ಮಹಿಳೆಯರಿಗಾಗಿ ಕೆಲವು ಸಲಹೆಗಳು

ಮಹಿಳೆ ತನ್ನನ್ನು ತಾನೇ ಮರೆತು ಬಿಡುತ್ತಾಳೆ. ಮಕ್ಕಳಲ್ಲಿ, ಗಂಡಂದಿರಲ್ಲಿ ಇರುವ ಏಳಿಗೆಯನ್ನನೋಡಿ ತೃಪ್ತಿ ಪಟ್ಟುಕೊಳ್ಳುತ್ತಾಳೆ. ಅದರಲ್ಲೇ ತ ನ್ನನ್ನು ತಾನು ಗುರುತಿಸಿಕೊಳ್ಳುತ್ತಾಳೆ. ಹೆಣ್ಣಿನ ಕುರಿತು ದೇವರಾಜ ಚಾರ್ ಮೈಸೂರು ಅವರ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…

ಪ್ರತಿವರ್ಷದಂತೆ ಈ ವರ್ಷವೂ ಮಹಿಳಾ ದಿನಾಚರಣೆ ನಡೆಯಿತು. ಮಹಿಳೆಯರಿಗೆ ಎಲ್ಲಾ ಹಂತಗಳಲ್ಲೂ ಮೀಸಲಾತಿ ತರಬೇಕು. ಅವರನ್ನು ಅಡಿಗೆ ಮನೆಯಿಂದ ಹೊರ ತರಬೇಕು. ಅವರಲ್ಲಿರುವ ಕಲೆ, ಕೌಶಲ್ಯ, ಪ್ರೀತಿ, ಮನೋಸ್ಥೈರ್ಯ, ಅವರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ಕೆಲವರನ್ನು ಗುರುತಿಸಿ ಸನ್ಮಾನ ಮಾಡಬೇಕು. ಇದೆಲ್ಲ ಸರಿ. ಮಹಿಳಾ ದಿನಾಚರಣೆ ಆ ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅವರಿಂದ ಅವರನ್ನು ಕುರಿತು ಭಾಷಣ, ಸಂಭ್ರಮ, ಲೇಖನಗಳು ಅಷ್ಟಕ್ಕೆ ಸೀಮಿತವಾಗದೆ, ಎಲ್ಲಾ ಹಂತಗಳಲ್ಲೂ ಅವರನ್ನು ಮುನ್ನೆಡೆಗೆ ತರಬೇಕು. ಈ ನಿಟ್ಟಿನಲ್ಲಿ ಮಹಿಳೆಯರು ಪುರುಷರು ಯೋಚಿಸಬೇಕು.

ಮಹಿಳೆಯರು ಅಡುಗೆ ಮನೆಗೆ ಮೀಸಲು ಅನ್ನುವ ಕಾಲವೊಂದಿತ್ತು. ಈಗಲೂ ಸಹ ಕೆಲವು ಮಹಿಳೆಯರು ಅಡುಗೆ ಮನೆಯನ್ನು ಸಹ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದದ್ದರಲ್ಲಿ ಪರವಾಗಿಲ್ಲ. ಮಹಿಳೆಯರು ವಿದ್ಯಾವಂತರಾಗುತ್ತಿದ್ದಾರೆ.ಮುಖ್ಯ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಎ ಷ್ಟು ಮಹಿಳೆಯರು ರಾಜಕೀಯದಲ್ಲೂ ಸಹ ಗುರುತಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಉದ್ಯೋಗಿಗಳಾಗುತ್ತಿದ್ದಾರೆ.

ಆದರೆ ಇದರ ಜೊತೆಗೆ ಮಹಿಳೆ, ಮನೆ ವಾರ್ತೆ, ಮಕ್ಕಳನ್ನು ತಯಾರು ಮಾಡುವುದು, ಹಿರಿಯರು, ಗಂಡಂದಿರನ್ನು ನೋಡಿಕೊಳ್ಳುವುದು.ಇದ್ದೆ ಇದೆ. ಹಲವು ಮನೆಗಳಲ್ಲಿ ಹಿರಿಯರು, ಗಂಡಂದಿರು ಸಹಕರಿಸುತ್ತಿರುವುದು ಸರಿ ಅಷ್ಟೇ. ಇದೆಲ್ಲದರ ನಡುವೆ ಮಹಿಳೆ ತನ್ನನ್ನು ತಾನೇ ಮರೆತು ಬಿಡುತ್ತಾಳೆ. ಮಕ್ಕಳಲ್ಲಿ, ಗಂಡಂದಿರಲ್ಲಿ ಇರುವ ಏಳಿಗೆಯನ್ನನೋಡಿ ತೃಪ್ತಿ ಪಟ್ಟುಕೊಳ್ಳುತ್ತಾಳೆ. ಅದರಲ್ಲೇ ತ ನ್ನನ್ನು ತಾನು ಗುರುತಿಸಿಕೊಳ್ಳುತ್ತಾಳೆ.

ಮಹಿಳೆಯರಿಗಾಗಿ ಕೆಲವು ಸಲಹೆಗಳು :

  • ತಾನು ಎಲ್ಲರಂತೆ ಕೆಲಸದ ನಡುವೆ ವಿಶ್ರಮಿಸಬೇಕು.
  • ಎಲ್ಲರಂತೆ ಕಾಲಕಾಲಕ್ಕೆ ತಿಂಡಿ ಊಟ ಮಾಡಬೇಕು.
  • ಮನೋರಂಜನೆಯಲ್ಲಿ ತೊಡಗಿಸಿಕೊಳ್ಳಬೇಕು
  • ಆರೋಗ್ಯವನ್ನು ಕಾಪಾಡಿಕೊಳ್ಳಬೇಕು
  • ತನ್ನ ಆಸೆ ಆಕಾಂಕ್ಷೆಯನ್ನು ಮನೆಯವರ ಜೊತೆ ಹಂಚಿಕೊಳ್ಳಬೇಕು.
  • ಎಲ್ಲರ ಅಭಿಪ್ರಾಯವನ್ನು ಒಪ್ಪಬೇಕು ಅಂತ ಇಲ್ಲ,ತನ್ನ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಬೇಕು.
  • ತಾನು ಎಲ್ಲರ ಜೊತೆ ಕುಂತು ಊಟ ಮಾಡಬೇಕು.
  • ತನ್ನವರಿಗೆ ಬಡಿಸಿದ ಮೇಲೆ ಉಳಿದಿದ್ದನ್ನು ತಿನ್ನಬೇಕು ಅಂತ ಇಲ್ಲ.
  • ಊಟ ತಿಂಡಿ ವಿಚಾರದಲ್ಲಿ ಉಳಿದಿದ್ದನ್ನು ತಿನ್ನುವುದು, ಕಡಿಮೆಯಾದಾಗ ಹಿಂದಿನ ದಿನದ ಗೊಜ್ಜು ಪಲ್ಯವೋ ತಿಂದು ಆ ದಿನದ ಕತೆಯನ್ನು ಮುಗಿಸುವುದು.
  • ಮನೆಯ ಮುಖ್ಯಸ್ಥ ಊಟಕ್ಕೆ ಬರದಿದ್ದರೆ ಇದ್ದದನ್ನೇ ತಿನ್ನುವುದು.
  • ಹಾಗೆಯೇ ಕಾಲ ಕಳೆಯುವುದು.
  • ಆರೋಗ್ಯದಲ್ಲಿ ವ್ಯತ್ಯಾಸ ವಾದಗ ಏನಾಗಲ್ಲ ಅಂತ ಸುಮ್ಮನಿರದೇ, ಪರಿಣಿತ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು.
  • ಮಕ್ಕಳೇ ಸರ್ವಸ್ವ ಅಂತ ಹೆಚ್ಚು ತಲೆ ಕೆಡಿಸಿಕೊಳ್ಳದೆ, ನಾರ್ಮಲ್ ಆಗಿರಬೇಕು.
  • ನಮಗೆ ಎಟುಕುವುದಷ್ಟೇ ನಮ್ಮ ಆಸ್ತಿ. ಎಟುಕದ್ದನ್ನು ಬಯಸಬಾರದು.
  • ಅಧಿಕಾರಿಗಳಾದವರು, ರಾಜಕೀಯದಲ್ಲಿರುವವರು, ಹಣಕ್ಕೆಆಸೆ ಪಡದೆ ಗೌರವದಿಂದ ಕರ್ತವ್ಯ ನಿಭಾಯಿಸಬೇಕು.
  • ಮಹಿಳೆಯರ ಸ್ಥಾನಮಾನಕ್ಕೆ, ಮೀಸಲಾತಿಗಾಗಿ ಹೋರಾಡಬೇಕು.
  • ದಿನ ಪತ್ರಿಕೆಯಲ್ಲಿ  ಮಹಿಳೆಯರಿಗಾಗಿ ವಿಶೇಷ ಲೇಖನವಿರುತ್ತದೆ. ತಪ್ಪದೇ ಅದನ್ನು ಓದಿ ಸಾಧ್ಯವಾದರೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
  • ಗಂಡನನ್ನು /ಪುರುಷರನ್ನು, ಮಹಿಳಾ ಉದ್ಯಮಿಗಳು ತಮ್ಮಲ್ಲಿ ಅವರ ಅಭಿಪ್ರಾಯ ಅಳವಡಿಸಿಕೊಂಡು ಗೆಲ್ಲುವುದು. ಅಂದರೆ ಅವರ ಸಹಚರ್ಯದಿಂದ ಸಂಪ್ರೀತ ರಾಗುವುದು.(Inspire Inclusion).
  • ಅವರು ಸಹ ಸೇರಿಕೊಳ್ಳುವಂತೆ ನೋಡಿಕೊಳ್ಳುವುದು.
  • ಬದುಕನ್ನು ಕಂಡುಕೊಳ್ಳುವುದು. ಮಾಮೂಲಿ ಪದಗಳಾದ ಸ್ವಾವಲಂಬನೆ, ಸ್ವತಂತ್ರ ಬದುಕು,ಮಹಿಳೆಯರ ಹಕ್ಕು,ಅಂತ ಘೋಷಣೆ ಕೂಗುವುದನ್ನು ಬಿಟ್ಟು, ಸಹ ಬಾಳ್ವೆಯಲ್ಲಿ ಪಾಲ್ಗೊಳ್ಳುವುದು ಸರಿಯಾದ ಮಾರ್ಗವೇನು ಅಂತ.
  • ಪ್ರತಿ ಹಂತದಲ್ಲೂ ತಾವಷ್ಟೇ ಒಳಗೊಳ್ಳದೆ, ಅವರು ತೊಡಗಿಸಿಕೊಳ್ಳುವುದಕ್ಕೆ ಪ್ರಚೋದಿಸಬೇಕು. ಇದರಿಂದ ಪರಿಪೂರ್ಣತೆಯನ್ನು ಪಡೆಯಬಹುದೇನೋ?
    ಮಹಿಳೆಯರು ಅಲ್ಲಲ್ಲಿ ತಮ್ಮವರನ್ನು ಬಳಸಿಕೊಂಡರೆ ಬದುಕು ಸಹನೀಯ ವಾಗಬಹುದು.

  • ದೇವರಾಜ ಚಾರ್ ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW