ಭೂ ತಾಯಿ

ಭೂತಾಯಿ ತನ್ನ ಒಳ ಗರ್ಭದಲ್ಲಿ ಕುದಿಯುವ ಬೆಂಕಿ (ಲಾವಾ)ಯನ್ನು ಇಟ್ಟುಕೊಂಡರೂ, ಮೇಲ್ಮೈಗೆ ಉಗುಳಿ ನಮ್ಮನ್ನು ಎಂದು ನಾಶಪಡಿಸಲಿಲ್ಲ, ಮೂರು ಭಾಗ ನೀರು ಉಪ್ಪಾದರೂ ಮನುಷ್ಯನಿಗೆ ಮಾತ್ರ ಸಿಹಿ ನೀರಿನ ಒರತೆಯನ್ನು ಕೊಡುವಳು ಭೂತಾಯಿ. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಲೇಖನವನ್ನು ತಪ್ಪದೆ ಮುಂದೆ ಓದಿ…

ಹೆತ್ತವಳು ಒಂಬತ್ತು ತಿಂಗಳು ಹೊತ್ತರೆ, ಹೊತ್ತವಳು ನಾವು ಹುಟ್ಟಿ ಮರಳಿ ಭೂಮಿಯನ್ನು ಸೇರುವವರೆಗೆ ನಮ್ಮನ್ನು ಹೊತ್ತು ನಿಲ್ಲುತ್ತಾಳೆ. ಪ್ರತಿಕ್ಷಣ ಪ್ರತಿದಿನ ನಮ್ಮನ್ನು ಅವಳು ಪೊರೆಯುವ ರೀತಿಯೇ ಅದಮ್ಯ, ಅಮೋಘ.

ನಾವು ಅವಳನ್ನು ತುಳಿದರೂ ಸರಿ, ಬಗೆದರೂ ಸರಿ, ಮಾಲಿನ್ಯಗೊಳಿಸಿದರೂ ಸರಿ, ಅವಳ ತಾಳ್ಮೆಯಲ್ಲಿ ಸ್ವಲ್ಪವೂ ಬದಲಾಗಿಲ್ಲ.

● ಇವಳು ಸುಮಾರು 4.54 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾದಳು.

● ಸೂರ್ಯನಿಂದ ಮೂರನೆಯ ಗ್ರಹವಾಗಿ ಅಂಡಾಕಾರದ ಕಕ್ಷೆಯಲ್ಲಿ ಸೂರ್ಯನನ್ನು ಪ್ರದಕ್ಷಿಣೆ ಹಾಕುತ್ತಾಳೆ.

● ಪ್ರತಿದಿನ ಈ ಭೂಮಿಯು ಪಶ್ಚಿಮದಿಂದ ಪೂರ್ವದಿಕ್ಕಿನಲ್ಲಿ ಸುತ್ತುತ್ತಾ ಒಂದು ಸುತ್ತು ತನ್ನ ಅಕ್ಷ ರೇಖೆಯ (axis) ಸುತ್ತ ಸುತ್ತಲು 23 ಗಂಟೆ, 56 ನಿಮಿಷ, 4.09 ಸೆಕೆಂಡ್ಸ್ ತೆಗೆದುಕೊಳ್ಳುತ್ತಾಳೆ.

● ಮೇಲ್ಮೈಯ ಮೂರು ಭಾಗ ನೀರಿನಿಂದ ಆವೃತವಾದರೂ ಉಳಿದ ಒಂದು ಭಾಗವನ್ನು ಅವಳೆಂದು ಮುಳುಗಿಸಲಿಲ್ಲ.

● ಆ ಮೇಲ್ಮೈಯ ಮೂರು ಭಾಗ ನೀರು ಉಪ್ಪಾದರೂ ಮನುಷ್ಯನಿಗೆ ಮಾತ್ರ ಸಿಹಿ ನೀರಿನ ಒರತೆಯನ್ನು ಕೊಡುವುದು ಅವಳು ಮರೆತಿಲ್ಲ.

● ತನ್ನ ಒಳ ಗರ್ಭದಲ್ಲಿ ಕುದಿಯುವ ಬೆಂಕಿ (ಲಾವಾ)ಯನ್ನು ಇಟ್ಟುಕೊಂಡರೂ, ಮೇಲ್ಮೈಗೆ ಉಗುಳಿ ನಮ್ಮನ್ನು ಎಂದು ನಾಶಪಡಿಸಲಿಲ್ಲ. ಒಳ ಬೇಗೆ ಹೆಚ್ಚಾದಾಗ ಅಲ್ಲಲ್ಲಿ ಮನುಷ್ಯನಿಲ್ಲದ ಕಡೆ ಜ್ವಾಲಾಮುಖಿಯಾಗಿ ಹೊರಹೊಮ್ಮಿ ಶಾಂತಳಾಗುತ್ತಾಳೆ.

● ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳನ್ನು ರಕ್ಷಿಸಲು ವಾತಾವರಣವೆಂಬ ಅನಿಲಗಳ ಮಿಶ್ರಣದ ಹೊದಿಕೆಯನ್ನು ತನ್ನ ಗುರುತ್ವಾಕರ್ಷಣೆಯ ಬಲದಿಂದ ಹಿಡಿದಿಟ್ಟಿದ್ದಾಳೆ. ಹಾಗಾದರೆ ಈ ಭೂಮಿಯ ಮೇಲಿನ ವಾತಾವರಣದ ಕೆಲವು ವಿಚಿತ್ರ ವೈಶಿಷ್ಟ್ಯಗಳನ್ನು ನಾವು ಇಲ್ಲಿ ನೋಡೋಣ.

● ಭೂಮಿಯ ಮೇಲಿನ ಈ ವಾತಾವರಣ ಮುಖ್ಯವಾಗಿ ಐದು ಪದರುಗಳಿಂದ ಕೆಳಕಂಡಂತೆ ಮಾಡಲ್ಪಟ್ಟಿದೆ.

ಫೋಟೋ ಕೃಪೆ : google 

 

1) ಟ್ರೋಪೊಸ್ಫೀಯರ್ :

ಭೂಮಿಯ ಮೇಲ್ಮೈಯಿಂದ ಸುಮಾರು 12 ಕಿಲೋ ಮೀಟರ್ ಗಳವರೆಗೆ ವಿಸ್ತರಿಸಿದ್ದು. ಮನುಷ್ಯ ಮತ್ತು ಇತರ ಜೀವ ಜಂತುಗಳು ಬದುಕುವ ಪದರವೇ ಇದು. ಇಲ್ಲಿಯೇ ನೀರು ಆವಿಯಾಗಿ ಮೋಡವಾಗಿ ಮಳೆಗರೆಯುವುದು.

2) ಸ್ಟ್ರೆಟೊಸ್ಫೀಯರ್ :

ಭೂಮಿಯ ಮೇಲ್ಮೈಯಿಂದ ಸುಮಾರು 50 ರಿಂದ 70 ಕಿಲೋಮೀಟರ್ ಎತ್ತರದಲ್ಲಿದ್ದು, ಇಲ್ಲಿಯೇ “ಓಝೋನ್” ಪರದೆ ಇರುವುದು. ಈ ಪದರದಲ್ಲಿಯೇ ವಿಮಾನಗಳು ಓಡಾಡುತ್ತವೆ.

3) ಮೀಸೋಸ್ಫೀಯರ್ :

ಇದು 50 ರಿಂದ 80 ಕಿಲೋಮೀಟರ್ ಅಂತರದಲ್ಲಿ ಈ ಪದರವಿದ್ದು, ಇದು ಅತೀ ತಂಪಾದ ಪದರ. (Coldest atmospheric layer). ಇಲ್ಲಿ ತಾಪಮಾನ -90॰C ವರೆಗೆ ಇರುತ್ತದೆ. ರಾಕೆಟ್ ಗಳು ಈ ಪರದೆಯವರೆಗೆ ಬರುತ್ತವೆ.

4) ಥರ್ಮೊಸ್ಫೀಯರ್ ಅಥವಾ ಐಯನೋಸ್ಫೀಯರ್ :

ಸುಮಾರು 400 ಕಿಲೋ ಮೀಟರ ಮೇಲೆ ಈ ಪರದೆ ಇದ್ದು, ಈ ಪರದೆಯ ಮಧ್ಯ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station) ವಿದೆ. ಇಲ್ಲಿ ಬಾಹ್ಯಾಕಾಶ ನೌಕೆಗಳು ಭೂಮಿಯನ್ನು ಸುತ್ತುತ್ತವೆ. ಇಲ್ಲಿ. ಇಲ್ಲಿ ಗರಿಷ್ಠ 2500॰C ನಷ್ಟು ತಾಪಮಾನವಿರುವ ಸಾಧ್ಯತೆ ಇದೆ.

ಇಲ್ಲಿಯ ತಾಪಮಾನದಲ್ಲಿ ವಾತಾವರಣದ ಕಣಗಳು “ಅಯಾನು”ಗಳಾಗಿ ಮಾರ್ಪಾಡಾಗುತ್ತವೆ. ಈ ಅಯಾನುಗಳ ಪರದೆಯು “ರೇಡಿಯೋ ತರಂಗ”ಗಳನ್ನು ವಕ್ರೀಭವನಗೊಳಿಸಿ ಯಾವದೇ ಮೂಲೆಗೂ ತಲುಪುವಂತೆ ಮಾಡಬಲ್ಲವು.

5) ಎಕ್ಷೊಸ್ಫೀಯರ್ :

ಇದು ಥರ್ಮೊಸ್ಫೀಯರ್ ಮೇಲೆ ಇರುವ ವಾತಾವರಣದ ಕೊನೆಯ ಪದರ ಇದಾಗಿದ್ದು, ಇದರಾಚೆಗೆ ನಿರ್ವಾತ (vacuum) ಪ್ರಾರಂಭವಾಗುತ್ತದೆ. ಇಲ್ಲಿ ವಾತಾವರಣದ ಅನಿಲಗಳು ಅಣುಗಳ ರೂಪದಲ್ಲಿ ಇರುತ್ತವೆ.

ಹೀಗೆ ಈ ಭೂಮಿ ಸೋಜಿಗವಲ್ಲವೆ? ಇಂತಹ ಮಾರ್ಪಾಡುಗಳ ಮೂಲಕ ಜೀವಿಗಳ ಬದುಕಿಗೆ ಆಸರೆಯಾದ ಭೂಮಿಯನ್ನು “ಭೂತಾಯಿ” ಎನ್ನುವುದು ಸಮಂಜಸವೆ ಆಗಿದೆ. ಇಂತಹ ಭೂಮಾತೆಯನ್ನು ಮಲಿನಗೊಳಿಸದೆ ಮನುಷ್ಯ ಗೌರವಯುತವಾಗಿ ಬದುಕುವುದು ಕನಸಿನ ಮಾತು.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW