ಒಂದು ಲಕ್ಷದ ಏಳುಸಾವಿರ ಮಹಿಮೆ

ಮಾತೋಶ್ರೀ ಶಾರದಾ ಬಾಯಿ ಭೀಮಸೇನಾಚಾರ್ಯ ಜೋಶಿ ಕಳಮಳ್ಳಿ ಇವರ ಕೃಪಾ ಆಶೀರ್ವಾದದಿಂದ ಎಂ ಬಸಾಪೂರ ಶಾಲೆಯ ಮುಖ್ಯಗುರುಗಳಾದ ಶ್ರಿನಿವಾಸಾಚಾರ್ಯ ಜೋಶಿ ಅವರು ತಮ್ಮ ಸ್ವಂತ ಸ್ವಗೃಹ ಕುಷ್ಟಗಿ ನಗರದ ಹೂನುರೇಶ ನಿಲಯದಲ್ಲಿ ಶ್ರೀಮತಿ ಮುಕ್ತ ಶ್ರೀನಿವಾಸ್ ಜೋಶಿ ದಂಪತಿಗಳು ಒಂದೆರೆಡು ವರುಷಗಳ ಹಿಂದೆ ಭಗವಂತನಲ್ಲಿ ಸಂಕಲ್ಪ ಮಾಡಿಕೊಂಡಂತೆ ಕೆಲವು ದೇವತಾ ಕಾರ್ಯಗಳನ್ನು ಮಾಡಿದ್ದಾರೆ.ನಟರಾಜ್ ಸೋನಾರ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಇಂದಿನ ಆಧುನಿಕ ಕಾಲದಲ್ಲಿ ಯಾರಿಗೆ ಸಮಯ ಇಸದೆ ಹೇಳಿ ? ಯಾರು ? ದೇವರಿಗೆ ಪೂಜೆ ಪುನಸ್ಕಾರ ಮಾಡ್ತರೆ ? ಯಾರು ಏಕಾದಶಿ ನಿತ್ಯ ಪದ್ದತಿ ಪೂಜಾ ಪತಪ ಮಾಡಲಿಕ್ಕೆ ಸಮಯ ಎಲ್ಲಿದೆ? ಎಂದು ಕೇಳುವವರೆ ಬಹಳ ಜನ !

ನಮಗೆ ನೂರಾಎಂಟು ಟೆನಶನ್ ಡ್ಯೂಟಿ, ರಗಳೆ, ಗಂಡ, ಮನೆ, ಮಕ್ಕಳು ಸಾಕಾಗೈತೀ ಎನ್ನವ ಈ ಸಮಯದಲ್ಲಿಯೂ ಇನ್ನೂ ಕೆಲವರು ಬಿಡುವಿನ ವೇಳೆಯಲ್ಲಿ ರಚನಾತ್ಮಕ ಕಾರ್ಯ ಕೈಗೊಂಡರೆ ಉಳಿದವರು ತಮ್ಮ ತಮ್ಮ ಆಸಕ್ಕಿಗನುಗುಣವಾಗಿ ಬಿಗ್ ಬಾಸ್ , ರಿಯಾಲಿಟಿ ಶೋ, ಧಾರಾವಾಹಿ ಮೊಬೈಲ್ ಗೇಮಿಂಗ್ ಸಾಮಾಜಿಕ ಜಾಲ ತಾಣಗಳ ವೀಪರಿತ ಬಳಕೆ ಹೀಗೇಯೇ ಕಾಲ ಕಳೆಯುವರ ನಡುವೆ ಸಾತ್ವಿಕವಾಗಿ ತಮ್ಮ ಕಾರ್ಯದಲ್ಲಿ ಭಗವಂತನ‌ ಸೇವೆಯನ್ನು ವಿನೂತನವಾಗಿ ಶಾಸ್ಥೋಕ್ತ ಪದ್ದತಿ ಅನುಸಾರ ಶುಚಿ ಭ್ರೂತರಾಗಿ ಭಯ ಭಕ್ತಿ ಸದ್ಭಾವನೆಯ ಮೂಲಕ ಮನತೃಪ್ತಿ ಗಾಗಿ ಮಾಡುವ ಈ ಸೇವಾಕಾರ್ಯ ಗಮನಾರ್ಹವಾದುದು ಆಗಿದೆ.

ಕಳಮಳ್ಲಿ ಜೋಶಿ ಕುಟುಂಬದ ಸದಸ್ಯರ ಈ ಮಹತ್ವದ ಕಾರ್ಯವನ್ನು ಒಮ್ಮೆ ನೀವು ಅದೇನಂದರೆ ಭಗವಂತನ ಹೆಸರಿನಲ್ಲಿ ಸ್ಮರಣೆ ಮಾಡಿಕೊಂಡು ದೃಢ ಭಕ್ತಿ ಯೊಂದಿಗೆ ಮಾಡುವ ಸತ್ ಸಂಕಲ್ಪ ಮಾಡಿದರೆ ಎಂತಹ ಕಠಿಣ ಕೆಲಸವಾದರೂ ಮಾಡುವ ಹುಮ್ಮಸ್ಸು ಭಗವಧಭಕ್ತಿ ಸಮಾಧಾನ ಶ್ರಮ ಶಕ್ತಿ ಮಾಡುವ ಇಚ್ಚಾಶಕ್ತಿ ಇದ್ರೆ ಇಂತಹ ಧೈವಾನುಗ್ರಹಕ್ಕೆ ಪಾತ್ರರಾಗುವದು ಸಹಜ ಸುಲಭ ಎನ್ನುವುದನ್ನು ಈ ಕೆಳಗಿನಂತೆ ನಿರೂಪಿಸಿದ್ದಾರೆ ಎಂದರೆ ಅತಶಯೋಕ್ತಿಯಾಗಲಾರದು ಎನ್ನಬಹುದಾಗಿದೆ.

ಶ್ರೀಲಕ್ಷ್ಮಿವೇಂಕಟೇಶ ಶ್ರೀ ಚಂದ್ರಲಾಂಬ ಪರಮೇಶ್ವರಿ ಹಾಗೂಶ್ರೀ ಹುನೂರೇಶನ. ಅನುಗ್ರಹದಿಂದ ಮಾತೋಶ್ರೀ ಶಾರದಾ ಬಾಯಿ ಭೀಮಸೇನಾಚಾರ್ಯ ಜೋಶಿ ಕಳಮಳ್ಳಿ ಇವರ ಕೃಪಾ ಆಶೀರ್ವಾದದಿಂದ ಎಂ ಬಸಾಪೂರ ಶಾಲೆಯ ಮುಖ್ಯಗುರುಗಳಾದ ಶ್ರಿನಿವಾಸಾಚಾರ್ಯ ಜೋಶಿ ಅವರು ತಮ್ಮ ಸ್ವಂತ ಸ್ವಗೃಹ ಕುಷ್ಟಗಿ ನಗರದ ಹೂನುರೇಶ ನಿಲಯದಲ್ಲಿ ಶ್ರೀಮತಿ ಮುಕ್ತ ಶ್ರೀನಿವಾಸ್ ಜೋಶಿ ದಂಪತಿಗಳು ಒಂದೆರೆಡು ವರುಷಗಳ ಹಿಂದೆ ಭಗವಂತನಲ್ಲಿ ಸಂಕಲ್ಪ ಮಾಡಿಕೊಂಡಂತೆ ಕೆಲವು ದೇವತಾ ಕಾರ್ಯಗಳನ್ನು ಮಾಡಿದ್ದಾರೆ.

ಅವು ಏನಂದರೆ

* ಒಂದು ಲಕ್ಷ ಏಳುಸಾವಿರ ಗೆಜ್ಜೆ ವಸ್ತ್ರ ಸಮರ್ಪಣೆ ಹಾಗೂ

* ಒಂದು ಲಕ್ಷ ಏಳುಸಾವಿರ ಕುಂಕುಮರ್ಚನೆ

* ಒಂದು ಲಕ್ಷ ಏಳುಸಾವಿರ ರಂಗೋಲಿ ಹಾಕುವುದು

* ಒಂದು ಲಕ್ಷ ಏಳುಸಾವಿರ ಹೂಗಳನ್ನು ಏರಿಸುವುದು

* ಒಂದು ಲಕ್ಷ ಏಳುಸಾವಿರ ಮಂಗಳಾರತಿ ಬತ್ತಿಗಳನ್ನು ಮಾಡಿಕೊಡುವುದು

* ಒಂದು ಲಕ್ಷ ಏಳುಸಾವಿರ ತುಪ್ಪದ ದೀಪವನ್ನು ಹಚ್ಚುವುದು

* ಒಂದು ಲಕ್ಷ ಏಳುಸಾವಿರ ಹತ್ತಿ ಕಾಳುಗಳನ್ನು ಗೋಮಾತೆಗೆ ಅರ್ಪಿಸುವುದು

ವಿವರಣೆ :

* ಒಂದು ಲಕ್ಷ ಏಳುಸಾವಿರ ಗೆಜ್ಜೆ ವಸ್ತ್ರಗಳನ್ನು ತಯಾರಿ

೧೦ ಕೆ ಜಿ ಅರಳಿಯ ಸಹಾಯದಿಂದ ಪ್ರತಿದಿನ ಮನೆಯಲ್ಲಿ ಕೈಯಿಂದ ಮಾಡುವಾಗ ಕುಂಕುಮ ಒಂದು ಕೆಜಿ ಹಾಲು ಬಳಸಿಕೊಂಡು ಮಾಡಲಾಯಿತು.

* ಒಂದು ಲಕ್ಷ ಎಳುಸಾವಿರ ಕುಂಕುಮಾರ್ಚನೆ

ಪ್ರತಿದಿನ ಮಡಿಹುಡಿಯಿಂದ ನಿರಾಹಾರವಾಗಿ ವಿಷ್ಣು ಸಮೇತ ಲಕ್ಷಿದೇವಿಯನ್ನು ಪ್ರತಿಷ್ಠಾಪಿಸಿ ಪ್ರತಿದಿನ ಮೂರತಾಸಿನಂತೆ ಚಿಟಿಕೆಯಷ್ಟು ಕುಂಕುಮವನ್ನು ಒಂದುಸಾರಿಗೆ ನೂರೆಂಟು ವಿಷ್ಣು ಸಹಸ್ರನಾಮ ಜಪಿಸುತ್ತಾ ಒಂದು ಬಾರಿಗೆ ಒಂದು ಕುಮಕುಮವನ್ಬು ಏರಿಸಿ ಅಂದಾಜು ಎಂಟರಿಂದ ಹತ್ತು ಸಾವಿರ ನಾನ ಜಪ ಕುಂಕುಮ‌ಏರಿಸುವುದು.

* ಒಂದು ಲಕ್ಷ ಏಳುಸಾವಿರ ರಂಗೋಲಿ ಬಿಡಿಸುವುದು

ಅದು ಹೇಗಂದರೆ ಪ್ರತಿದಿನ ಏಳು ರಿಂದ ಎಂಟುಸಾವಿರ ದೇವರ ಕಟ್ಟೆ ಗ್ಯಾಸ್ ಕಟ್ಟೆ ಹಾಗೂ ಊಟದ ಹಾಲ್ ನಲ್ಕಿ ಪದ್ಯಗಳನ್ನು ರಂಗೋಲಿ ಹಾಕಿ ಮಂಗಳಾರಾತಿ ಮಾಡಿ ಮುಗಿಸುವುದು ರಂಗೋಲಿ ೨೦ ಕೆಜಿ ಬಳಸಿಕೊಂಡು ಹದಿನೈದು ರಿಂದ ಇಪ್ಪತ್ತು ದಿನಗಳವರೆಗೆ ಪೂರೈಸಿದರು.

* ಒಂದು ಲಕ್ಷದ ಏಳುಸಾವಿರ ಹೂಗಳ ಏರಿಸುವುದು.

ಪ್ರತಿದಿನ ಬೆಳಿಗ್ಗೆ ವಿಶೇಷವಾದ ಪಾರಿಜಾತ ಹೂಗಳು ಮಲ್ಲಿಗೆ ಹೂಗಳು ಕನಕಾಂಬರಿ ಇತರೆ ಹೂಗಳನ್ಬು ಸಂಗ್ರಹಿಸಿ ಕೊಂಡು ವಿಷ್ಣು ಸಹಸ್ರನಾಮ ದೊಂದಿಗೆ ಲಕ್ಷಿಸಹಿತ ವಿಷ್ಣು ದೇವರ ವಿಗ್ರಹಕ್ಕೆ ಎರಿಸುವುದು ಇದು ಕೂಡಾ ನಿರಂತರ ಭಯ ಭಕ್ತಿ ಯೊಂದಿಗೆ ಹದಿನೈದು ದಿನಗಳ ಕಾಲ ನಿರಂತರವಾಗಿ ಸೇವೆ ಮಾಡಿದ್ದಾರೆ.

* ಒಂದು ಲಕ್ಷದ ಏಳುಸಾವಿರ ಮಂಗಳಾರತಿ ಬತ್ತಿ ಮಾಡುವುದು

ಈ ಮಂಗಳಾರತಿ ಬತ್ತಿ ಯನ್ನು ಕೈಯಿಂದ ತಯಾರಿಸಲು ಒಂದುನೂರಾ ಎಂಟರಂತೆ ಕಟ್ಟು ಗಳನ್ನಾಗಿಮಾಡಲು ೧೫ ಕೆಜಿ ಅರಳಿಯನ್ನು ಬಳಸಿಕೊಳ್ಳಲಾಯಿತು ಈ ಮಂಗಳಾರತಿ ಬತ್ತಿಗಳನ್ಬು ೧೦ ಕೆಜಿ ಶುದ್ದ ಹಸುವಿನ ತುಪ್ಪದಲ್ಕಿ ತೋಯಿಸಿ ಜೋಪಾನವಾಗಿ ತಂದು ದೇವರ ಗುಡಿ ಅರ್ಚಕರ ಸುಪರ್ದಿಗೆ ಕೊಡಲಾಗುವುದು ಅವರು ದೇವರ ಪೂಜಾ ನಂತರ ಮಹಾ ಮಂಗಳಾರತಿ ಸಂಧರ್ಭದಲ್ಲಿ ಬಳಸಿಕೊಳ್ಳುವುರು.

* ಒಂದು ಲಕ್ಷದ ಏಳುಸಾವಿರ. ತುಪ್ಪದ ದೀಪ ಹಚ್ಚುವುದು

ಈ ತುಪ್ಪದ ದೀಪಗಳನ್ನು ತಯಾರಿಸಲು ಪ್ರತಿದಿನ ಮನೆಯಲ್ಲಿ ೧೫ ಕೆಜಿ ಶುದ್ದ ಹಸುವಿನ ತುಪ್ಪ ೧೫ ಕೆಜಿ ಅರಳಿಯ ಸಹಾಯದಿಂದ ಮನೆಯಲ್ಲಿ ದೇವರ ನಾಮಗಳನ್ಬು ಪಠಿಸುತ್ತಾ ತಯಾರಿಸಲಾಯಿತು.

* ಒಂದು ಲಕ್ಷದ ಏಳುಸಾವಿರ ಹತ್ತಿಕಾಳು ಅರ್ಪಣೆ ಮಾಡುವುದು

ಹತ್ತಿಯನ್ಬು ಬಿಡಿಸಲು ೨೦ ಕೆಜಿ ಹತ್ತಿಯನ್ನು ಬಳಸಿಕೊಂಡು ಪ್ರತಿದಿನ ಸಮಯ ಹೊಂದಾಣಿಕೆ ಮಾಡಿಕೊಂಡು ಬಿಡಿಸಿದ ಹತ್ತಿಯ ಸಹಾಯದಿಂದ ಹತ್ತಿಕಾಳುಗಳನ್ನು ಸಂಗ್ರಹಿಸಿ ಇದರ ಜೊತೆಗೆ ಆಕಳಿಗೆ ಹತ್ತಿಕಾಳು ಬೆಲ್ಲ ಅಕ್ಕಿ ಯನ್ನು ಗೋಮಾತೆಗೆ ತಿನ್ನಿಸುವುದು.

This slideshow requires JavaScript.

ಎಲ್ಲಾ ಕಾರ್ಯಗಳನ್ನು ಮಾಡಿ ಮುಗಿಸಿದ್ದು ಈಗ ಸಮರ್ಪಣೆ ಒಂದೇ ಬಾಕಿ ಇರುತ್ತದೆ ಸಮರ್ಪಣೆಯ ದಿನಾಂಕವನ್ನು ನಿಗದಿಗೊಳಿಸಿದ್ದು ದಿನಾಂಕ 12.01.2025 ರಂದು ಕಲಬುರುಗಿ ಸಮೀಪದ ಸನ್ನತಿ ಶ್ರೀ ಚಂದ್ರಲಾ ಪರಮೇಶ್ವರಿ ದೇವಿಗೆ ಒಂದು ಲಕ್ಷ ಏಳು ಸಾವಿರ ಗೆಜ್ಜೆ ವಸ್ತ್ರಗಳು ಸಮರ್ಪಣೆ ಮಾಡಿ 25000 ದೀಪಗಳನ್ನು ಹಚ್ಚಿ ಅಮ್ಮನ ದೇಗುಲದಲ್ಲಿ ದೀಪ ಬೆಳಗಿಸುವ ಸೇವೆ ಮಾಡಿ ಬರುವುದಿದೆ. ನಂತರ ಶ್ರೀ ಗುಡ್ಡದ ತಿಮ್ಮಪ್ಪ ಹಾಗೂ ಶ್ರೀ ಹೊನುರೇಶನ ಸನ್ನಿಧಾನದಲ್ಲಿ ಹಾಗೂ ತುರಡಗಿ ತಿಮ್ಮಮ್ಮನ ಆವಾಸ ಸ್ಥಳ ವಾದ ಅಮ್ಮನ ಕಟ್ಟೆ ಸನ್ನಿಧಾನದಲ್ಲಿ ತಲಾ 25,000 ದೀಪಗಳನ್ನು ಹಚ್ಚುವ ಕಾರ್ಯಕ್ರಮವು ಇದೆ ನಂತರ ಕುಷ್ಟಗಿ ನಗರದ ಆರಾಧ್ಯ ದೈವ ಶ್ರೀ ಅಡವಿ ಮುಖ್ಯ ಪ್ರಾಣೇಶನ ದೇವಸ್ಥಾನದಲ್ಲಿಯೂ 25,000 ದೀಪಗಳನ್ಬು ಹಚ್ಚುವುದು ಸಂಕಲ್ಪದಲ್ಲಿದೆ. ಈ ತೆರನಾಗಿ ಅಂದುಕೊಂಡ ಹಾಗೆ ಎಲ್ಲವೂ ಭಗವಂತನ ಸೇವೆ ಮಾಡಿ ಮುಕ್ತಾಯಗೊಳಿಸಲಾಗುವುದು ಎಂದು ನಿಶ್ಚಯಿಸಿದ ಪ್ರಕಾರ ದಿನಾಂಕ 04/02/2025 ರಂದು ಕುಷ್ಟಗಿ ಯ ಹೂನುರೇಶ ನಿಲಯದಲ್ಲಿ ಗಣ ಹೋಮ ಸತ್ಯನಾರಾಯಣ ಪೂಜೆ ಹಾಗೂ ದಂಪತ್ ಪೂಜೆ ಮಾಡಿ ಉದ್ಯಾಪನೆಗೊಳಿಸಿ ದೇವರಿಗೆ ಸಂಪ್ರೀತಿಗೊಳಿಸಲಾಗುವುದು ಎಂದು ವಿವರಿಸಿದರು. ಮನೆಯ ಹಿರಿಯ ಜೀವಿ ಶ್ರೀನಿವಾಸ ಜೋಶಿ ಅವರ ಮಾತೋಶ್ರೀ ಶ್ರೀಮತಿ ಶಾರದಾಬಾಯಿ ಭೀಮ ಸೇನಾಚಾರ್ಯ ಜೋಶಿ ಕಳಮಳ್ಳಿ ಇವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಮಕ್ಕಳು ಸೊಸೆಯಂದಿಯರು ಮರಿ‌ಮೊಮ್ಮಕ್ಕಳು ಗಿರಿ ಮೊಮ್ಮಕ್ಕಳು ಸಮಕ್ಷಮ ಬೀಗರು ಬಂಧು ಬಳಗದವರ ಪಾಲ್ಗೊಂಡು ಭಗವಧ್ಭಕ್ತಿಗೆ ಪಾತ್ರರಾಗುತಿದ್ದಾರೆ ಈ ದಂಪತಿಗಳ ಇಂತಹ ಮಹತ್ವದ ಕಾರ್ಯಕ್ಕೆ ಮಕ್ಕಳಾದ ಶ್ರೀ ಹರಿ ಜೋಶಿ ಶ್ರೀವತ್ಸ ಜೋಶಿ ಸಹಕಾರ ಮಾಡಿದ್ದಾರೆ.


  • ನಟರಾಜ್ ಸೋನಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW