ಕೈ ಮುಸುಕು (ಮದ್ದು) -ಸುಮನಾ ಮಳಲಗದ್ದೆ

ಗೋಸುಂಬಿ ಅಂತಹ ಪ್ರಾಣಿಯನ್ನು ಹತ್ಯೆ ಮಾಡಿ ನೇತು ಹಾಕಿ ಕೊಳೆಯಿಸಿ ಅದರ ರಸವನ್ನು ಬೇರೆಯವರ ಹೊಟ್ಟೆಗೆ ಹಾಕಿ ಅವರು ಈ ಸಮಸ್ಯೆಯಿಂದ ಬಳಲಬೇಕು ಎಂದು ಮಾಡುತ್ತಾರೆ ಎನ್ನುವ ಕಥೆ ಇದೆ. ಇದು ನಿಜವೇ? ಇದರ ಬಗ್ಗೆ ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಏನು ಹೇಳುತ್ತಾರೆ, ತಪ್ಪದೆ ಮುಂದೆ ಓದಿ…

ತುಂಬಾ ಜನ ಮುದ್ದು ಹಾಕುವುದು, ಕೈ ಮುಸುಕು ಹಾಕಿದ್ದಾರೆ ಎಂದು ವಾಡಿಕೆಯಲ್ಲಿ ಹೇಳುತ್ತಾರೆ. ಇದರಿಂದ ಹಸಿವು ಕಡಿಮೆ, ಹೊಟ್ಟೆಯಲ್ಲಿ ಸಂಕಟ, ನಿದ್ದೆ ಬಾರದಿರುವುದು, ವೀಕ್ನೆಸ್ ಕಣ್ಣು ಕೆಳಗೆ ತಗ್ಗುವುದು, ಅರುಚಿ ಎಂದರೆ ಬಾಯಿ ರುಚಿ ಇಲ್ಲದಿರುವುದು ರಾತ್ರಿ ಜ್ವರ ಅತಿಯಾದ ಬಾಯಾರಿಕೆ, ಕಾಲು ಸೋಲು, ಮುಖ ಕಪ್ಪು ಇಟ್ಟುವುದು. ಇದೆಲ್ಲ ಇದರ ಲಕ್ಷಣ. ಕೆಲವರ ಸ್ವಭಾವ ಇದೆ, ಈ ರೀತಿ ಆಗುವುದು ಬೇರೆಯವರ ಯಾವುದೋ ಕೈವಾಡದಿಂದ ಅಥವಾ ಮಾಟ ಮಂತ್ರ ಮಾಡುವುದರಿಂದ ಎಂದು.

ನನ್ನ ಅಭಿಪ್ರಾಯದಲ್ಲಿ ಫುಡ್ ಪಾಯಿಸನ್ ಪಿತ್ತಕೋಶದಲ್ಲಿ ಪಿತ್ತ ರಸ ಸರಿಯಾಗಿ ಬಿಡುಗಡೆ ಆಗದಿರುವುದು. ಗೋಸುಂಬಿ ಅಂತಹ ಪ್ರಾಣಿ ಒಂದನ್ನು ಹತ್ಯೆ ಮಾಡಿ ನೇತು ಹಾಕಿ ಕೊಳೆತ ಅದರ ರಸವನ್ನು ಬೇರೆಯವರ ಹೊಟ್ಟೆಗೆ ಹಾಕಿ ಅವರು ಈ ಸಮಸ್ಯೆಯಿಂದ ಬಳಲಬೇಕು ಎಂದು ಮಾಡುತ್ತಾರೆ ಎನ್ನುವ ಕಥೆ ಇದೆ. ಆದರೆ ನನ್ನ ಅಭಿಪ್ರಾಯದಲ್ಲಿ ಈಗ ಪುರುಸೊತ್ತಿಲ್ಲದ ಜೀವನದಲ್ಲಿ ಯಾರಿಗೂ ಹಾಳಾಗಲು ಮಾಡಲು ಸಮಯವಿಲ್ಲ.

ಫೋಟೋ ಕೃಪೆ :google

ನಾವು ತಿನ್ನುವ ಆಹಾರ ಇದಕ್ಕೆಲ್ಲಾ ಕಾರಣ, ಸ್ವಚ್ಛತೆ ಕೊರತೆ. ಹೋಟೆಲ್ ಗಳಲ್ಲಿ ಇಲಿ, ಹೆಗ್ಗಣ, ಪಲ್ಲಿ ಇವುಗಳ ವಾಸಸ್ಥಾನವಾಗಿರುತ್ತದೆ. ಇಲ್ಲಿ ತಯಾರಾದ ಅಡಿಗೆಗಳಲ್ಲಿ ಇವುಗಳ ಮಲ ಸೇರುವುದರಿಂದ ಇದು ಸಹಜವಾಗಿ ನಮ್ಮ ಹೊಟ್ಟೆಯನ್ನು ಸೇರುತ್ತದೆ.

ಇದು ಕ್ರಮೇಣ ನಮ್ಮ ಹೊಟ್ಟೆಯಲ್ಲಿ ಉಳಿದು ಕರುಳಿನಲ್ಲಿ ತನ್ನ ಕೆಲಸ ಪ್ರಾರಂಭಿಸುತ್ತದೆ. ಇದು ನಾನು ಮೇಲೆ ಹೇಳಿದ ಎಲ್ಲಾ ಅನುಭವಗಳನ್ನು ನಮ್ಮ ದೇಹಕ್ಕೆ ಕೊಡುತ್ತದೆ. ಇದಕ್ಕೆ ಪರಿಹಾರ ಹೊರಗಿನ ತಿಂಡಿಯನ್ನು ತಿನ್ನದಿರುವುದು ಇದು ಸಾಧ್ಯವಿಲ್ಲ ಎಂದರೆ ಮೂರು ತಿಂಗಳಿಗೊಮ್ಮೆ ದೇಹವನ್ನು

1)ಶುದ್ಧಗೊಳಿಸಿಕೊಳ್ಳುವುದು ವಮಾನ ಅಥವಾ ವಿರೇಶನ.

2) ತಿಂಗಳಿಗೆ ಎರಡು ಬಾರಿ ಉಪವಾಸ ಇದಕ್ಕೆ ನಮ್ಮಲ್ಲಿ ಹಿಂದಿನವರು ಏಕಾದಶಿಯನ್ನು ಆಚರಣೆಯಲ್ಲಿ ತಂದಿರುತ್ತಾರೆ.

3) ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಸಂಜೆ ಊಟ ಬಿಡುವುದು.

ಈ ಸಮಸ್ಯೆಯನ್ನು ಎದುರಿಸುವವರು ನಮ್ಮಲ್ಲಿಗೆ ಬರುತ್ತಾರೆ. ಅವರಿಗೆ ಬೇರು ಕಟ್ಟುವ ಪದ್ಧತಿ ಇರುತ್ತದೆ. ಆಶ್ಚರ್ಯ ಎನ್ನುವ ರೀತಿಯಲ್ಲಿ ಒಂದು ತಿಂಗಳಲ್ಲಿ ಇವರು ಆರೋಗ್ಯವಂತರಾಗುತ್ತಾರೆ. ಜೊತೆಯಲ್ಲಿ ಔಷಧೀಯ ಗಿಡಗಳಿಂದ ತಯಾರಿಸಿದ ಉಪಚಾರ ಮಾಡಲಾಗುತ್ತದೆ. ಒಂದಿಷ್ಟು ಪಥ್ಯ ಅನಿವಾರ್ಯ.

ಪ್ರಾಣಿಗಳನ್ನು ಗಮನಿಸಿ. ಹೊಟ್ಟೆಯಲ್ಲಿ ಆಹಾರ ಹೆಚ್ಚಿದ್ದಾಗ ಅವು ಮತ್ತೆ ಆಹಾರವನ್ನು ಸೇವಿಸುವುದಿಲ್ಲ. ಇದನ್ನು ಪ್ರತಿಯೊಂದು ಪ್ರಾಣಿಯೂ ಪ್ರಕೃತಿ ಸಹಜವಾಗಿ ಮಾಡಿಕೊಳ್ಳುತ್ತದೆ.
ಮಾಂಸವನ್ನೇ ತಿಂದು ಬದುಕುವ ಹುಲಿ ಸಹ ಹುಲ್ಲನ್ನು ತಿಂದು ಆಹಾರವನ್ನು ಹೊರಹಾಕಿ ತನ್ನ ಕರುಳನ್ನು ಶುದ್ಧಿಗೊಳಿಸುತ್ತದೆ. ಅದೇ ಏಕೆ ನಮ್ಮ ಕಣ್ಣೆದುರಲ್ಲಿ ಬೆಕ್ಕು ನಾಯಿ ಹುಲ್ಲು ತಿಂದು ಆಹಾರವನ್ನು ಕಕ್ಕುವುದನ್ನು ನೋಡಿರುತ್ತೇವೆ.


  • ಸುಮನಾ ಮಳಲಗದ್ದೆ – ನಾಟಿ ವೈದ್ಯರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading