ಡಿಪ್ರೆಶನ್ ಗೆ ಒಳಗಾದವರಿಗೆ ಸಾಮಾನ್ಯವಾಗಿ ದೀರ್ಘ ಕಾಲದ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಡಿಪ್ರೆಶನ್ ಒಳಗಾದವರು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಸಂಬಂಧಗಳಲ್ಲಿ ಬಿರುಕು’ ತಪ್ಪದೆ ಮುಂದೆ ಓದಿ…
ಶ್ರೀಧರ ಕೆಲಸ ಮಾಡುತ್ತಿದ್ದ ಕಂಪನಿ ನಷ್ಟಕ್ಕೊಳಗಾದ ಕಾರಣ ಅಲ್ಲಿನ ಹಲವಾರು ಕೆಲಸದವರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಬೇರೆ ಯಾವ ರೀತಿಯ ಆದಾಯವೂ ಅವನಿಗಿರಲಿಲ್ಲ. ಅಲ್ಲದೇ ಬೇರೆ ಯಾವ ಕೆಲಸವೂ ಗೊತ್ತಿಲ್ಲದಿರುವ ಕಾರಣ ಎಷ್ಟು ಪ್ರಯತ್ನಿಸಿದರೂ ಅದೇ ತರಹದ ಕೆಲಸ ಮತ್ತೆ ಸಿಗಲಿಲ್ಲ. ಕೆಲಸ ಇಲ್ಲವೆಂದು ಯಾರ ಬಳಿಯಾದರೂ ಹೇಳಿಕೊಂಡರೆ ಸಹಾಯವಾಗುತ್ತಿತ್ತೋ, ಏನೋ. ಆದರೆ ಅವನ ಯೋಚನಾ ಲಹರಿಯೇ ಬೇರೆ ಇತ್ತು. ಏನೆಂದರೆ, ದುಡಿಮೆಯಿಲ್ಲವೆಂದರೆ ಕೀಳಾಗಿ ಕಾಣುತ್ತಾರೆ. ಎಲ್ಲಿ ದುಡ್ಡು ಕೇಳುತ್ತೇವೋ ಎಂದು ನಮ್ಮಿಂದ ದೂರ ಸರಿಯುತ್ತಾರೆ. ಈಗ ನೀಡುತ್ತಿರುವ ಗೌರವ, ಮರ್ಯಾದೆ ಯಾವುದೂ ಸಿಗುವುದಿಲ್ಲ ಎಂದು ಅವನಿಗವನೇ ಅಂದುಕೊಂಡುಬಿಟ್ಟ. ಇದಕ್ಕೆ ಅವನ ಸುತ್ತಮುತ್ತಲಿನ ವಾತಾವರಣದ ಪ್ರಭಾವವೂ ಇರಬಹುದೇನೋ. ಒಟ್ಟಿನಲ್ಲಿ ಅಚಾನಕ್ಕಾಗಿ ಹೋದ ಕೆಲಸ ಅವನನ್ನು ಡಿಪ್ರೆಶನ್ ಗೆ ಕೊಂಡೊಯ್ದಿತ್ತು. ಪರಿಣಾಮ ಆತ್ಮಹತ್ಯೆ.
ದೇಹದ ಆರೋಗ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಮನಸ್ಸಿನ ಆರೋಗ್ಯಕ್ಕೂ ನೀಡಬೇಕಾಗುತ್ತದೆ. ಡಿಪ್ರೆಶನ್ ಗೆ ಹೋಗಿದ್ದೇವೆ ಎಂಬ ಭಾವನೆ ಆಳವಾಗಿ ಬಂದಲ್ಲಿ, ಸಮಾಜ ಏನನ್ನುತ್ತದೆಯೋ, ಜನ ಯಾವ ರೀತಿ ನನ್ನನ್ನು ನೋಡುತ್ತಾರೋ ಎಂಬ ಹಿಂಜರಿಕೆಯಿಲ್ಲದೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ, ನಾನು ಚೆನ್ನಾಗಿದ್ದರಷ್ಟೇ ಪ್ರಪಂಚ. ನಾಲ್ಕು ದಿನ ನಾವು ಮರೆಯಾದರೆ ಐದನೇ ದಿನ ಜಗತ್ತೇ ನಮ್ಮನ್ನು ಮರೆತಿರುತ್ತದೆ.

ಫೋಟೋ ಕೃಪೆ : ಅಂತರ್ಜಾಲ
ಮನಸ್ಸಿನ ಅಸ್ವಸ್ಥತೆ (Mood disorder)
ಇದು ತುಂಬಾ ಆಳವಾದ ದುಃಖ ಹಾಗೂ ನಿರಾಸೆಯ ಒಂದು ಮನಸ್ಥಿತಿ. ಯಾವಾಗಲೂ ಋಣಾತ್ಮಕ ಭಾವನೆ, ಚಿಂತನೆ. ಅವರ ಬಗ್ಗೆ ಅವರಿಗೇ ನಂಬಿಕೆಯಿಲ್ಲದಿರುವುದು. ಮಾನಸಿಕವಾಗಿ ತುಂಬಾ ಕಿರಿಕಿರಿಯಾಗುವುದು ಮತ್ತು ಸಂತೋಷವಿಲ್ಲದಿರುವುದು, ಒಂಟಿತನ ಕಾಡುವುದು, ಇತ್ಯಾದಿ. ಮಾನಸಿಕ ರೋಗಗಳು, ಜ್ವರ ಇತ್ಯಾದಿ ದೈಹಿಕ ಕಾಯಿಲೆಗಳಂತೆ ಒಮ್ಮೆಲೇ ಕಾಣಿಸಿಕೊಳ್ಳುವುದಿಲ್ಲ. ವ್ಯಕ್ತಿಯು ಎಷ್ಟೋ ಸಮಯದಿಂದ ಅದುಮಿಟ್ಟುಕೊಂಡ ಭಾವನೆಗಳನ್ನು ಒಂದು ಸ್ಫೋಟಕ ಪರಿಸ್ಥಿತಿಯಲ್ಲಿ ( ತಡೆದು ಕೊಳ್ಳಲಾರದಂತಹ) ಹೊರಗೆ ಹಾಕಬಹುದು.
ಲಕ್ಷಣಗಳು :
- ರೋಗಿ ಮನೆಯಲ್ಲಿ ಅಥವಾ ಹೊರಜಗತ್ತಿನಲ್ಲಿ ಅಸ್ವಾಭಾವಿಕ ಚಟುವಟಿಕೆ ತೋರಿಸಬಹುದು. ಉದಾಹರಣೆಗೆ: ಖಿನ್ನತೆ, ಸಿಟ್ಟು, ಪದೇಪದೇ ಕೈ ಉಜ್ಜುವುದು, ಎಷ್ಟು ಸ್ವಚ್ಛವಾಗಿಟ್ಟಿದ್ದರೂ ಪದೇಪದೇ ಸ್ವಚ್ಛಮಾಡುವುದು(ಗೀಳು ರೋಗ), ಮರೆವು, ಇತ್ಯಾದಿ.
- ಏನನ್ನೂ ತಿನ್ನಬೇಕು ಅನ್ನಿಸದೇ ಇರಬಹುದು.
- ರಾತ್ರಿ ವೇಳೆ ನಿದ್ದೆ ಬಾರದಿರುವುದು (ನಿದ್ರಾಹೀನತೆ )
- ತಾವು ಯಾವುದಕ್ಕೂ ಯೋಗ್ಯರಲ್ಲವೆಂದು ತಮ್ಮ ಬಗ್ಗೆ ತಾವೇ ಕೀಳರಿಮೆ ಹೊಂದುವುದು.
- ಅಪರಾಧೀ ಭಾವ ಕಾಡುವುದು.
- ಉತ್ಸಾಹ, ಆಸಕ್ತಿ ಇಲ್ಲದಿರುವುದು, ಸಾಯುವ ಯೋಚನೆ ಕಾಡುವುದು, ಇತ್ಯಾದಿ.
ಇಲ್ಲಿ ಇನ್ನೊಂದು ಮುಖ್ಯ ವಿಷಯ ಹೇಳಲು ಬಯಸುತ್ತೇನೆ. ಮೇಲೆ ತಿಳಿಸಿದ ಡಿಪ್ರೆಶನ್ ಗೆ ಕಾರಣವಾಗುವ ಅಂಶಗಳಲ್ಲಿ ಏನಾದರೂ ಅನಿಸಿದರೆ ತಕ್ಷಣ ಅದನ್ನು ಖಂಡಿತಾ ಡಿಪ್ರೆಶನ್ ಅಂದುಕೊಳ್ಳಬಾರದು. ಏಕೆಂದರೆ, ಎಷ್ಟೋ ಬಾರಿ ಊಟ ಸೇರದೇ ಇರಬಹುದು, ನಿದ್ದೆ ಬಾರದೇ ಇರಬಹುದು. ಅದಕ್ಕೆ ದೇಹದ ಆರೋಗ್ಯ, ಗ್ಯಾಸ್ಟಿಕ್ ಸಮಸ್ಯೆ, ಸ್ಥಳದ ಬದಲಾವಣೆ, ಒಂದೇ ತರಹದ ಆಹಾರ ಸೇವಿಸಿ ನಾಲಿಗೆ ರುಚಿ ಕೆಟ್ಟಿರಬಹುದು, ಪ್ರಯಾಣದ ಆಯಾಸ, ಬೇಸರ, ಯಾವುದೋ ಯೋಚನೆ, ಆರ್ಥಿಕ ಸಮಸ್ಯೆ ಇನ್ನು ಮುಂತಾದ ತಾತ್ಕಾಲಿಕ ಕಾರಣಗಳೂ ಇರಬಹುದು. ಒಂಟಿತನ ಅಥವಾ ಏಕಾಂಗಿತನ ಅನ್ನೋದು ಸಹ ಪ್ರತಿಯೊಬ್ಬರಿಗೂ ಕೆಲವೊಮ್ಮೆ(ತಮಗೆ ತಾವೇ ಸ್ಪೇಸ್ ಕೊಟ್ಟುಕೊಳ್ಳಬೇಕು ಅನ್ನಿಸುವುದು)ಬೇಕೆನಿಸುವ ಸಹಜ ಭಾವನೆ. ಹಾಗಾಗಿ ತಕ್ಷಣ ಯಾವುದೇ ತೀರ್ಮಾನಕ್ಕೆ ಬರಬಾರದು.

ಫೋಟೋ ಕೃಪೆ : ಅಂತರ್ಜಾಲ
ಕಾರಣಗಳು :
ಒತ್ತಡದ ಜೀವನ, ನಡೆದ ಲೈಂಗಿಕ ಕಿರುಕುಳ, ವಿದ್ಯೆಗೆ ತಕ್ಕಂತೆ ಸಿಗದ ಕೆಲಸ, ಭಗ್ನ ಪ್ರೇಮ, ಅಪಘಾತಗಳಿಂದ ಸಂಭವಿಸಿದ ಸರಿಪಡಿಸಲಾಗದಂತಹ ದೈಹಿಕ ನ್ಯೂನ್ಯತೆ, ಪದೇ ಪದೇ ಉಂಟಾಗುವ ಸೋಲು, ಹತಾಶೆ, ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಹಾರ್ಮೋನ್ಸ್ ನಿಂದ ಉಂಟಾಗುವ ಒತ್ತಡ, ಕಣ್ಣ ಮುಂದೆಯೇ ನಡೆದ ದುರ್ಘಟನೆ, ಆಪ್ತರ ಸಾವು, ಇದ್ದ ಕೆಲಸ ಕಳೆದುಕೊಂಡ ಸಂದರ್ಭ, ಇತ್ಯಾದಿ.
ವಿಧಗಳು :
- ಬಾಣಂತಿ ಸನ್ನಿ : ಹಾರ್ಮೋನ್ಸ್ ಬದಲಾವಣೆ ಮತ್ತು ದೈಹಿಕ ಬದಲಾವಣೆ, ಮೊದಲಿಗಿಂತ ಜವಾಬ್ದಾರಿ ಹೆಚ್ಚುವುದರಿಂದ ಇದು ಕೆಲವರಲ್ಲಿ ಕಂಡುಬರುತ್ತದೆ.
- ಅನುವಂಶೀಯ ಮನೋರೋಗಗಳು: ಉದಾಹರಣೆಗೆ, ಸ್ಕಿಜೋಫ್ರೇನಿಯಾ, (schizophrenia) ದ್ವಂದ್ವ ವ್ಯಕ್ತಿತ್ವ, ಗೀಳು ರೋಗ ಇತ್ಯಾದಿ.
- ಕೆಲವೊಂದು ದೈಹಿಕ ರೋಗಗಳು: ಉದಾಹರಣೆಗೆ ಮೆದುಳಿನಲ್ಲಿ ಬೆಳೆದ ಗೆಡ್ಡೆ.
- ಸಾಮಾಜಿಕ ತುಳಿತ, ಅವಮಾನ, ಆರ್ಥಿಕ ಸಮಸ್ಯೆಗಳು, ಬಾಹ್ಯ ಪರಿಸರ.
ಈ ಎಲ್ಲಾ ಅಂಶಗಳು ವ್ಯಕ್ತಿಯನ್ನು ಮನೋರೋಗಿಯನ್ನಾಗಿ ಪರಿವರ್ತಿಸಬಹುದು. ಇನ್ನು ವೃದ್ಧರಲ್ಲಿ ಕಾಣಿಸಿಕೊಳ್ಳುವ ಮರೆವು(Alzheimer’s disease)ಕಾಯಿಲೆಗಳು ಮೆದುಳಿನ ಸವೆತ ಇತ್ಯಾದಿಗಳಿಂದ ಬರಬಹುದು.

ಫೋಟೋ ಕೃಪೆ : ಅಂತರ್ಜಾಲ
ಪರಿಹಾರ :
- ಸ್ನೇಹಿತರು, ಸಂಬಂಧಿಗಳ ಸಾಂತ್ವನದ ಮಾತುಗಳು ಇದನ್ನು ತಡೆಗಟ್ಟಬಹುದು ಹಾಗೂ ಅವರನ್ನು ಸಮಸ್ಯೆಗಳಿಂದ ಹೊರತರಬಹುದು.
- ಅವರು ನಡೆದುಕೊಳ್ಳುವ ರೀತಿ ಗಮನಿಸಿ, ಅವರು ಏನಾದರೂ ಹೆಚ್ಚು ಕಡಿಮೆ ಮಾಡಿಕೊಳ್ಳುವ ಮುಂಚೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು.
- ಆಪ್ತಸಮಾಲೋಚನೆ ಅತ್ಯಗತ್ಯ.
- ವೈದ್ಯರು ಹೇಳಿದ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು, ಇಲ್ಲಾ ಕುಟುಂಬಸ್ಥರು ಕೊಡಬೇಕು. ಎಷ್ಟು ದಿನ ಹೇಳಿರುತ್ತಾರೋ ಅಷ್ಟು ದಿನವೂ ಕೊಡಲೇಬೇಕು.
- ಆಪ್ತ ಸಮಾಲೋಚನೆ ಅಥವಾ ಮಾನಸಿಕ ಚಿಕಿತ್ಸೆ ಪಡೆದು, ಚೇತರಿಸಿಕೊಂಡು ಅದರಿಂದ ಹೊರ ಬರುತ್ತಿರುವ ವ್ಯಕ್ತಿಯನ್ನು ಹುಚ್ಚರು, ಮತಿಗೆಟ್ಟವರು ಎಂದು ಪರಿಗಣಿಸದೇ ಪ್ರೀತಿ, ವಾತ್ಸಲ್ಯದಿಂದ, ಅನುಭೂತಿಯಿಂದ ( Empathy) ನೋಡಿಕೊಳ್ಳುವುದು ಅತೀ ಅವಶ್ಯಕವಾದುದು. ಹಾಗೂ ಅವರು ಮತ್ತೆ ಅದಕ್ಕೆ ಹೋಗದಂತೆ ಅವರನ್ನು ನೋಡಿಕೊಳ್ಳುವುದೂ ಸಹ ಅಷ್ಟೇ ಮುಖ್ಯ.
- ಮನೆಯಲ್ಲಿರುವವರ ಸಹಕಾರ, ಹೊರಗಡೆ ಅವರು ಕೆಲಸ ಮಾಡುವ ಸ್ಥಳಗಳು, ವಿಧ್ಯಾರ್ಥಿಗಳಾದರೆ ಅಲ್ಲಿಯ ವಾತಾವರಣ, ಶಿಕ್ಷಕರು, ಬೇರೆ ಮಕ್ಕಳು ಎಲ್ಲರ ಪಾತ್ರವೂ ಇದರಲ್ಲಿ ಬಹಳ ಮುಖ್ಯವಾಗುತ್ತದೆ.
- ಮಾನಸಿಕ ರೋಗಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದರ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು.
- ಅವರನ್ನು ನೋಡಿಕೊಳ್ಳುವ ಸ್ವಯಂ ಸೇವಕರನ್ನು ತರಬೇತಿಗೆ ಒಳಪಡಿಸುವುದೂ ಸಹ ಅಷ್ಟೇ ಮುಖ್ಯ.
ಡಿಪ್ರೆಶನ್ ಗೆ ಒಳಗಾದವರಿಗೆ ಸಾಮಾನ್ಯವಾಗಿ ದೀರ್ಘ ಕಾಲದ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಹಲವರು ತಿಂಗಳು, ವರ್ಷಗಳ ಕಾಲದ ಚಿಕಿತ್ಸೆಯಿಂದ ಗುಣಮುಖರಾದರೆ ಇನ್ನು ಹಲವರಿಗೆ ಜೀವನ ಪರ್ಯಂತ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಮನೆಯಲ್ಲಿರುವ ಎಲ್ಲರ ಸಹಕಾರ, ಪ್ರೀತಿ, ವಿಶ್ವಾಸ, ಜೊತೆಗಿರುವೆವೆಂಬ ಭರವಸೆ ಎಲ್ಲವೂ ಇಲ್ಲಿ ತುಂಬಾ ಮುಖ್ಯ. ಜೊತೆಗಿರುವವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು, ಅವರ ಕಷ್ಟಕ್ಕೆ ಸ್ಪಂದಿಸುವುದು, ಅವರಲ್ಲಿ ಆತ್ಮವಿಶ್ವಾಸ ತುಂಬುವುದು, ಎಲ್ಲಕ್ಕಿಂತ ಹೆಚ್ಚಾಗಿ ಮೊದಲು ಅವರು ಏನಾದರೂ ಹೇಳಲು ಬಯಸಿದಾಗ ಅದನ್ನು ತಾಳ್ಮೆಯಿಂದ ಕೇಳಿಸಿಕೊಂಡು ಅದಕ್ಕೆ ಸ್ಪಂದಿಸುವುದೂ ಸಹ ಅಷ್ಟೇ ಮುಖ್ಯ. ಇದೆಲ್ಲದರ ಜೊತೆಗೆ ನಮ್ಮವರನ್ನು ನಾವು ಜೋಪಾನ ಮಾಡುವುದು ನಮ್ಮ ಕರ್ತವ್ಯವೂ ಹೌದು.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೭)
- ಅಂಗೈಯಲ್ಲಿ ಪ್ರಪಂಚ ‘ಬಾಲ್ಯ ಕಸಿಯುವ ಮುನ್ನ’’ (ಭಾಗ- ೨೮)
- ಅಂಗೈಯಲ್ಲಿ ಪ್ರಪಂಚ ‘ಆಯಮ್ಮನೆಂಬ ಅಮ್ಮ’ (ಭಾಗ- ೨೯)
- ಅಂಗೈಯಲ್ಲಿ ಪ್ರಪಂಚ (ಭಾಗ- ೩೦)
- ಅಂಗೈಯಲ್ಲಿ ಪ್ರಪಂಚ ‘ ಬಫೆ ಸಿಸ್ಟಮ್’ (ಭಾಗ- ೩೧)
- ಅಂಗೈಯಲ್ಲಿ ಪ್ರಪಂಚ ‘ ಸ್ನೇಹ ಸಂಬಂಧ’ (ಭಾಗ- ೩೨)
- ಅಂಗೈಯಲ್ಲಿ ಪ್ರಪಂಚ‘ಮಾತನಾಡುವುದೂ ಒಂದು ಕಲೆ’ (ಭಾಗ- ೩೩)
- ಅಂಗೈಯಲ್ಲಿ ಪ್ರಪಂಚ ‘ನೆರೆಹೊರೆಯ ಸಂಬಂಧ’ (ಭಾಗ- ೩೪)
- ಅಂಗೈಯಲ್ಲಿ ಪ್ರಪಂಚ ‘ಅನ್ನದಾತೋ ಸುಖೀಭವ’ (ಭಾಗ- ೩೫)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಬಿರುಕು’ (ಭಾಗ- ೩೬)
- ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.
