಸಮಾರಂಭದ ಅವಿಸ್ಮರಣೀಯ ಕ್ಷಣಗಳು ಸಂತೋಷ ಸರ್ ಹಾಗು ಅವರ ತಂಡಕ್ಕೆ ಧನ್ಯವಾದಗಳು.

ಭಾನುವಾರ (19.03.23) ಮೈಸೂರಿನ ರೋಟರಿ ಸಭಾಂಗಣದಲ್ಲಿ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಅಪೂರ್ವ ಸಮಾರಂಭದಲ್ಲಿ “ಸಾಹಿತ್ಯ ಸಿಂಧು ಪ್ರಶಸ್ತಿ -2023” ಕ್ಕೆ ಭಾಜನನಾಗಿದ್ದು ನನ್ನ ಜೀವಿತದ ಅನನ್ಯ ಘಳಿಗೆ.

ಜನಪ್ರಿಯ ಕವಿ, ಸಂಘಟಕ, ಅಪ್ರತಿಮ ಅಕ್ಷರಬಂಧು, ಅನುಪಮ ಭಾವಜೀವಿ ಶ್ರೀಯುತ ಸಂತೋಷರ 62 ನೆಯ ಜನ್ಮೋತ್ಸವದ ಸಂಭ್ರಮ, ‘ಗೆಳತಿ’ (ಕವನ ಸಂಕಲನ -ಸಂತೋಷ್) ಮತ್ತು ‘ವೈಟ್ನರ್’ (ಕಥಾ ಸಂಲನ -ಶೋಭಾ) ಕೃತಿಗಳ ಲೋಕಾರ್ಪಣೆಯ ಸಡಗರ, ಅದ್ವಿತೀಯ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ, ಕವಿಗೋಷ್ಠಿಯ ಝೇಂಕಾರ, ಸಾಹಿತ್ಯ ದಿಗ್ಗಜರ ಸಮಾಗಮ, ಸಹೃದಯೀ ಸಾಹಿತ್ಯಬಂಧುಗಳ ಸಮ್ಮಿಲನ.. ಅಪೂರ್ವ ಸಾಹಿತ್ಯ ಸಮಾರಂಭವೊಂದು ಭರ್ಜರಿ ಯಶಸ್ವಿಯಾಗಿ, ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಮತ್ತಿನ್ನೇನು ಬೇಕು ಹೇಳಿ..?

ವೇದಿಕೆಯ ಮೇಲೆ ಒಂದಕ್ಕಿಂತ ಒಂದು ಅನರ್ಘ್ಯ ಸಾಹಿತ್ಯರತ್ನಗಳು. ಅತ್ಯದ್ಭುತ ನುಡಿಗಳಿಂದ ಸಭಿಕರ ಮನಸೂರೆಗೊಂಡ ಮಾತೃಸ್ವರೂಪಿ ಕವಯತ್ರಿ, ಲೇಖಕಿ ಹೇಮಗಂಗ ಅಮ್ಮ, ಕಾರ್ಯಕ್ರಮದ ಕೇಂದ್ರಬಿಂದು ‘ಆಪ್ತಮಿತ್ರ’ ಖ್ಯಾತಿಯ ನಾಟ್ಯಲೋಕದ ವಿಸ್ಮಯ ಶ್ರೀಧರ್ ಜೈನ್, ತಮ್ಮ ವಾಗ್ಜರಿಯಿಂದ ಸಭಾಂಗಣದಲ್ಲಿ ವಿದ್ಯುತ್ ಸಂಚಲನ ಮೂಡಿಸಿದ ಗಮಕ ಲೋಕದ ಧೃವತಾರೆ ಕೃ.ಪ.ಮಂಜುನಾಥ್, ಸುಸ್ವರಗಳಿಂದ ಕೇಳುಗರ ಹೃದಯ ಮೀಟಿದ ಸಂಗಿತ ವಿದ್ವಾನ್ ನವೀನ್.. ಒಬ್ಬರಿಗಿಂತ ಒಬ್ಬರು ಬೆರಗಾಗಿಸಿದರೆ, ಪ್ರತಿಕ್ಷಣ ನೆರೆದ ಹೃನ್ಮನಗಳನ್ನು ಸೊಬಗಾಗಿಸಿತು.

ಮೂರು ದಶಕಗಳಿಂದ ವ್ಯಕ್ತಿ-ಕಾಲ ಯಾವುದಕ್ಕೂ ರಾಜಿಯಾಗದೇ, ಸಮಾರಂಭದ ಗುಣಮಟ್ಟ ಮತ್ತು ವಿಶೇಶತೆಗಳನ್ನು ಹೀಗೆ ಕಾಪಿಡುತ, ಸಾಹಿತ್ಯ ಲೋಕದಲ್ಲಿ ತನ್ನದೇ ವೈಶಿಷ್ಟ್ಯಗಳಿಂದ ಛಾಪು ಮೂಡಿಸಿ ಚಿರಂತನ ಅಕ್ಷರಾಕ್ಕರೆಗಳ ಚಿಲುಮೆಯಾಗಿರುವ ಶ್ರೀ ಸಂತೋಷ್ ಹಾಗೂ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಪ್ರತಿಷ್ಠಾನದ ಪ್ರತಿಯೊಬ್ಬರೂ ಅಭಿನಂದನೀಯರಷ್ಟೆ ಅಲ್ಲ, ಅನುಕರಣೀಯರು ಹೌದು. ಅವರ ಕಾರ್ಯವೈಖರಿ ಸಕಲರಿಗೂ ಆದರ್ಶವಷ್ಟೇ ಅಲ್ಲ, ಸರ್ವಕಾಲಕ್ಕೂ ನಿದರ್ಶನವೂ ಹೌದು.

ಇಂತಹ ಅನನ್ಯ ಸಮಾರಂಭಕ್ಕೆ, ಸಾಕ್ಷಿಯಾಗಿ ಪ್ರಶಸ್ತಿಗೆ ಭಾಜನನಾಗಿದ್ದು ನನ್ನ ಬದುಕಿನ ಸುಕೃತ. ಈ ಅಮೃತ ಘಳಿಗೆಯಲ್ಲಿ ಮುಖಾಮುಖಿಯಾಗಿ ಆಶೀರ್ವದಿಸಿದ ಮೈಸೂರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡಿಕೆರೆ ಗೋಪಾಲ್, ತಾಲೂಕು ಅಧ್ಯಕ್ಷರಾದ ಶ್ರೀ ಮಂಜುನಾಥ್, ಶ್ರೀ ರಾಮಲಿಂಗೇ ಗೌಡರು, ಶ್ರೀ ರಮೇಶ್-ಉಮಾ ದಂಪತಿಗಳು, ಶ್ರೀಮತಿ ರತ್ನಾ ಮೇಡಂ ಕುಟುಂಬ, ಶ್ರೀ ವೇದಾಂತ್ ಜೈನ್, ಶ್ರೀಮತಿ ಸೌಮ್ಯ ಮೇಡಂ, ಶ್ರೀ ಮುರಳಿ-ಹೇಮಾ ದಂಪತಿಗಳು, ಶ್ರೀಮತಿ ಸೌಗಂಧಿಕಾ ಮೇಡಂ, ಶ್ರೀ ಕೆ.ವಿ.ರಮೇಶ್ ಹಾಗೂ ಹಲವಾರು ಸಹೃದಯೀ ಅಕ್ಷರಬಂಧುಗಳಿಗೆ ಅಂತರಾಳದ ಅನಂತ ನಮನಗಳು.

ಈ ಎಲ್ಲ ಸಂಭ್ರಮ, ಸಕಲ ಮನ್ನಣೆ-ಪುರಸ್ಕಾರಗಳಿಗೂ ನಿತ್ಯ ನನ್ನ ಅಕ್ಷರಗಳನ್ನು ಅಕ್ಕರೆಯಿಂದ ಮೆಚ್ಚಿ, ಆಶೀರ್ವದಿಸಿ, ಅಡಿಗಡಿಗೂ ಸ್ಫೂರ್ತಿಯಾಗಿರುವ ನೀವೇ ಕಾರಣ, ಸದಾ ಪ್ರೇರಣ. ನಿಮಗಿದೋ ನನ್ನೆಲ್ಲ ಸಾಧನೆಗಳ ಅರ್ಪಣೆಯೊಂದಿಗೆ ಸಾವಿರದ ಸಾವಿರ ಶರಣು.. ಒಪ್ಪಿಸಿಕೊಳ್ಳಿ.. ಸಮಾರಂಭದ ಅವಿಸ್ಮರಣೀಯ ದೃಶ್ಯಾವಳಿಗಳನ್ನು ನಿಮ್ಮ ಅವಗಾಹನೆಗಾಗಿ ಹಂಚಿಕೊಂಡಿದ್ದೇನೆ.. ನೋಡಿ ಹಾರೈಸಿ.. ” –


  • ಎ.ಎನ್.ರಮೇಶ್. ಗುಬ್ಬಿ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW