ಬೆಳೆಯುವ ಮಕ್ಕಳಲ್ಲಿ ಭಯ ಹುಟ್ಟದಂತೆ ಕಾಪಾಡಿಕೊಳ್ಳಿ. ಸಣ್ಣ ಸಮಸ್ಯೆ ಮುಂದೆ ದೊಡ್ಡದಾಗಬಹುದು ಎಚ್ಚರ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ತಪ್ಪದೆ ಮುಂದೆ ಓದಿ…
ಹೀಗೆ ಮತ್ತೊಂದು ಘಟನೆ ನಿಮ್ಮ ಮುಂದೆ ಇಡುತ್ತೇನೆ. ಇಲ್ಲೂ ಸಹ ಒಂದು ಹೆಣ್ಣು ಮಗುವಿನ ಸುತ್ತ ಇರುವ ಸಮಸ್ಯೆ. ನಮ್ಮಲ್ಲಿಗೆ ಗಂಡ- ಹೆಂಡತಿ, ಒಂದು ಹೆಣ್ಣು ಮಗುವಿನ ಜೊತೆ ಬಂದು ತಮ್ಮ ಸಮಸ್ಯೆ ಹೇಳತೊಡಗಿದರು. ನಾವು ಮಗುವನ್ನು ಹೊರಗೆ ಕರೆದುಕೊಂಡು ಯಾರಾದರೂ ಒಬ್ಬರು ನಿಮ್ಮಲ್ಲೇ ತೀರ್ಮಾನ ಮಾಡಿಕೊಂಡು ಹೋಗಿ ಎಂದಾಗ ಅದರ ತಂದೆ ಕರೆದುಕೊಂಡು ಹೊರ ಹೋದರು.
ತಾಯಿ ಹೇಳತೊಡಗಿದಳು, ಅಕ್ಕ ಪಕ್ಕದ ಮನೆ, ಇವರ ಮಗಳು ಆರು ವರ್ಷದ ಹುಡುಗಿ, ಪಕ್ಕದ ಮನೆಯಲ್ಲಿ ನಾಲ್ಕು ವರ್ಷದ ಹುಡುಗಿ. ಇಬ್ಬರೂ ದಿನ ಜೊತೆಯಾಗಿ ಆಡುತ್ತಿದ್ದರು. ಶಾಲೆಯಿಂದ ಬಂದ ಕೂಡಲೆ ಇಬ್ಬರೂ ಬಹಳ ಹೊತ್ತು ಆಟವಾಡಿಕೊಂಡು ಮನೆಗೆ ಹಿಂತಿರುಗುತಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಇವರ ಮಗಳು ಮಂಕಾಗಿ ಕುಳಿತು ಬಿಟ್ಟು ಆಡಲಿಕ್ಕೆ ಹೊರ ಹೋಗಲಿಲ್ಲ. ತಾಯಿ ಕೇಳಿದಾಗ ನನಗೆ ಆಡಲು ಮನಸಿಲ್ಲ ಎಂದು ಹೇಳಿ ಸುಮ್ಮನೆ ಕುಳಿತು ಬಿಟ್ಟಳು. ತಾಯಿ ಇರಬಹುದೆಂದು ಸುಮ್ಮನಾದಳು. ಆದರೆ ದಿನ ದಿನ ಅವಳ ಮಂಕುತನ ಕಂಡು ತಾಯಿ ಕೇಳಿದಾಗ ಏನೂ ಉತ್ತರ ಬಾರದೆ ಬರೀ ಅಳುವ ಕಂಡು ತಾಯಿಗೆ ಹೆದರಿಕೆ ಆಗಿ ತನ್ನ ಗಂಡನ ಬಳಿ ಹೇಳಿದಾಗ ಅವರೂ ಮಗುವಿಗೆ ಸಮಾಧಾನದ ರೀತಿ ಕೇಳುವಾಗ ಅವಾಗಲೂ ಉತ್ತರವಿಲ್ಲದಿರುವುದು ಕಂಡ ನಮ್ಮಲ್ಲಿಗೆ ಬಂದು ಹೇಳಿದರು.

ಫೋಟೋ ಕೃಪೆ :google
ನಾವು ಮಗುವನ್ನು ಹತ್ತಿರ ಕರೆದು ಗಂಡ ಹೆಂಡತಿ ಇಬ್ಬರನ್ನೂ ಹೊರಗೆ ಕಳಿಸಿದೆವು. ಮಗುವಿಗೆ ಭಯ ಪಡಿಸದಂತೆ ನಿಧಾನವಾಗಿ ಮಾತನಾಡುತ್ತಾ ನಿನ್ನ ಗೆಳಯರೆಲ್ಲರ ಹೆಸರು ಹೇಳು ಎಂದಾಗ ಎಲ್ಲರ ಹೆಸರು ಹೇಳಿದಳು. ಪಕ್ಕದ ಮನೆಯ ಸ್ನೇಹಿತೆಯ ಹೆಸರು ಕೇಳಿದಾಗ, ಅವಳು ತುಂಬಾ ಬ್ಯಾಡ್ ನಂಗೆ ಅವಳು ಇಷ್ಟವಿಲ್ಲ ಎಂದು ಹೇಳಿದಳು.
ನಾನು ಇವಳಿಗೇ ಹೌದು ನೀ ತುಂಬಾ ಜಾಣೆ, ಏಕೆ… ಅವಳ ಕಂಡರೆ ಆಗಲ್ಲವೆಂದು ಕೇಳಿದಾಗ, ಆ ಮಗು ನಾನು ಅವಳು ತುಂಬಾ ಬೆಸ್ಟ್ ಫ್ರೆಂಡ್ಸ್. ಒಂದು ದಿನ ಕ್ಲಾಸಲ್ಲಿ ಮಾತಾನಾಡುತ್ತಿದ್ದೆ ಎಂದು ನನ್ನ ಮ್ಯಾಮ್ ಹೊಡೆದು ಮತ್ತೊಮ್ಮೆ ಮಾತನಾಡಬಾರದೆಂದು ನಿಲ್ಲಿಸಿ ಪನಿಶ್ಮೆಂಟ್ ಕೊಟ್ಟಿದ್ದರು ಎಂದು ಹೇಳಿದ್ದಳು. ಪಕ್ಕದ ಮನೆಯ ಹುಡುಗಿ ಒಮ್ಮೆ ಇವಳ ಆಟ ಸಾಮಾನು ಕಳೆದು ಹಾಕಿದಳು, ನನಗೆ ಬೇಕು ಕೊಡು ಎಂದಾಗ ಪಕ್ಕದ ಮನೆಯ ಹುಡುಗಿ ತನಗೆ ಗೊತ್ತಿಲ್ಲವೆಂದು ಹೇಳಿದಾಗ, ಇವಳು ಕೊಡದಿದ್ದರೆ ಅಮ್ಮನಿಗೆ ಹೇಳುತ್ತೇನೆ ಎಂದಳು ಅಳುತ್ತಾ ನೀನು ಸ್ಕೂಲಲ್ಲಿ ಮ್ಯಾಮ್ ಹತ್ತಿರ ಹೊಡೆಸಿಕೊಂಡಿದ್ದು ನಿಮ್ಮ ಅಮ್ಮನಿಗೆ ಹೇಳುತ್ತೇನೆ ಎಂದು ಪಕ್ಕದಮನೆಯ ಹುಡುಗಿ ಹೇಳಿದಾಗ, ಭಯಪಟ್ಟ ಆ ಹುಡುಗಿ ಅಂದಿನಿಂದ ಅವಳ ಮನೆಗೆ ಹೋಗದೆ ಇದ್ದದ್ದು ಈ ಸಮಸ್ಯೆಗೆ ಕಾರಣವಾಯಿತು.
ನಮಗೆ ಈ ಸಮಸ್ಯೆ ಚಿಕ್ಕದಾಗಿ ಕಂಡರೂ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಈ ವಯಸ್ಸಿನಲ್ಲಿ ಭಯವಾಗಲಿ, ಆತಂಕವಾಗಲಿ ಮನಸಿಗೆ ಹಚ್ಚಿಕೊಂಡರೆ ಮುಂದಿನ ಜೀವನ ಬಹಳ ಕಠಿಣವೆನಿಸುತ್ತದೆ. ಅದನ್ನು ಅರಿತು ಪೋಷಕರು ಮಕ್ಕಳಿಗೆ ಬೆಂಬಲವಾಗಿ ನಿಂತು ಅವರ ಸಮಸ್ಯೆ ಬಗೆಹರಿಸಿದರೆ ಮಕ್ಕಳಿಗೆ ಅಭದ್ರತೆಯ ಭಾವನೆ ಇರುವುದಿಲ್ಲ ಹಾಗು ಮುಕ್ತವಾಗಿ ಪೋಷಕರ ಜೊತೆ ಹಾಗು ಒಡಹುಟ್ಟಿದವರ ಜೊತೆ ಮಾತನಾಡಲು ಪ್ರಯತ್ನಿಸುತ್ತಾರೆ.
ಒಬ್ಬಳೇ ಮಗಳಾದ ಕಾರಣ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇರಲಿಲ್ಲ. ಇದ್ದರೂ ಆ ಮಗುವಿಗೆ ಯಾರೂ ಆಪ್ತರೆನಿಸಲಿಲ್ಲ. ನಂಬಿಕೆ ಇಡುವಂತಹ ಯಾರ ಸ್ನೇಹವೂ ಆ ಮಗುವಿಗೆ ದೊರಕಲಿಲ್ಲ.

ಫೋಟೋ ಕೃಪೆ :google
ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಬಳಿ ಹಂಚಿಕೊಳ್ಳಲು ಪೋಷಕರು ಮಕ್ಕಳಿಗೆ ಭರವಸೆ ನೀಡಬೇಕು. ಏನೇ ಆಗಲಿ, ಯಾವುದೇ ಸಂದರ್ಭವಾಗಲೀ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂಬ ಭರವಸೆಯ ಮಾತುಗಳು ಮಕ್ಕಳಿಗೆ ಧೈರ್ಯ ಕೊಡುತ್ತದೆ. ಈ ಪ್ರೀತಿಯ ಕೊರತೆ ನೀಗಿಸಿಕೊಳ್ಳಲು ಹೊರಗೆ ಹೋಗುವ ಸಂಭವ ಕಡಿಮೆ ಇರುತ್ತದೆ. ಶಾಲೆಯಲ್ಲಿ ಯಾವುದೇ ಘಟನೆಗಳು ಘಟಿಸಿದರೂ ತಂದೆ ತಾಯಿಯ ಬಳಿ ಹಂಚಿಕೊಳ್ಳಬೇಕು ಎಂದು ಪ್ರೀತಿಯಿಂದ ಹೇಳಬೇಕು.
ಬೆಳೆಯುವ ಮಕ್ಕಳಿಗೆ ಪ್ರೀತಿಯ ಅವಶ್ಯಕತೆ ಬಹಳ ಇರುತ್ತದೆ. ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಭಯ ಕಾಡದಂತೆ ಮಕ್ಕಳಿಗೆ ಧೈರ್ಯ ತುಂಬಬೇಕು. ಹಾಗೆಂದು ಬಹಳ ಸಲಿಗೆಯೂ ಒಳ್ಳೆಯದಲ್ಲ. ಮಕ್ಕಳು ಅದನ್ನೂ ಸಹ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಅವರಿಗೆ ಅರಿವು ಮೂಡಿಸಬೇಕು. ಆದಷ್ಟು ಅವರಿಗೆ ಶಾಲೆ, ಓದು ಹೊರೆ ಅಲ್ಲ ಅದು ನಮಗೆ ಜೀವನ ರೂಪಿಸಿಕೊಡುತ್ತದೆ ಎಂದು ಹೇಳಬೇಕು.
ಇನ್ನೂ ಬಹಳ ಮುಖ್ಯವಾದ ಮಾತೆಂದರೆ ಪ್ರತಿ ಮಕ್ಕಳೂ ವಿಭಿನ್ನ, ಪಾಠದಲ್ಲಿ ಆಗಲಿ ಆಟದಲ್ಲಿ ಆಗಲಿ ಮೊದಲಿಗರಾಗಲು ಎಲ್ಲರಿಂದಲೂ ಸಾಧ್ಯವಿಲ್ಲ. ಈ ಮಾತನ್ನು ಅವರಿಗೆ ತಿಳಿಸಿ, ನಿಮ್ಮ ಪ್ರಯತ್ನ ಮಾಡಬೇಕು. ಕಡಿಮೆ ಅಂಕಗಳತ್ತ ಗಮನ ಕೊಡದೆ ಯಾವ ವಿಷಯ ಕಠಿಣವೆನಿಸುತ್ತದೆ ಎಂದು ಪೋಷಕರು ಅರಿತು ಅವರಿಗೆ ಸಹಾಯ ಮಾಡಿ ಧೈರ್ಯ ಹೇಳಬೇಕಾಗುತ್ತದೆ.
ಪೋಷಕರು ಮಕ್ಕಳಿಗೆ ಅಡಿಪಾಯ. ಅವರ ಜೊತೆಯಲ್ಲಿ ಸಾಗುತ ಪ್ರೀತಿ, ಭರವಸೆ ನೀಡುತ್ತಾ ಅವರಿಗೆ ಮಾರ್ಗದರ್ಶನ ನೀಡುತ್ತಾ ಸಾಗಬೇಕು.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
