ಯಾವಾಗಲೂ ಏನೋ ಬೇಜಾರು, ಏನು ಕೆಲಸ ಮಾಡಕ್ಕೂ ಬೇಜಾರು, ಎಲ್ಲಿ ಹೋಗಕ್ಕೂ ಬೇಜಾರು. ಹೀಗೆ ಹಲವಾರು ಕಾರಣಗಳಿಗೆ ಬೇಸರ, ಬೇಜಾರು ಅನ್ನುತ್ತಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಬೇಜಾರು ಅನ್ನುತ್ತಿರುತ್ತಾರೆ. ಏಕೆ ಬೇಸರ? ಅದು ಮನಸು ಆವರಿಸಲು ಕಾರಣವೇನು? ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಒಂದು ಪುಟ್ಟ ನಾಲ್ಕು ವರ್ಷದ ಹುಡುಗಿ ಆಟ ಆಡುವಾಗ, ನಂಗೆ ಬೇಜಾರು… ನಾನು ಆಟ ಆಡಲ್ಲ… ಎಂದು ಸುಮ್ಮನೆ ಕುಳಿತುಬಿಟ್ಟಳು. ನಾನು ಅದೇ ಸಮಯಕ್ಕೆ ಹೋಗಿ ಯಾಕೆ ಪುಟ್ಟಿ, ಹೋಗು ಆಟ ಆಡು ಅಂದೆ, ಇಲ್ಲ ನಂಗೆ ಬೇಜಾರು, ನಾನು ಆಡಲ್ಲ… ಎಂದು ಹೇಳಿ ಮುಖ ಸಪ್ಪಗೆ ಹಾಕಿ ಕುಳಿತಳು. ನಾನು ಆ ಬೇಜಾರು ಎಲ್ಲಿಂದ ಬರುತ್ತೆ ಹೇಳು ಎಂದೆ… ಜೋರಾಗಿ ನಕ್ಕುಬಿಟ್ಟಳು. ಅದು ತಲೆ ಒಳಗೆ ಇರುತ್ತೆ ಅವಾಗವಾಗ ಬೇಜಾರಾಗುತ್ತೆ ಎಂದು ತನ್ನ ಮುಗ್ಧತೆ ತೋರಿಸಿದಳು. ನಾನು ನಕ್ಕು ಸುಮ್ಮನಾದೆ.
ಕೆಲವರು ಯಾವಾಗಲೂ ಏನೋ ಬೇಜಾರು, ಯಾಕೋ ಬೇಜಾರು, ಏನು ಕೆಲಸ ಮಾಡಕ್ಕೂ ಬೇಜಾರು, ಎಲ್ಲಿ ಹೋಗಕ್ಕೂ ಬೇಜಾರು. ಹೀಗೆ ಹಲವಾರು ಕಾರಣಗಳಿಗೆ ಬೇಸರ, ಬೇಜಾರು ಅನ್ನುತ್ತಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಬೇಜಾರು ಅನ್ನುತ್ತಿರುತ್ತಾರೆ. ಏಕೆ ಬೇಸರ? ಅದು ಮನಸು ಆವರಿಸಲು ಕಾರಣವೇನು?

ಫೋಟೋ ಕೃಪೆ : ಅಂತರ್ಜಾಲ ಪತ್ರಿಕೆ
ಸಾಮಾನ್ಯವಾಗಿ ಬೇಸರ ಮೂಡುವ ಪ್ರಮುಖ ಕಾರಣಗಳು :
- ಆಸಕ್ತಿಯ ಕೊರತೆ: ನಾವು ಮಾಡುವ ಕೆಲಸದಲ್ಲಿ ಆಸಕ್ತಿ ಇಲ್ಲದಿದ್ದಾಗ ಬೇಸರ ಉಂಟಾಗುತ್ತದೆ.
- ಯೋಜನೆ ಅಥವಾ ಗುರಿಯ ಕೊರತೆ: ಗುರಿಯಿಲ್ಲದ ಜೀವನ ಅಥವಾ ದಿನಚರಿ ಯೋಜನೆಯ ಖಾಲಿತನ ಮತ್ತು ನಿರರ್ಥಕತೆಯನ್ನು ಉಂಟುಮಾಡಬಹುದು.
- ಏಕತಾನತೆ (monotony): ಒಂದೇ ರೀತಿ ಪುನರಾವರ್ತನೆ ಆಗುವ ಕೆಲಸಗಳು ಬೇಸರಕ್ಕೆ ಕಾರಣವಾಗಬಹುದು.
- ಮಾನಸಿಕ ಉತ್ತೇಜನೆಯ ಕೊರತೆ: ಮಾನಸಿಕವಾಗಿ ಸವಾಲು ಅಥವಾ ಹೊಸ ಕಲಿಕೆಯ ಕೊರತೆ ಇರುತ್ತದಾದರೆ ಮನಸ್ಸು ಉತ್ಸಾಹವಿಲ್ಲದಂತೆ ಅನಿಸುತ್ತದೆ.
- ಸಾಮಾಜಿಕ ಸಂಪರ್ಕದ ಕೊರತೆ: ಮನಃಸ್ಥಿತಿಗೆ ಪ್ರೇರಣೆ ನೀಡುವ, ಜನರಲ್ಲಿ ಬೆರೆಯುವ ಹೊಸತನ ಕಲಿಯುವ ಅಥವಾ ಹಂಚಿಕೊಳ್ಳುವ ಅವಕಾಶಗಳು ಇಲ್ಲದಿದ್ದರೆ ಬೇಸರ ಹೆಚ್ಚಾಗಬಹುದು.
- ಆಳವಾದ ಚಿಂತನೆ ಅಥವಾ ಆತ್ಮಪರಿಶೀಲನೆಯ ಸಮಯ: ಕೆಲವೊಮ್ಮೆ, ನಾವು ನಿಜವಾಗಿಯೂ ಏನು ಬೇಕು ಎನ್ನುವ ವಿಷಯದ ಕುರಿತು ಸ್ಪಷ್ಟತೆ ಇಲ್ಲದಿದ್ದಾಗ, ಅದು ಕೂಡ ಬೇಸರವನ್ನಾಗಿ ಅನಿಸಬಹುದು.
ಬೇಸರವನ್ನು ಹೋಗಲಾಡಿಸಲು ಕೆಲವು ಪರಿಣಾಮಕಾರಿ ವಿಧಾನಗಳನ್ನು ಇಲ್ಲಿ ನೀಡಲಾಗಿದೆ:
- ಹೊಸದೇನಾದರೂ ಕಲಿಯುವ ಪ್ರಯತ್ನ: ಹೊಸ ಹವ್ಯಾಸ ಅಥವಾ ಕೌಶಲ್ಯ ( ಬರಹ, ಸಂಗೀತ, ಹೊಸ ಭಾಷೆ, ಅಡುಗೆ) ಕಲಿಯಲು ಪ್ರಯತ್ನಿಸಬೇಕು. ಅದು ಮನಸ್ಸನ್ನು ಸಂತೋಷದಿಂದ ಇಡಲು ಪ್ರಯತ್ನ ಮಾಡುತ್ತದೆ.
- ದಿನಚರಿಯಲ್ಲಿ ಬದಲಾವಣೆ : ಪ್ರತಿದಿನವೂ ಒಂದೇ ರೀತಿಯ ಚಟುವಟಿಕೆ ಮಾಡಿದರೆ ಬೇಸರ ಮೂಡುತ್ತದೆ. ಕೆಲವೊಮ್ಮೆ ಸ್ಥಳ ಬದಲಾವಣೆ ಅಥವಾ ದಿನಚರಿಯಲ್ಲಿ ಚಿಕ್ಕ ಬದಲಾವಣೆಗೂ ಸಹ ತಾಜಾತನ ತರಬಹುದು.
- ಉದ್ಯಮ ಅಥವಾ ಸೃಜನಶೀಲತೆ: ಬರಹ, ಚಿತ್ರಕಲೆ, ಹಾಡು, ನೃತ್ಯ ಇತ್ಯಾದಿ ಮೂಲಕ ನಿಮ್ಮಲ್ಲಿರುವ ಸೃಜನಾತ್ಮಕತೆಯನ್ನು ವ್ಯಕ್ತಪಡಿಸಿ. ಅದು ಅಂತರಂಗದ ತೃಪ್ತಿಯನ್ನು ತರುತ್ತದೆ.
- ವ್ಯಾಯಾಮ: ನಿತ್ಯ ವ್ಯಾಯಾಮ, ಯೋಗ, ಧ್ಯಾನ ಮಾಡುವುದರಿಂದ ದೈಹಿಕವೂ ಮತ್ತು ಮಾನಸಿಕವೂ ಉತ್ಸಾಹ ಬರುವುದು. ಅದು ಬೇಸರವನ್ನು ತಡೆಯುವ ಶಕ್ತಿಯೂ ಕೊಡುತ್ತದೆ.
- ಸಮಯ ನಿಗದಿ: ನಿರ್ದಿಷ್ಟ ಗುರಿಗಳೊಂದಿಗೆ ಸಮಯವನ್ನು ಯೋಜಿಸುವುದು, ದಿನದಲ್ಲಿ ಉತ್ಸಾಹ ಉಳಿಸುವಲ್ಲಿ ಸಹಾಯಮಾಡುತ್ತದೆ.
- ಮಿತ್ರರೊಂದಿಗೆ ಮಾತನಾಡುವುದು: ಒಬ್ಬರೇ ಇದ್ದಾಗ ಬೇಸರ ಹೆಚ್ಚಾಗಬಹುದು. ಸ್ನೇಹಿತರೊಂದಿಗೆ ಕಾಲ ಕಳೆಯುವುದು ಅಥವಾ ಅವರೊಂದಿಗೆ ಮಾತಾಡುವುದು ಸಹ ಚೇತನ ನೀಡಬಹುದು.

ಫೋಟೋ ಕೃಪೆ : ಅಂತರ್ಜಾಲ ಪತ್ರಿಕೆ
ಸ್ವಯಂ ಪರಿಶೀಲನೆ (self-reflection): ಈ ಬೇಸರದ ಹಿಂದೆ ಯಾವುದಾದರೂ ಆಂತರಿಕ ಕಾರಣವಿದೆಯಾ ಎಂದು ನೋಡುವುದು. ಕೆಲವೊಮ್ಮೆ ಅದು ಗುರಿಯ ದಿಕ್ಕಿನ ಹುಡುಕಾಟವಾಗಿರಬಹುದು. ಇದರ ಕುರಿತು ಯೋಚಿಸಿ ಯೋಜನೆ ಕೈಗೊಳ್ಳುವುದು ಸಹ ಬೇಸರ ದೂರ ಮಾಡುತ್ತದೆ.
ಒಂದು ಸರಳ ಮತ್ತು ಪರಿಣಾಮಕಾರಿಯಾದ ದಿನಚರಿಯು ಬೇಸರ ತಗ್ಗಿಸಲು ಹಾಗೂ ದಿನದ ಉತ್ಸಾಹ ಹೆಚ್ಚಿಸಲು ಕೆಲವು ನಿಯಮಗಳನ್ನು ಅಳವಡಿಸಿಕೊಳ್ಳಬಹುದು. ಬೆಳಿಗ್ಗೆ ಎದ್ದ ಕೂಡಲೇ ಒಂದು ಅನುಕೂಲವಾಗುವ ಸಮಯ ನಿರ್ಧರಿಸಿಕೊಂಡು ಹಗಲಿನ ಶಾಂತಿಯುತ ಆರಂಭ ಮಾಡಿಕೊಳ್ಳಬಹುದು. ಹಕ್ಕಿಗಳ ಕಲರವ ಕೇಳಿಸಿಕೊಂಡು ಒಂದು ಲೋಟ ತಾಜಾ ಚಹಾ / ಕಾಫಿಯ ಸ್ವಾದ ಜೊತೆಗೆ ಐದು ನಿಮಿಷಗಳ ಧ್ಯಾನ ಅಥವಾ ಶ್ವಾಸಾಭ್ಯಾಸ ಮಾಡಬಹುದು. ಲಘು ವ್ಯಾಯಾಮ – ನಡಿಗೆ, ಯೋಗ ಅಥವಾ ಬೆಳಗಿನ ಸರಳ ಸ್ಟ್ರೆಚಿಂಗ್. ಸ್ನಾನ ಮತ್ತು ಅಂದಿನ ದಿನದ ದಿನಚರಿಯ ಯೋಜನೆ ಮಾಡುವುದು.
ವಿರಾಮದ ಸಮಯದಲ್ಲಿ ಯಾವುದಾದರೂ ಹೊಸದು ಕಲಿಯುವ ಹವ್ಯಾಸ (ಕಿತ್ತಲೆ ಬರೆಯುವುದು, ಗಿಟಾರ್, ಅನ್ಯ ಭಾಷೆಯ ಕಲಿಕೆ, ಸಾಹಿತ್ಯ, ಇತ್ಯಾದಿ) ಬೆಳೆಸಿಕೊಳ್ಳಬಹುದು. ಹಗುರವಾದ, ಆರೋಗ್ಯಕರ ಅಹಾರ ಸೇವನೆ. ಸಾಧ್ಯವಾದರೆ ಹೊಸ ತಿನಿಸುಗಳನ್ನು ತಯಾರಿಸುವ ಪ್ರಯತ್ನ ಮಾಡಬಹುದು. ಬರಹ, ಚಿತ್ರಕಲೆ, ಹಾಡು, ಕವಿತೆ, ಅಥವಾ ನಿಮ್ಮದ್ದೇ ಆದ ಚಿಕ್ಕ ಹೂತೋಟದ ಕೆಲಸ ಎಲ್ಲವೂ ಮನಸು ಉಲ್ಲಾಸಗೋಳಿಸುತ್ತದೆ. ಕೆಲವೊಮ್ಮೆ ಪ್ರೀತಿ ಪಾತ್ರದವರೊಂದಿಗೆ ಮಾತು ಕಥೆ ಬೇಸರ ನೀಗಿಸುತ್ತದೆ.
ರಾತ್ರಿ ಮಲಗುವ ಮುನ್ನ ಬೆಳಿಗಿನಿಂದ ಮಾಡಿದ ಕೆಲಸಗಳು ಮಾಡಿದ್ದು, ಅದರಲ್ಲಿ ಏನು ಇಷ್ಟವಾಯ್ತು, ಏನು ಬದಲಾಯಿಸಬಹುದು ಎಂಬುದನ್ನು ಡೈರಿಯಲ್ಲಿ ಬರೆದುಕೊಂಡು ಮರುದಿನದಿಂದ ತಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳಬಹುದು.
- ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಮಾನಸ….ಇದು ಮನಸಿನ ಮಾತು (ಭಾಗ-೨೫)
- ಮಾನಸ….ಇದು ಮನಸಿನ ಮಾತು (ಭಾಗ-೨೬)
- ಮಾನಸ….ಇದು ಮನಸಿನ ಮಾತು (ಭಾಗ-೨೭)
- ಮಾನಸ….ಇದು ಮನಸಿನ ಮಾತು (ಭಾಗ-೨೮)
- ಮಾನಸ….ಇದು ಮನಸಿನ ಮಾತು (ಭಾಗ-೨೯)
- ಮಾನಸ….ಇದು ಮನಸಿನ ಮಾತು (ಭಾಗ-೩೦)
- ಮಾನಸ….ಇದು ಮನಸಿನ ಮಾತು (ಭಾಗ-೩೧)
- ಮಾನಸ….ಇದು ಮನಸಿನ ಮಾತು (ಭಾಗ-೩೨)
- ಮಾನಸ….ಇದು ಮನಸಿನ ಮಾತು (ಭಾಗ-೩೩)
- ಮಾನಸ….ಇದು ಮನಸಿನ ಮಾತು (ಭಾಗ-೩೪)
- ಮಾನಸ….ಇದು ಮನಸಿನ ಮಾತು (ಭಾಗ-೩೫)
- ಮಾನಸ….ಇದು ಮನಸಿನ ಮಾತು (ಭಾಗ-೩೬)
- ಮಾನಸ….ಇದು ಮನಸಿನ ಮಾತು (ಭಾಗ-೩೭)
- ಮಾನಸ….ಇದು ಮನಸಿನ ಮಾತು (ಭಾಗ-೩೮)
- ಮಾನಸ….ಇದು ಮನಸಿನ ಮಾತು (ಭಾಗ-೩೯)
- ಮಾನಸ….ಇದು ಮನಸಿನ ಮಾತು (ಭಾಗ-೪೦)
- ಮಾನಸ….ಇದು ಮನಸಿನ ಮಾತು (ಭಾಗ-೪೧)
- ಮಾನಸ….ಇದು ಮನಸಿನ ಮಾತು (ಭಾಗ-೪೨)
- ಮಾನಸ….ಇದು ಮನಸಿನ ಮಾತು (ಭಾಗ-೪೩)
- ಮಾನಸ….ಇದು ಮನಸಿನ ಮಾತು (ಭಾಗ-೪೪)
- ಮಾನಸ….ಇದು ಮನಸಿನ ಮಾತು (ಭಾಗ-೪೫)
- ಮಾನಸ….ಇದು ಮನಸಿನ ಮಾತು (ಭಾಗ-೪೬)
- ಮಾನಸ….ಇದು ಮನಸಿನ ಮಾತು (ಭಾಗ-೪೭)
- ಮಾನಸ….ಇದು ಮನಸಿನ ಮಾತು (ಭಾಗ-೪೮)
- ಮಾನಸ….ಇದು ಮನಸಿನ ಮಾತು (ಭಾಗ-೪೯)
- ಮಾನಸ….ಇದು ಮನಸಿನ ಮಾತು (ಭಾಗ-೫೦)
- ಮಾನಸ….ಇದು ಮನಸಿನ ಮಾತು (ಭಾಗ-೫೧)
- ಮಾನಸ….ಇದು ಮನಸಿನ ಮಾತು (ಭಾಗ-೫೨)
- ಚಂಪಾ ಚೀನಿವಾರ್ – ಆಪ್ತಸಾಮಾಲೋಚಕಿ
