ತೊಡುವ ಗುಂಡಿಗೆ ನಾವೇ ಹಾರ – ಖಾದರ್ ಎಕೆ

ಯುವ ಕವಿ, ಲೇಖಕ ಖಾದರ್ ಎಕೆ ಅವರ ಕತೆ ಪುಟ್ಟದಾದರೂ ನೀತಿ ಮಾತ್ರ ದೊಡ್ಡದು, ತಪ್ಪದೆ ಓದಿ…

ಒಬ್ಬ ಮನುಷ್ಯನಿದ್ದ ಬೆಂಕಿಯ ಹಾಗೆ ಯಾವಾಗಲೂ ಕಾರುತ್ತಲೇ ಇದ್ದ. ಯಾರೊಂದಿಗು ಸಲುಗೆಯಾಗಲಿ ಸ್ನೇಹವಾಗಲಿ ಇರಲೇ ಇಲ್ಲ. ಅವನ ಜೀವನವೇ ತೊಂದರೆ ಕೊಡುವುದಾಗಿತ್ತು.
ಮನೆಯ ಒಳಗೆ ಯಾರೂ ಬರದಿರಲು ಚರಂಡಿಯ ಬಂಡೆ ತೆಗೆದಿದ್ದ. ತಮ್ಮ ಅವಶ್ಯಕತೆಗೆ ತೆಗೆದು ಹಾಕುವ ಮೆಟ್ಟಿಲು ಇಟ್ಟಿದ್ದ. ತನ್ನ ಮನೆಯ ಚರಂಡಿಗೆ ಯಾರ ನೀರು ಬಾರದಿರಲೆಂದು ಕಲ್ಲಿನ ರಾಶಿಯೇ ಹಾಕಿದ್ದ. ನೆರೆಮನೆಯ ಗಿಡ ಸ್ವಲ್ಪ ತನ್ನ ಮನೆಕಡೆ ಹಾದದ್ದಕ್ಕೆ ರಂಪವೇ ಮಾಡುತಿದ್ದ. ಬೇಲಿಯ ಗಿಡ ಎರಡು ಕಡೆ ನಾಟಿದ್ದ. ಮನೆಯ ಚಾವಣಿ ಏರಿ ಜನರ ನೋಡಿ ಕ್ಯಾಕರಿಸುತ್ತಲೇ ಇದ್ದ.

ಕಾಲವು ಎಂದಿಗೂ ಹೀಗೆ ಇರದು ತಾನೇ, ದಿನವೊಂದು ಬಂದೆ ಬಿಟ್ಟಿತು. ನೆರೆಮನೆಯ ಮರದಲೊಂದು ಪಕ್ಷಿ ಗೂಡು ಕಟ್ಟಿತ್ತು. ಅದು ಸಹ ಅವನಿಗೆ ಸಹಿಸಲು ಆಗುತ್ತಿರಲಿಲ್ಲ. ಕ್ಯಾಕರಿಸಿ ದೊಣ್ಣೆಯ ಬಿಸಿ ಎಗುರಿದ, ಆಯಾ ತಪ್ಪಿ ತಾನು ರಾಶಿ ಹಾಕಿದ್ದ ಚರಂಡಿಯ ಕಲ್ಲಿಗೆ ಬಿದ್ದ. ಬೇಲಿಯ ಜೊತೆ ತನ್ನ ಉಗುಳು ಮೆತ್ತಿ ಹೋಗಿತ್ತು ಮೈಯಲ್ಲಿ. ಸೊಂಟವು ಮುರಿದು ಹೋಗಿತ್ತು. ಕೈ ಬಾಯಿ ನಾಲಿಗೆ ಕಾಲು ಯಾವುದು ನಿಯಂತ್ರಣದಲ್ಲಿ ಇರಲೇ ಇಲ್ಲ. ಮನೆಯವರು ಸಾಕಾಗಿ ಹೊರಪಡಸಲೆಯಲ್ಲೇ ತಂದು ಹಾಕಿದರು. ಜೀವವೊಂದೇ ಉಳಿದಿದ್ದು ಅಹಂಕಾರ ಕೈ ಕಾಲು ಬಿದ್ದು ಹೋಗಿತ್ತು.

ಕಥೆಯ ಸಾರಾಂಶ ಇಷ್ಟೇ ನಾವು ಏನನ್ನು ಭಿತ್ತುತ್ತೇವೋ ಅದೇ ಫಲ. ನಾವು ತೊಡುವ ಗುಂಡಿಗೆ ನಾವೇ ಹಾರ. ಇರುವ ಮುರುದಿನದೊಳಗೆ ಇದ್ದು ಇಲ್ಲದಂತೆ ಖುಷಿಯ ಹಂಚಿ ಸತ್ತು ಹೋಗೋಣ.


  • ಖಾದರ್ ಎಕೆ (ಯುವ ಕವಿ, ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading