ಯಾರ ಬಗ್ಗೆಯೂ ಹಿಂದಿನಿಂದ ಕೆಟ್ಟದಾಗಿ ಮಾತನಾಡುವುದೂ ಬೇಡ, ಮುಂದಿನಿಂದ ಹೊಗಳುವುದೂ ಬೇಡ. ಇಷ್ಟವಾಗದಿದ್ದಲ್ಲಿ ನಮ್ಮ ಪಾಡಿಗೆ ನಾವಿರೋಣ. ಮನೆಯ ಹಿತದೃಷ್ಟಿಯನ್ನು ಕಾಯೋಣ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಮನೆಯ ಹಿತದೃಷ್ಟಿಗೆ ಹಿರಿಯರ ಒಳ್ಳೆ ನಡವಳಿಕೆ ಮುಖ್ಯ ’ ತಪ್ಪದೆ ಮುಂದೆ ಓದಿ…
ಕೆಲವು ಮನೆಗಳಲ್ಲಿ ಹಿರಿಯರು ಯಾವಾಗಲೂ ಬೇರೆಯವರ ಬಗ್ಗೆ ಮಕ್ಕಳ ಮುಂದೆಯೇ ಮಾತನಾಡುತ್ತಿರುತ್ತಾರೆ. ಸದಾ ಇನ್ನೊಬ್ಬರನ್ನು ದೂರುವುದು, ಅವರ ನಡವಳಿಕೆಯಲ್ಲಿ, ಕೆಲಸದಲ್ಲಿ ತಪ್ಪು ಕಂಡುಹಿಡಿದು ಹೇಳುವುದು, ಬೈಯ್ಯುವುದು ಈ ರೀತಿ.
ಇನ್ನು ಕೆಲವರು ಬೇರೆಯವರಲ್ಲಿ ಇಲ್ಲಸಲ್ಲದ್ದನ್ನು ಹುಡುಕೀ ಹುಡುಕೀ ಅನ್ನುವುದು ಆಡುವುದು ಮಾಡುತ್ತಾರೆ. ತಮ್ಮದೆಂದು ಬಂದಾಗ ಅದು ಎಂತಹಾ ದೊಡ್ಡ ತಪ್ಪಿದ್ದರೂ ಅದನ್ನು ಸಮರ್ಥನೆ ಮಾಡಿಕೊಳ್ಳುವುದು, ಕಾರಣಗಳನ್ನು ಕೊಡುವುದು, ತಿದ್ದಿ ಬುದ್ಧಿ ಹೇಳದೇ ಇರುವುದು.

ಗಂಡ, ಹೆಂಡತಿ, ಮಕ್ಕಳ ಮುಂದೆಯೇ ಸದಾ ಜಗಳವಾಡುವುದು. ಒಬ್ಬರ ಮನೆಯವರನ್ನು ಒಬ್ಬರು ದೂಷಿಸುವುದು. ಕೆಲವೊಮ್ಮೆ ಹೊಡೆತ, ಬಡಿತ, ಅಳು ಎಲ್ಲವೂ. ಇವೆಲ್ಲವೂ ಬೆಳೆಯುವ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಒಳ್ಳೆಯ ಶಾಲೆ-ಕಾಲೇಜು ಸೇರಿಸಿ, ಬೇಕಾಗಿದ್ದನ್ನೆಲ್ಲಾ ಕೊಡಿಸಿದರೆ ಸಾಲದು. ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣವೂ ಇರಬೇಕು. ಅವರ ಆಸೆ, ಆಕಾಂಕ್ಷೆಗಳನ್ನು ತಿಳಿದುಕೊಂಡು ಅದಕ್ಕೆ ಸ್ಪಂದಿಸಬೇಕು. ಮೊದಲು ಮನೆಯಲ್ಲಿ ಹಿರಿಯರು ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ಇಲ್ಲದಿದ್ದರೆ, ದಿನ ಬೆಳಗಾದರೆ ಅದನ್ನೇ ನೋಡುತ್ತಾ ಬೆಳೆಯುವ ಮಕ್ಕಳಿಗೂ ಅದೇ ಅಭ್ಯಾಸವಾಗುತ್ತದೆ. ಒಬ್ಬ ವ್ಯಕ್ತಿ ನಮಗೆ ಆಗುವುದಿಲ್ಲವೆನಿಸಿದಾಕ್ಷಣ ಅವರ ಬಗ್ಗೆ ಯಾವಾಗಲೂ ಕೆಟ್ಟದ್ದನ್ನೇ ಆಡುತ್ತಿದ್ದರೆ ಅದನ್ನು ಕೇಳಿದವರ ಮನಸ್ಸಿನಲ್ಲಿ ಅದೇ ಅಚ್ಚೊತ್ತಿರುತ್ತದೆ. ಆ ವ್ಯಕ್ತಿ ಎಷ್ಟೇ ಒಳ್ಳೆಯವರಾಗಿದ್ದರೂ ಅವರನ್ನು ನೋಡಿದಾಕ್ಷಣ ಮನಸ್ಸಿನಲ್ಲಿ ಉಳಿದ ಆ ಭಾವನೆಯೇ ಕಣ್ಮುಂದೆ ಬರುತ್ತದೆ.
ಇನ್ನೊಂದು ತಮಾಷೆಯ ವಿಷಯವೆಂದರೆ, ಹೀಗೆಲ್ಲಾ ಅಂದು – ಆಡಿದವರೇ ಅವರು ಎದುರಿಗೆ ಸಿಕ್ಕಾಗ ಹಾ… ಹೋ… ಎಂದುಕೊಂಡು ಹೋಗಿ ತಬ್ಬಿಕೊಳ್ಳುತ್ತಾರೆ. ಮುಖವರಳಿಸಿಕೊಂಡು ಹೊಗಳುತ್ತಾ, ಬಾಯ್ತುಂಬಾ ಮಾತನಾಡುತ್ತಾರೆ. ಆಗ ಮಕ್ಕಳಿಗೆ ಯಾವುದು ನಿಜ, ಯಾವುದು ಸುಳ್ಳು ಎಂಬ ಗೊಂದಲ ಉಂಟಾಗುತ್ತದೆ. ದೊಡ್ಡವರಾದಂತೆ ಅವರಿಗೂ ಮನೆಯಲ್ಲಿ ಹಿರಿಯರ ಈ ವರ್ತನೆ ಕಿರಿಕಿರಿ ಎನಿಸಲು ಶುರುವಾಗುತ್ತದೆ. ಆಗ ಎದುರು ಮಾತನಾಡಲು ಶುರು ಮಾಡುತ್ತಾರೆ. ಇದರಿಂದ ಮಕ್ಕಳೇ ತಮಗೆ ಗೌರವ ಕೊಡದ ಸ್ಥಿತಿಯನ್ನು ತಂದುಕೊಳ್ಳುತ್ತಾರೆ.

ಯಾರ ಬಗ್ಗೆಯೂ ಹಿಂದಿನಿಂದ ಕೆಟ್ಟದಾಗಿ ಮಾತನಾಡುವುದೂ ಬೇಡ, ಮುಂದಿನಿಂದ ಹೊಗಳುವುದೂ ಬೇಡ. ಇಷ್ಟವಾಗದಿದ್ದಲ್ಲಿ ನಮ್ಮ ಪಾಡಿಗೆ ನಾವಿರೋಣ. ಇನ್ನೊಬ್ಬರಿಗೆ ಕೆಟ್ಟ ಹೆಸರು ನೀಡಿ ಪಡೆದುಕೊಳ್ಳುವುದು ಏನೂ ಇಲ್ಲ. ದಿನ ಬೆಳಗಾದರೆ ಮಾಡಲು ಕೆಲಸವಿಲ್ಲದವರಂತೆ ಅವರಿವರ ಬಗ್ಗೆ ಮಾತನಾಡಿ ಹೊತ್ತು ಕಳೆಯುವ ಬದಲು, ದಿನನಿತ್ಯದ ಕೆಲಸಗಳಲ್ಲಿ, ಮೆಚ್ಚಿನ ಹವ್ಯಾಸಗಳಲ್ಲಿ, ಇನ್ನೂ ಹಲವಾರು ರೀತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡು ಮನೆಯ ಹಿತದೃಷ್ಟಿಯನ್ನು ಕಾಯೋಣ. ಮಕ್ಕಳ ಭವಿಷ್ಯಕ್ಕೆ ಮನೆಯಲ್ಲಿ ಒಳ್ಳೆಯ ಬುನಾದಿ ಹಾಕೋಣ.
- ಸುತ್ತ ಮುತ್ತ – ಲೇಖನಗಳ ಸಂಕಲನದಿಂದ
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೭)
- ಅಂಗೈಯಲ್ಲಿ ಪ್ರಪಂಚ ‘ಬಾಲ್ಯ ಕಸಿಯುವ ಮುನ್ನ’’ (ಭಾಗ- ೨೮)
- ಅಂಗೈಯಲ್ಲಿ ಪ್ರಪಂಚ ‘ಆಯಮ್ಮನೆಂಬ ಅಮ್ಮ’ (ಭಾಗ- ೨೯)
- ಅಂಗೈಯಲ್ಲಿ ಪ್ರಪಂಚ (ಭಾಗ- ೩೦)
- ಅಂಗೈಯಲ್ಲಿ ಪ್ರಪಂಚ ‘ ಬಫೆ ಸಿಸ್ಟಮ್’ (ಭಾಗ- ೩೧)
- ಅಂಗೈಯಲ್ಲಿ ಪ್ರಪಂಚ ‘ ಸ್ನೇಹ ಸಂಬಂಧ’ (ಭಾಗ- ೩೨)
- ಅಂಗೈಯಲ್ಲಿ ಪ್ರಪಂಚ‘ಮಾತನಾಡುವುದೂ ಒಂದು ಕಲೆ’ (ಭಾಗ- ೩೩)
- ಅಂಗೈಯಲ್ಲಿ ಪ್ರಪಂಚ ‘ನೆರೆಹೊರೆಯ ಸಂಬಂಧ’ (ಭಾಗ- ೩೪)
- ಅಂಗೈಯಲ್ಲಿ ಪ್ರಪಂಚ ‘ಅನ್ನದಾತೋ ಸುಖೀಭವ’ (ಭಾಗ- ೩೫)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಬಿರುಕು’ (ಭಾಗ- ೩೬)
- ಅಂಗೈಯಲ್ಲಿ ಪ್ರಪಂಚ ‘ನಾನು ಆಸ್ಪತ್ರೆ’ (ಭಾಗ- ೩೮)
- ಅಂಗೈಯಲ್ಲಿ ಪ್ರಪಂಚ ‘ಮಧ್ಯವರ್ತಿಗಳು’ (ಭಾಗ- ೩೯)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧ’ (ಭಾಗ- ೪೦)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಬೆಂಗ್ಳೂರು’ (ಭಾಗ- ೪೧)
- ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಕವಿಗಳು, ಬೆಂಗಳೂರು.
