ಮಾತು ಬಂಗಾರವಾಗಲಿ…- ಖಾದರ್ ಎಂ. ಕೆ

‘ಮಾತು ಬೆಳ್ಳಿಯಾಗಿರಬೇಕು, ಮೌನ ಬಂಗಾರವಾಗಿರಬೇಕು ಅಂದರೆ ಮಾತ್ರ ಮಾತಿಗೆ ಬೆಲೆ, ಗೌರವ. ಅನಾವಶ್ಯಕ ಮಾತು ಮನೆಯನ್ನಷ್ಟೇ ಅಲ್ಲ, ಇಡೀ ಊರನ್ನೇ ಹಾಳು ಮಾಡುತ್ತದೆ ಎನ್ನುವ ಒಂದು ಸಣ್ಣಕತೆಯ ಮೂಲಕ ಅರ್ಥಪೂರ್ಣವಾಗಿ ವಿವರಿಸಿದ್ದಾರೆ ಯುವ ಕತೆಗಾರ ಖಾದರ್ ಎಂ. ಕೆ ಅವರು, ತಪ್ಪದೆ ಮುಂದೆ ಓದಿ..

ಅದೊಂದು ಊರಿತ್ತು, ಹಾಗೆ ನಮ್ಮ ನಿಮ್ಮ ಊರಿನಂತೆ. ಹೇಗೋ ಒಬ್ಬ ಆಗಂತುಕ ಅಜ್ಜ ಅಲ್ಲಿ ಸೇರಿದ್ದ. ಪಾಪ… ಅಜ್ಜನಿಗೆ ಮಾತು ಬರುತ್ತಿರಲಿಲ್ಲ. ಹಸಿವಿಗಾಗಿ ಬೇಡಿ ತಿನ್ನುತ್ತಿದ್ದ, ಹಣವನ್ನು ಪಡೆಯುತ್ತ ಇರಲಿಲ್ಲ. ಅಜ್ಜ ಕೇಳಿದಾಗ ಕೊಟ್ಟರೆ ಮಾತ್ರ ಪಡೆಯುತ್ತಿದ್ದ, ಇಲ್ಲ ಅಂದರೆ ಮರು ಮಾತಾಡದೆ ಹೋಗುತ್ತಿದ್ದ. ತಾ ಬೇಡಿದ್ದರಲ್ಲಿ ಬಡಪಾಯಿ ಮಕ್ಕಳು ಮತ್ತು ಪ್ರಾಣಿಗಳಿಗೂ ಪಾಲು ನೀಡುತ್ತಿದ್ದ. ಅನೇಕ ಸಣ್ಣ ಪುಟ್ಟ ಸಹಾಯವೂ ಅಜ್ಜ ಊರಲ್ಲಿ ಮಾಡುತ್ತಿದ್ದ. ಒಟ್ಟಿನಲ್ಲಿ ಊರಿಗೆ ಊರೇ ಅಜ್ಜನ ಬಗ್ಗೆ ತಿಳಿದಿತ್ತು.

ಒಂದು ದಿನ ಅಜ್ಜನ ಉಸಿರು ನಿಂತಿತು. ಈ ಸುದ್ದಿ ಊರೆಲ್ಲ ಹರಡಿ ಊರಿಗೆ ಊರೇ ಅಲ್ಲಿ ಸೇರಿತು. ಮೂಕನಾಗಿದ್ದ ಅಜ್ಜ ಊರನ್ನೇ ಮೌನಗೊಳಿಸಿದ್ದ.ಇಷ್ಟಕ್ಕೆಲ್ಲ ಕಾರಣ ಅಜ್ಜ ಮೂಕನಾಗಿದ್ದು ಆಗಿತ್ತು. ಒಂದು ವೇಳೆ ಅಜ್ಜ ಮಾತಾಡಿ ಮಾತಿನ ಲಯ ತಪ್ಪಿ ಏನೋ ಆಗಿದ್ದರೆ ಅಜ್ಜ ಬೀದಿಯ ಹೆಣ ಮಾತ್ರ ಆಗುತ್ತಿದ್ದ, ಯಾರಿಗೂ ಬೇಕಾಗುತ್ತ ಇರಲಿಲ್ಲ. ಕೊನೆಗೆ ಅಜ್ಜನ ಶವ ಯಾತ್ರೆಗೆ ಊರಿಗೆ ಸೇರಿ ಹೋಗಿತ್ತು.
ಸಾರಾಂಶ ಇಷ್ಟೇ ನಮ್ಮ ಮಾತೇ ನಮ್ಮ ಜೀವನವನ್ನು ಶುದ್ಧ ಮತ್ತು ಕಲುಷಿತ ಮಾಡಿ ಬಿಡುತ್ತದೆ. ಒಬ್ಬ ಮಹಾತ್ಮರು ಹೇಳುತ್ತಾರೆ “ನಿಮ್ಮ ಮಾತು ಮೌನಕ್ಕಿಂತ ಸುಂದವಾಗಿ ಇದ್ದರೆ ಮಾತ್ರ ಮಾತನಾಡಿ”. ಅನೇಕ ಶರಣರು ಬಾಯಲ್ಲಿ ಚಿಕ್ಕ ಚಿಕ್ಕ ಕಲ್ಲು ಹಾಕಿಕೊಳ್ಳುತ್ತಾ ಇದ್ದರು ಮಾತು ಅಡಬಾರದೆಂದು. ನಾವು ಅಜ್ಜನಂತೆ ಮೂಕರಾದರೆ ಬಲು ಬೆಲೆ ಉಳಿಯುತ್ತದೆ. ಮಾತಾಡೋಣ ಮಾತು ಬಂಗಾರವಾದಾಗ ಮಾತ್ರ.

  • ಖಾದರ್ ಎಂ . ಕೆ, ಯುವಕವಿ, ಕತೆಗಾರ, ಬಳ್ಳಾರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading