ಬಾ ಗುರೂ ಬಸ್ಕಿ ಹೊಡೆಯೋಣಾ!!! – ಡಾ.ಪ್ರಕಾಶ ಬಾರ್ಕಿ



ಶಾಲೆಯಲ್ಲಿ ಶಿಕ್ಷೆಯಾಗಿ ಕೊಡುತ್ತಿದ್ದ “ಬಸ್ಕಿ” ಗೂ… ಯೋಗಕ್ಕೂ… ನಂಟಿದೆ. ಅದರ ಮಹತ್ವವನ್ನು ಡಾ. ಪ್ರಕಾಶ ಬಾರ್ಕಿಯವರು ಓದುಗರಿಗೆ ತಿಳಿಸಿದ್ದಾರೆ. ಮುಂದೆ ಓದಿ…

ನಾವು ಓದುವಾಗ ತುಂಬಾ ಜನ ಶಾಲೆಲಿ #ಹೋಮ್_ವರ್ಕ್” ಮಾಡದಿದ್ದಾಗ, ಓದು-ಬರೆಯುವಲ್ಲಿ ತಪ್ಪಿದಾಗ ಮಾಸ್ತರರು ಉಳ್ಳಾಡಿಸಿ ಹೊಡಿತಿದ್ರು ಇಲ್ವಾದ್ರೆ “ಬಸ್ಕಿ” ಹೊಡೆಯೋದು ಮಾತ್ರ ಖಾಯಂ.

ಪ್ರತಿ ದಿನ “ಬಸ್ಕಿ” ಹೊಡಿತಿದ್ದ ದೊಡ್ಡ ಗುಂಪೇ ಪ್ರತಿ ಕ್ಲಾಸಲ್ಲಿ ಇರುತ್ತಿತ್ತು.

ನಾವು ಬಸ್ಕಿ ಹೊಡೆದವರೆ ಅಲ್ವಾ..!?

(ಕೊರೋನಾ ಲಾಕ್ಡೌನಲ್ಲಿ ಕಳ್ಳಾಟ ಆಡಿದವರಿಗೂ ಪೋಲಿಸರು ಸಹ ಶಿಕ್ಷೆ ಕೊಟ್ಟಿದ್ದು ಬಸ್ಕಿ ಹೊಡೆಸಿ)

ಫೋಟೋ ಕೃಪೆ : financialexpress

ಅಚ್ಚರಿಯ ವಿಷಯವೆಂದರೆ ಪಾಶ್ಚಿಮಾತ್ಯರ ಕಣ್ಣು.. ನಾವು ಪಡೆದ ಶಿಕ್ಷೆ ಮೇಲೆ ಬಿದ್ದಿದೆ. ಅದೆಂಥದೋ ರಿಸರ್ಚ ಮಾಡಿ.. ಇದನನ್ನೆ “Super Brain Yoga” ಅಂತ ಪೆಟೇಂಟ್ ಗಿಟ್ಟಿಸಿಕೊಂಡಿದ್ದಾರಂತೆ ಅಮೇರಿಕನ್ನರು. ನಾವೇ #ಸಂಶೋಧನೆ ಮಾಡಿದ್ದು ನಮ್ಮದೇ ಅಂತ.

ಅಯ್ಯೋ ಮುಟ್ಠಾಳರಾ… ಅದು ಗೊತ್ತಿದ್ದಕ್ಕೆ ನಾವು ಚಿಕ್ಕವರಿದ್ದಾಗ ಶಾಲೇಲಿ ಮಾಸ್ತರರೂ ದಡ್ಡರಿಗೆ “#ಬಸ್ಕಿ” ಹೊಡೆಸಿದ್ದಾರೆ.

ದೊಡ್ಡವರಾದ ಮೇಲೆ… ತಂದೆ-ತಾಯಿ ಸಹ ನಾವು ತಪ್ಪು ಮಾಡಿದಾಗ “ದೇವರ” ಮುಂದೆ ಶಿಕ್ಷೆ ತರಹ ಬಸ್ಕಿ ಹಾಕಿಸ್ತಿದ್ದಾರೆ.

ಅದೆಲ್ಲ ಪ್ರಯೋಜನಗಳನ್ನ ಅರಿತೇ.. ನಮ್ಮ ಹಿರಿಯರು “ಬಸ್ಕಿ”ಯನ್ನ ನಮ್ಮ ಜೀವನದುದ್ದಕ್ಕೂ ಹೊಡೆಸುತ್ತಿದ್ದಾರೆ.

ಮುಂದೆ ಯಾವತ್ತೊ ಒಂದಿನ, ನೀವು ಬಸ್ಕಿ ಹೊಡೆಯುವಂತಿಲ್ಲ… ಅದು ನಮ್ಮ ಸಂಶೋಧನೆ ಎಂದು ಹೇರಿಕೆ ಹಾಕದಿದ್ದರೆ ಸಾಕು.

ಸಾವಿರಾರು ವರುಷಗಳ ಹಿಂದೆಯೇ ಶಲ್ಯತಂತ್ರ (Surgery) ಕಂಡು ಹಿಡಿದ  ಸುಶ್ರುತ ಆಚಾರ್ಯರ ಕೆಲಸಗಳನ್ನ ಮುಂದುವರೆಸಿ (Copy ಮಾಡಿ) ಅದಕ್ಕೊಂದಿಷ್ಟು ಹೆಸರುಗಳನ್ನು ಕೊಟ್ಟು.. ನಾವೇ ಸಂಶೋಧನೆ ಮಾಡಿದ್ದು.. Surgery ನಮ್ಮ ಸ್ವತ್ತು ಎನ್ನುವಂತೆ ಬಾಯಿ ಬಡಿದುಕೊಳ್ಳುತ್ತೀರೊ.. ವೈದ್ಯರಂತಾಗದಿರಲಿ.

ಬಸ್ಕಿ= super brain yoga

ಶಲ್ಯತಂತ್ರ= Surgery, plastic surgery, opthalmology , Dentistry.

ಆದರೆ ಈ ಬಸ್ಕಿ ವಾಸ್ತವದಲ್ಲಿ ಭಾರತೀಯರ ಬ್ರಾಹ್ಮೀ ಪ್ರಾಣಾಯಾಮದ ಒಂದು ಆಯಾಮದ ವಿಧಾನ.

ಫೋಟೋ ಕೃಪೆ : wordzz

ಬಸ್ಕಿ ಅಂಥದ್ದೇನು ಇದೇ ಅಂತಿರಾ?

ನಮ್ಮ #ಕಿವಿಗೂ ಮೆದುಳಿಗೂ ನಂಟಿದೆ.

#ಬಲ_ಕಿವಿಯ ನರಗಳು ಮೆದುಳಿನ ಎಡ ಭಾಗಕ್ಕೆ ಸಂಪರ್ಕ ಹೊಂದಿದ್ದರೆ..ಎಡಕಿವಿಯ #ನರಗಳು ಮೆದುಳಿನ ಬಲಭಾಗಕ್ಕೆ ಸಂಪರ್ಕ ಹೊಂದಿರುತ್ತೆ.

ನಾವು ಕಿವಿಯನ್ನು ಹಿಡಿದುಕೊಂಡಾಗ ಮೆದುಳಿಗೆ ಸೂಕ್ಷ್ಮವಾದ ಶಕ್ತಿ ತರಂಗಗಳು ರವಾನೆಯಾಗುತ್ತವೆ. ಆಗ ಅದು ಚುರುಕಾಗಿ ಕಾರ್ಯ ನಿರ್ವಹಿಸುತ್ತೆ. ಎಲ್ಲಾ ವಯಸ್ಸಿನವರೂ ಮಾಡಬಹುದಾದ ಸುಲಭ ಯೋಗಾಸನವಿದು. ಸರಳವಾದದು.

ಪರಕೀಯರ ಸ್ವತ್ತು Super brain Yoga ಅನ್ನೋ ಬದಲು ಇದನನ್ನ ಬಸ್ಕಿಯಾಗಿಯೇ ಉಳಿಸಿಕೊಳ್ಳಬೇಕಿದೆ.

ಫೋಟೋ ಕೃಪೆ : ultimastatus

ಬಸ್ಕಿ ಪ್ರಯೋಜನಗಳು : 

  • ಮೆದುಳು ಚುರುಕುಗೊಳ್ಳುತ್ತದೆ.ಆಲೋಚನಾ ಶಕ್ತಿ, ಜ್ಞಾಪಕ ಶಕ್ತಿ ಮತ್ತು ಸೃಜನಶೀಲತೆ ವೃದ್ಧಿಸಲ್ಪಡುತ್ತೆ.
  • ಒತ್ತಡ ಕಡಿಮೆಯಾಗಿ ಮನಸ್ಸು ಶಾಂತಗೊಳ್ಳುತ್ತೆ.
  • ಏಕಾಗ್ರತೆಯೂ ಹೆಚ್ಚುತ್ತದೆ. ಮಾನಸಿಕ ಸಂತುಲನೆ ಸಾಧ್ಯವಾಗುತ್ತೆ.
  • ಕೋಪ ಆವೇಶ, ತುಂಟಾಟ ತಹಬದಿಗೆ ಬರುತ್ತೆ.
  • ಆಟಿಸಂ, ಅಲ್‌ಝೈಮರ್ ಮುಂತಾದ ತೊಂದರೆಯುಳ್ಳ ಮಕ್ಕಳು ಈ ಯೋಗಾಸನ ಕಲಿಯುವುದರಿಂದ ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು ಎನ್ನುತ್ತಾರೆ #ಯೋಗ ತಜ್ಞರು.
  • ಪ್ರತಿದಿನ ಮೂರು ನಿಮಿಷದಂತೆ. 90 ದಿನ ಸತತ ಅಭ್ಯಾಸ ಮಾಡಿದ್ರೆ ನಿಶ್ಚಿತ ಲಾಭ ಪಡೆಯಬಹುದಂತೆ.

ಅದ್ಕೆ ಹೇಳಿದ್ದು  ಬಾ ಗುರೂ ಬಸ್ಕಿ ಹೊಡೆಯೋಣ ಅಂತ.


  • ಡಾ.ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW