ಪ್ರಯಾಣ ಸಂದರ್ಭದಲ್ಲಿನ ವಾಂತಿಗೆ ಸಲಹೆಗಳುಪ್ರಯಾಣ ಸಂದರ್ಭದಲ್ಲಿನ ವಾಂತಿಯಾಗುತ್ತದೆ ಇದಕ್ಕೆ ಆರೋಗ್ಯತಜ್ಞರಾದ ರಾಜೇಂದ್ರ ಸ್ವಾಮಿ ಅವರು ಓದುಗರೊಂದಿಗೆ ಆಯುರ್ವೇದ ಪರಿಹಾರಗಳು ಮತ್ತು ಸಲಹೆಗಳನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ… 

ಈ ಸಮಸ್ಯೆಯನ್ನು #ಟ್ರಾವೆಲಿಂಗ್_ಸಿಕ್ನೆಸ್ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಪ್ರತಿ ಆರು ಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಸಾಮಾನ್ಯ ಮಟ್ಟದಿಂದ ತೀವ್ರ ಅನಾರೋಗ್ಯದವರೆಗೂ ಕಾಡುತ್ತಿರುತ್ತದೆ.
ಈ ಪಟ್ಟಿಯಲ್ಲಿ ಬರುವ ವ್ಯಕ್ತಿಗಳು ಸಾಮಾನ್ಯವಾಗಿ ಪ್ರಯಾಣವನ್ನು ತಪ್ಪಿಸುತ್ತಾರೆ ಅಥವಾ ಮುಂದೂಡುತ್ತಿದ್ದಾರೆ.

ಸಾಮಾಜಿಕವಾಗಿ ಈ ಸಮಸ್ಯೆಯನ್ನು ಒಪ್ಪಿಕೊಳ್ಳದಿದ್ದರೂ ಅವರು ದಾರಿಯುದ್ದಕ್ಕೂ ತಮ್ಮ ಪ್ರಯಾಣದ ಕುರಿತು ಹಾಗೂ ತಮ್ಮ ಸಮಸ್ಯೆ ಕುರಿತು ಒಂದು ಕೀಳಿರಿಮೆ ಮತ್ತು ಅಭದ್ರತೆಯನ್ನು ಬೆಳೆಸಿಕೊಂಡಿರುತ್ತಾರೆ.

ಇನ್ನು ಕೆಲವು ಸಂದರ್ಭಗಳಲ್ಲಿ ನಿಮ್ಮ ಮಾನಸಿಕ ಸ್ಥಿತಿಯು ಆಲೋಚನೆಯೂ ಕೇವಲ ಒಂದು ತರಹದ ರಸ್ತೆಗಾಗಿ ಅಥವಾ ಯಾವುದೇ ಒಂದು ವಾಹನಕ್ಕೆ ಈ ರೀತಿಯ ಸಿಕ್ನೆಸ್ ಗೆ ಸಿಲುಕಿ ಒದ್ದಾಡುತ್ತಿರುತ್ತದೆ. ಉದಾಹರಣೆಗೆ ಕೆಲವರಿಗೆ ಬಸ್ಸುವಾಂತಿ ತರಿಸಿದರೆ ಕೆಲವರಿಗೆ ಕಾರು ಮತ್ತೆ ಕೆಲವರಿಗೆ ಕಾರಿನಲ್ಲಿ ನ ಎ.ಸಿ. ಕೆಲವರು ಊಟ ಮಾಡಿದ್ದಕ್ಕಾಗಿ ಹೀಗಾಯಿತು ಎಂದುಕೊಳ್ಳುತ್ತಾರೆ
ಕೆಲವರು ರಾತ್ರಿ ನಿದ್ದೆ ಆಗಿರದ ಕಾರಣವನ್ನು ಸಮರ್ಥಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಬೇರೊಬ್ಬರ ಈ ಸಮಸ್ಯೆಯಿಂದ ನಮಗೆ ವಾಂತಿಯಾಗುವ ಸನ್ನಿವೇಶಗಳು ಉಂಟು.

ಫೋಟೋ ಕೃಪೆ : google

ಅದೇನೇ ಇರಲಿ ಆಯುರ್ವೇದವು ಈ ಎಲ್ಲಾ ಸಮಸ್ಯೆಗಳಿಗೆ ತನ್ನದೇ ವೈಜ್ಞಾನಿಕ ರೀತಿಯಲ್ಲಿ ಪರಿಹಾರಗಳನ್ನು ಹೊಂದಿದೆ. ವಾತದ ಚಾರ್ಡಿ ಮತ್ತು ತಲೆತಿರುಗುವಿಕೆ ಯನ್ನು ವಿವರಿಸುವಾಗ ಮೇಲೆ ತಿಳಿಸಿರುವ ಕಾರಣಗಳ ಪರಿಸ್ಥಿತಿಗಳು ಉಂಟಾಗುತ್ತವೆ ಎಂದು ಇನ್ನು ಇನ್ನು ಹಲವು ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ಆಯುರ್ವೇದವು ತಿಳಿಸುತ್ತದೆ.

ನಮ್ಮ ಆರೋಗ್ಯವು ನಮ್ಮ ಧಾತುಗಳ ಆರೋಗ್ಯದಿಂದ ಪೋಷಣೆ ಆಗುತ್ತಿರುತ್ತದೆ ಅಂದರೆ ದೇಹದಲ್ಲಿ ಉತ್ಪತ್ತಿಯಾಗುವ ರಸಧಾತು ಮುಂದುವರೆದು ರಕ್ತವನ್ನು ಪೋಷಿಸುತ್ತದೆ ರಕ್ತದ ಮುಂದುವರೆದು ಮಾಂಸವನ್ನು ಪೋಷಿಸುತ್ತದೆ ಈ ತರನಾಗಿ ರಸ ರಕ್ತ, ಮಾಂಸ ಮೇದ, ಅಸ್ಥಿ ಮಜ್ಜೆ ಹಾಗೂ ಶುಕ್ರ ದಾತುಗಳು ಎಂಬ ಧಾತುಗಳಿಂದ ದೇಹವು ಪೋಷಣೆಗೊಳ್ಳುತಿರುತ್ತದೆ.

ರಸಧಾತು ಕ್ಷೀಣಿಸಿದಾಗ ಮನುಷ್ಯನ ಸಪ್ತಧಾತುಗಳು ಸೊರಗಿ ದುರ್ಬಲ ನಾಗುತ್ತಾನೆ ಕೆಲವೊಮ್ಮೆ ಇದು ನಮ್ಮ ಗಮನಕ್ಕೆ ಬರದಿದ್ದರೂ ಪ್ರಯಾಣದ ಸಂದರ್ಭದಲ್ಲಿ ನಮ್ಮ ಒಳಗಾಗುವ ಏರುಪೇರುಗಳಿಗೆ ಇದು ಮುಖ್ಯ ಕಾರಣವಾಗುತ್ತದೆ.

ಫೋಟೋ ಕೃಪೆ : google

ಪರಿಹಾರಗಳು:

 • ಮೊದಲನೆಯದಾಗಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು.
 • ಚಿಕ್ಕ ಚಿಕ್ಕ ಪ್ರಯಾಣಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು.
 • ನಿಮ್ಮ ದೇಹ ಮತ್ತು ಮನಸ್ಸು ಖುಷಿಯಲ್ಲಿದೆ ಎಂದೆನಿಸಿದಾಗ ಪ್ರಯಾಣವನ್ನು ಕೈಗೊಳ್ಳಿ.
 • ಒಂದು ಭಯ ಇರುವವರು ಕಿಟಕಿಯ ಕಡೆ ಹಾಗೂ ಕಾರಿನ ಮುಂಬದಿಯ ಕುರ್ಚಿಯಲ್ಲಿ ಕುಳಿತ ತೆರೆದ ಕಿಟಕಿಯಲ್ಲಿ ಪ್ರಯಾಣಿಸಿ ಪ್ರಕೃತಿಯ ಸೊಬಗನ್ನು ಸವಿಯುವತ್ತ ಗಮನಹರಿಸಿ.
 • ಪ್ರಯಾಣಕ್ಕೆ ಹಿಂದಿನ ದಿನ ಜೀರ್ಣಿಸಿಕೊಳ್ಳಲು ಕಷ್ಟವಾಗುವ ಆಹಾರವನ್ನು ಸೇವಿಸಬೇಡಿ.
 • ಪ್ರಯಾಣಕ್ಕೆ 20- 30 ನಿಮಿಷಗಳ ಮುಂಚೆ ಗಟ್ಟಿ ಪದಾರ್ಥಗಳನ್ನು ಏನನ್ನು ಸೇವಿಸಬೇಡಿ.
 • ಜೀರ್ಣಶಕ್ತಿಗೆ ಸಹಾಯವಾಗುವ ಪಾನೀಯಗಳು ಉತ್ತಮ.
 • ಘಾಟ್ ಸೆಕ್ಷನ್ ನಲ್ಲಿ ಪ್ರಯಾಣಿಸುವಾಗ ಒಮ್ಮೆಲೆ ಬರುವ ತಿರುವುಗಳನ್ನು ಗಮನಿಸದೆ ಕಣ್ಣುಗಳನ್ನು ಮುಚ್ಚಿಕೊಳ್ಳಿ.
 • ಮೆದುಳಿಗೆ ಒತ್ತಡ ತರುವಂತಹ ಬಸ್ಸಿನ ಕರ್ಕಶ ಧ್ವನಿಯಿಂದ ಹೊರಬರಲು ಕಿವಿಯಲ್ಲಿ ಹತ್ತಿ ಬಳಸಿ .

ಫೋಟೋ ಕೃಪೆ : google

ರಸ ಧಾತುವನ್ನು ಅಭಿವೃದ್ಧಿಪಡಿಸಿ ಎಲ್ಲ ಸಮಸ್ಯೆಯಿಂದ ಹೊರ ಬಂದು ಆರೋಗ್ಯದಿಂದಿರಲು ನಮ್ಮ ಪೂರ್ವಜರು ಪಾಲಿಸುತ್ತಿರುವ ಆರೋಗ್ಯ ಪದ್ಧತಿ ಬಹುಮುಖ್ಯವಾಗಿದೆ.
ಎಂದರೆ
* ಚಹಾ ಮತ್ತು ಕಾಫಿ ಸೇವನೆ ಗಳನ್ನು ನಿಲ್ಲಿಸುವುದು.
* ಬೇಕರಿ ಹಾಗು ಕರಿದ ಪದಾರ್ಥಗಳನ್ನು ನಿಲ್ಲಿಸುವುದು.
* ದೇಹದ ಜೀರ್ಣಶಕ್ತಿಗೆ ಕಷ್ಟವಾಗುವ ಪದಾರ್ಥಗಳನ್ನು ನಿಲ್ಲಿಸುವುದು.
* ದೇಹಕ್ಕೆ ವ್ಯಾಯಾಮವನ್ನು ಕೊಡದೆ ಅತಿ ಹೆಚ್ಚು ಪ್ರೋಟೀನ್ ಅನ್ನು ಕೊಟ್ಟು ದೇಹವು ಒಣಗುವಂತೆ ಮಾಡುವುದು ಇವುಗಳನ್ನು ನಿಲ್ಲಿಸಿ..ಚಿಕಿತ್ಸಾಕ್ರಮ:
ಚಿಕಿತ್ಸೆಯು ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಸಮಸ್ಯೆಯ ತೀವ್ರತೆಯನ್ನು ಅರಿತು ನೀಡಬೇಕಾಗಿರುವುದರಿಂದ ವೈಯಕ್ತಿಕವಾಗಿ ಸಂಪರ್ಕಿಸಿ ಆರೋಗ್ಯದ ಜೀವನವನ್ನು ನಡೆಸಿ.

 • ರಾಜೇಂದ್ರ ಸ್ವಾಮಿ  ಅವರನ್ನು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ : 97389 33566, ದಿ ರಾಯಲ್ ಅಕಾಡೆಮಿ- 7676660113)

 • ರಾಜೇಂದ್ರ ಸ್ವಾಮಿ (ಕೇರಳಿ ಆಯುರ್ವೇದ ಪದ್ಧತಿಯ ಆರೋಗ್ಯ ತಜ್ಞರು, ದಿ ರಾಯಲ್ ಅಕಾಡೆಮಿ ಎಂಬ ಸಂಸ್ಥೆಯ ಮೂಲಕ ಹಲವಾರು ಜೀವನ ಶಿಕ್ಷಣಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದಾರೆ), ದಾವಣಗೆರೆ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW